ETV Bharat / city

ಪೂರ್ವ ವಲಯ ಆರೋಗ್ಯಾಧಿಕಾರಿಗಳ ಜೊತೆ ಕೋವಿಡ್ ನಿಯಂತ್ರಣ ಸಭೆ

author img

By

Published : Apr 11, 2021, 10:24 AM IST

ಬೆಂಗಳೂರು ದಕ್ಷಿಣ ವಲಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್​ಗುಪ್ತ ಅವರು ಪೂರ್ವ ವಯಲದ ಆರೋಗ್ಯಾಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಪೂರ್ವ ವಯಲದ ಆರೋಗ್ಯಾಧಿಕಾರಿಗಳ ಜೊತೆ  ಕೋವಿಡ್ ನಿಯಂತ್ರಣ ಸಭೆ

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪೂರ್ವ ವಯಲದ ಆರೋಗ್ಯಾಧಿಕಾರಿಗಳ ಜೊತೆ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಸಭೆ ನಡೆಸಿದರು.

ಬೆಂಗಳೂರು ದಕ್ಷಿಣ ವಲಯದಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿ 44 ವಾರ್ಡ್‌ಗಳಿದ್ದು, 23,89,785 ಜನರಿದ್ದಾರೆ. ಅಲ್ಲದೇ, ಪೂರ್ವ ವಲಯದಲ್ಲೇ ತೀವ್ರವಾಗಿ ಕೋವಿಡ್ ಹರಡುತ್ತಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಿದರು.

ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ​ಗುಪ್ತ ಮಾತನಾಡಿ, ಸಿಎಂ ಆದೇಶದಂತೆ ನೈಟ್ ಕರ್ಫ್ಯೂ ಜಾರಿಗೆ ನಾವು ಮತ್ತು ಪೊಲೀಸ್ ಇಲಾಖೆ ಸಜ್ಜುಗೊಂಡಿದ್ದೇವೆ‌. ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಇದು ಅಗತ್ಯ. ಪ್ರತಿ ವಾರ್ಡ್​ನಲ್ಲಿ ಎರಡು ಕೋವಿಡ್ ಕೇರ್ ಸೆಂಟರ್​ಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇವೆ‌. ಆದರೆ ಕೋವಿಡ್ ಪಾಸಿಟಿವ್ ಬಂದವರೆಲ್ಲಾ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ತಮ್ಮ ಮನೆಗಳಲ್ಲೇ ಅವರು ಕ್ವಾರಂಟೈನ್ ಆಗಬಹುದು. ಯಾರಿಗೆ ಸೌಲಭ್ಯ ಇಲ್ಲವೋ ಅವರು ಮಾತ್ರ ಕೋವಿಡ್ ಕೇರ್ ಸೆಂಟರ್​ಗಳಿಗೆ ಬರಬೇಕು. ಖಾಸಗಿ‌ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಭರ್ತಿಯಾಗಿವೆ. ಗುಣಮುಖರಾದವರು ಡಿಸ್ಚಾರ್ಜ್ ಆದ ನಂತರ ಖಾಲಿಯಾಗುವ ಬೆಡ್​ಗಳನ್ನು ಆದ್ಯತೆ ಮೇರೆಗೆ ಬಿಬಿಎಂಪಿಗೆ ಕೊಡಲು ವಿನಂತಿಸಿದ್ದೇವೆ. ಆದಷ್ಟು ಜನರು ಸಭೆ ಸಮಾರಂಭಗಳಿಂದ ದೂರ ಇರಬೇಕು. ಮಾಸ್ಕ್ ಧರಿಸುವುದು ಕಡ್ಡಾಯ, ಟೆಸ್ಟಿಂಗ್ ಹಾಗೂ ಲಸಿಕೆ ವಿತರಣೆಯನ್ನು ಬಿಬಿಎಂಪಿ ಪ್ರಮುಖವಾಗಿ ನಡೆಸುತ್ತಿದೆ ಎಂದರು.

