ಬೆಂಗಳೂರು : ಎರಡನೇ ಅಲೆಯ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗುತ್ತಿದ್ದು, ಇದೀಗ ಕೊರೊನಾಗೆ ಪುಟ್ಟ-ಪುಟ್ಟ ಕಂದಮ್ಮಗಳು ಟಾರ್ಗೆಟ್ ಆಗುತ್ತಿವೆ. ಮಕ್ಕಳಿಗೆ ಸೋಂಕು ಹರಡುತ್ತಿರುವುದಕ್ಕೆ ಆ ಮನೆಯ ಸದಸ್ಯರೇ ಕಾರಣಕರ್ತರಾಗಿದ್ದಾರೆ.
ರಾಜ್ಯದಲ್ಲಿ ಕೇವಲ ಹತ್ತು ದಿನಗಳಲ್ಲಿ 6,480 ಮಕ್ಕಳು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಶೇ.90ರಷ್ಟು ಮಕ್ಕಳು ಸೋಂಕಿತರ ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕಿತರಾಗಿದ್ದಾರೆ.
ಹೀಗಾಗಿ, ಕುಟುಂಬದಲ್ಲಿ ಯಾರಿಗೆ ಸೋಂಕಿನ ಲಕ್ಷಣಗಳು ಕಂಡು ಬಂದರೆ ಮಕ್ಕಳಿಂದ ದೂರ ಇರಿ ಮತ್ತು ತಕ್ಷಣವೆ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ಮಕ್ಕಳು ಸೋಂಕಿಗೆ ಗುರಿಯಾಗುತ್ತಾರೆ.
ಇನ್ನು, ಮೇ ತಿಂಗಳಲ್ಲಿ ಕೊರೊನಾ ಸೋಂಕಿಗೆ ಒಳಪಡುತ್ತಿರೋ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, 10 ವರ್ಷದೊಳಗಿನ ಮಕ್ಕಳು ಸೋಂಕಿತರಾಗುತ್ತಿದ್ದಾರೆ. ಪ್ರತಿದಿನ ಕೊರೊನಾ ಸೋಂಕಿಗೆ 600 ರಿಂದ 700 ಮಕ್ಕಳು ಗುರಿಯಾಗುತ್ತಿದ್ದಾರೆ.
ದಿನಾಂಕ ಮತ್ತು ಸೋಂಕಿಗೆ ಒಳಗಾದ ಮಕ್ಕಳ ಸಂಖ್ಯೆ
ಮೇ 1 - 559, ಮೇ 2- 640, ಮೇ 3- 662, ಮೇ 4- 644, ಮೇ 5- 715, ಮೇ 6- 678, ಮೇ 7- 681, ಮೇ 8 - 682,
ಮೇ 9- 698, ಮೇ 10 -521