ETV Bharat / city

ಕೋವಿಡ್ ಅನುದಾನ ಬಿಡುಗಡೆ ಮಾಡುವಂತೆ ಪಾಲಿಕೆ ಸದಸ್ಯರಿಂದ ಒತ್ತಾಯ

ಬಿಬಿಎಂಪಿ ಸದಸ್ಯರದ ಅಧಿಕಾರಾವಧಿ ಮುಗಿಯಲು ಒಂದು ತಿಂಗಳು ಮಾತ್ರ ಬಾಕಿ ಇರುವ ಹಿನ್ನೆಲೆ, ಇಂದು ಕೌನ್ಸಿಲ್​ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮೀಸಲಿಟ್ಟಿರುವ ಕೋವಿಡ್ ಅನುದಾನ ಮತ್ತು ಕಾರ್ಪೋರೇಟರ್ ವಿವೇಚನೆಯ ಮೆಡಿಕಲ್ ಫಂಡ್​​ನ್ನು ಬಿಡುಗಡೆ ಮಾಡುವಂತೆ ಸದಸ್ಯರು ಆಗ್ರಹಿಸಿದರು.

covid-grant-release-to-bbmp-ward-members
ಬಿಬಿಎಂಪಿ ಕೌನ್ಸಿಲ್​ ಸಭೆ
author img

By

Published : Aug 4, 2020, 8:35 PM IST

ಬೆಂಗಳೂರು: ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿಯಲು ಒಂದು ತಿಂಗಳು ಮಾತ್ರ ಬಾಕಿ ಇರುವ ಹಿನ್ನೆಲೆ, ವಾರ್ಡ್​ಗೆ ಮೀಸಲಿಟ್ಟಿರುವ ಕೋವಿಡ್ ಅನುದಾನ 20 ಲಕ್ಷ ಹಾಗೂ ಕಾರ್ಪೋರೇಟರ್ ವಿವೇಚನೆಯ ಮೆಡಿಕಲ್ ಫಂಡ್ 10 ಲಕ್ಷ ರೂ. ಬಿಡುಗಡೆ ಮಾಡುವಂತೆ ಕೌನ್ಸಿಲ್ ಸಭೆಯಲ್ಲಿ ಆಯುಕ್ತರನ್ನು ಒತ್ತಾಯಿಸಲಾಯಿತು.

ಅಲ್ಲದೆ 15ನೇ ಹಣಕಾಸು ಯೋಜನೆಯ ಹಣವನ್ನು ಅಭಿವೃದ್ಧಿ ಕೆಲಸಕ್ಕೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, ಇಂದು ಇದರ ಅರ್ಧ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಮುಂದೆ ಪಾಲಿಕೆಯ ಆರ್ಥಿಕ ಸ್ಥಿತಿ ನೋಡಿಕೊಂಡು ಬಿಡುಗಡೆ ಮಾಡಲಾಗುವುದು ಎಂದರು.

ಬಿಬಿಎಂಪಿ ಕೌನ್ಸಿಲ್​ ಸಭೆ

ಕೋವಿಡ್ ಅನುದಾನವನ್ನು ಬೂತ್ ಲೆವೆಲ್ ಸ್ವಯಂಸೇವಕರಿಗೆ ಮಾಸ್ಕ್, ಗ್ಲೌಸ್, ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್, ಫೇಸ್ ಮಾಸ್ಕ್, ಸ್ಯಾನಿಟೈಸರ್ ಕೊಡಿಸಲು ವೆಚ್ಚ ಮಾಡಿ ಎಂದು ಸಲಹೆ ನೀಡಿದರು. ಇನ್ನು ಹೋಮ್​​ ಐಸೋಲೇಷನ್​ನಲ್ಲಿರುವವರಿಗೆ 6 ಸಾವಿರ ಪಲ್ಸ್ ಆಕ್ಸಿಮೀಟರ್​ಗಳನ್ನು ಅಜೀಂ ಪ್ರೇಮ್ ಜೀ ಸಂಸ್ಥೆ ವಿತರಿಸುತ್ತದೆ. ಹೋಂ ಐಸೋಲೇಷನ್ ಕಿಟ್ ಕೊಡಲು ಟಾಟಾ ಸಂಸ್ಥೆ ಮುಂದೆ ಬಂದಿದೆ. ಪ್ರತಿಯೊಂದರ ಖರೀದಿ ಪಾರದರ್ಶಕವಾಗಿರಲಿದ್ದು, ಎಲ್ಲವೂ ವೆಬ್​ಸೈಟ್​ನಲ್ಲಿ ಅಪ್ಲೋಡ್ ಆಗಲಿದೆ ಎಂದರು.

ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಡಾ.ರಾಜ್ ಕುಮಾರ್ ಮೆಟ್ರೋ ನಿಲ್ದಾಣ‌ ಎಂದು ನಾಮಕರಣ ಮಾಡುವಂತೆ ಪಾಲಿಕೆ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಕಳಿಸಿದೆ. ನಗರದ ಕೆರೆ ಸಂರಕ್ಷಣೆ, ಹೂಳು ತೆಗೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಒತ್ತಾಯಿಸಿದರು.

ಬಿಬಿಎಂಪಿಗೆ ಇಬ್ಬರು ಹೊಸ ಅಧಿಕಾರಿಗಳ ನೇಮಕವಾಗಿದ್ದು, ಮನೋಜ್ ಜೈನ್ - ವಿಶೇಷ ಆಯುಕ್ತರು ಯೋಜನೆ ಹಾಗೂ ರಾಜೇಂದ್ರ ಚೋಳನ್ - ಹಣಕಾಸು ಹಾಗೂ ಐಟಿಐ ವಿಶೇಷ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.

ಪಶ್ಚಿಮ ವಿಭಾಗಕ್ಕೆ ಮನೋರಂಜನ್ ಹೆಗಡೆಯವರನ್ನೇ ಮತ್ತೆ ಆರೋಗ್ಯ ಅಧಿಕಾರಿಯಾಗಿ ನೇಮಕ ಮಾಡುವಂತೆ ಆ ವಿಭಾಗದ ಪಾಲಿಕೆ ಸದಸ್ಯರು ಒತ್ತಾಯ ಮಾಡಿದರು. ಇನ್ನು ನಾನ್ ಕೋವಿಡ್ ರೋಗಿಗಳು ಮೃತಪಟ್ಟರೇ ಕೆಲ ಆರೋಗ್ಯ ಅಧಿಕಾರಿಗಳು ಸರ್ಟಿಫಿಕೇಟ್ ನೀಡುತ್ತಿಲ್ಲ. ಡಾ.ಗಾಯತ್ರಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಸದಸ್ಯರು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.