ಸಚಿವ ಆರ್.ಅಶೋಕ್ ಮಾತನಾಡಿ, ಜನ ಭಯಪಡಬಾರದು. ಸೋಂಕಿತರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ, ಉತ್ತಮ ಚಿಕಿತ್ಸೆ ನೀಡಲಾಗುವುದು. ಹೋಂ ಐಸೋಲೇಶನ್ ಆದವರಿಗೆ ಸೀಲ್ ಹಾಕಬೇಕಾ? ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ. ಪ್ರತಿಯೊಂದನ್ನು ವಿರೋಧ ಮಾಡುವ ಪ್ರತಿಪಕ್ಷಗಳು ನೈಟ್ ಕರ್ಫ್ಯೂಗೆ ಕೂಡ ವಿರೋಧ ವ್ಯಕ್ತಪಡಿಸುತ್ತಿವೆ. ಮಹಾರಾಷ್ಟ್ರದಲ್ಲಿ ಅವರದ್ದೇ ಸರ್ಕಾರ ಇದೆ, ಲಾಕ್​ಡೌನ್ ಏಕೆ ಹೇರಿದ್ದಾರೆ. ಇದು ಪ್ರತಿಪಕ್ಷಗಳ ಕಣ್ಣಿಗೆ ಕಾಣ್ತಿಲ್ಲ ಎಂದರು.

ಸಾರಿಗೆ ನೌಕರರ ಮುಷ್ಕರ ಕುರಿತು ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರು ನಮ್ಮ ನೌಕರರಾಗಿ ಬಂದರೆ ಅವರ ಜತೆ ಮಾತುಕತೆ ನಡೆಸಲು ಸರ್ಕಾರ ಸದಾ ಸಿದ್ಧವಿದೆ. ಆದರೆ ಸಾರಿಗೆ ಇಲಾಖೆಯ ಜತೆ ಸಂಬಂಧವೇ ಇಲ್ಲದ ಯಾರೋ ವ್ಯಕ್ತಿಗಳನ್ನು ಮುಂದಿಟ್ಟುಕೊಂಡಿರುವುದೇ ಸಮಸ್ಯೆಗೆ ಕಾರಣ. ಸಾರಿಗೆ ಸಂಸ್ಥೆ ಈಗಾಗಲೇ ಮುಳುಗುವ ಹಡಗಾಗಿದೆ. ಈಗ ಮುಷ್ಕರ ಮಾಡಿ ಅದನ್ನು ಪೂರ್ಣ‌ ಮುಳುಗಿಸಿ ದಿವಾಳಿ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಲಾಕ್​ಡೌನ್ ಹೇರಿಕೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ. 6 ತಿಂಗಳು ಕಲ್ಯಾಣ ಮಂಟಪ ಮುಚ್ಚಲು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ನೈಟ್ ಪಾರ್ಟಿಗಳು, ರಾತ್ರಿ ವೇಳೆ ರೆಸ್ಟೋರೆಂಟ್​ಗಳು ಭರ್ತಿಯಾಗಿರುತ್ತವೆ. ಇದರಿಂದ ಕೊರೊನಾ ತೀವ್ರವಾಗಿ ಹರಡುವ ಸಾಧ್ಯತೆಗಳಿರುತ್ತವೆ. ಅದನ್ನು ತಪ್ಪಿಸುವ ಸಲುವಾಗಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳು ಸರ್ವಪಕ್ಷದ ಸಭೆ ಕರೆಯುತ್ತಾರೆ. ಪ್ರತಿಪಕ್ಷದವರ ಸಲಹೆಗಳನ್ನು ಪಡೆಯುತ್ತೇವೆ ಎಂದು ತಿಳಿಸಿದರು.

ಸಂಸದ ತೇಜಸ್ವಿಸೂರ್ಯ ಮಾತನಾಡಿ, ನೈಟ್ ಕರ್ಫ್ಯೂ ಬಗ್ಗೆ ಗೊಂದಲಗಳು ಇರೋದು ನಿಜ‌. ನೈಟ್ ಕರ್ಫ್ಯೂ ಎಂಬ ಭಾವನೆ ಜನರಿಗೆ ಇರೋದು ನಿಜ. ಆದರೆ ಕೊರೊನಾ ವೈರಸ್ ಸೋಂಕಿನ ಬಗ್ಗೆ ಜನರಲ್ಲಿ ಉಡಾಫೆ ಭಾವನೆ ಬಂದಿದೆ. ಹಾಗಾಗಿ ಜನರಲ್ಲಿ ಅರಿವು ಮೂಡಿಸಲು ಪ್ರಾಯೋಗಿಕವಾಗಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸರ್ಕಾರದೊಂದಿಗೆ ನಾವೆಲ್ಲಾ ಕೈ ಜೋಡಿಸೋಣ ಎಂದು ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.