ETV Bharat / city

ಕಳ್ಳನಿಗೆ ಕೊರೊನಾ‌ ಸೋಂಕು: 48 ಗಂಟೆ ಸದಾಶಿವನಗರ ಪೊಲೀಸ್ ಠಾಣೆ ಸೀಲ್​ಡೌನ್​! - Sadashivanagar Police Station Seal Down

ಕಳ್ಳತನ‌ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದಂತೆ ಆತನನ್ನ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಸೋಂಕತನ ಪ್ರಾಥಮಿಕ‌ ಸಂಪರ್ಕದಲ್ಲಿದ್ದ ಸದಾಶಿವನಗರ ಠಾಣೆಯ ಇನ್ಸ್​ಸ್ಪೆಕ್ಟರ್ ಸೇರಿ ಹತ್ತು ಸಿಬ್ಬಂದಿಯನ್ನು ಹೋಮ್​ ಕ್ವಾರಂಟೈನ್​​ ಮಾಡಲಾಗಿದೆ.

Coroner Infects Thief..Sadashivanagar Police Station Seal Down for 48 Hours
ಕಳ್ಳನಿಗೆ ಕೊರೊನಾ‌ ಸೋಂಕು..48 ಗಂಟೆ ಕಾಲ ಸದಾಶಿವನಗರ ಪೊಲೀಸ್ ಠಾಣೆ ಸೀಲ್​ಡೌನ್​
author img

By

Published : Jul 2, 2020, 11:54 PM IST

ಬೆಂಗಳೂರು: ಕಳ್ಳತನ‌ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯಲ್ಲಿ ಕೊರೊನಾ ಸೋಂಕು ಪತ್ತೆ ಆಗುತ್ತಿದ್ದಂತೆ ಆತನನ್ನ ಕ್ವಾರಂಟೈನ್​ಗೆ ಒಳಪಡಿಸಲಾಗಿದ್ದು, ಸದಾಶಿವನಗರ ಠಾಣೆಯನ್ನು ಸ್ಯಾನಿಟೈಸ್ ಮಾಡಿ, 48 ಗಂಟೆಗಳ ಕಾಲ ಸೀಲ್​ಡೌನ್‌ ಮಾಡಲಾಗಿದೆ.

ಈತನ ಪ್ರಾಥಮಿಕ‌ ಸಂಪರ್ಕದಲ್ಲಿದ್ದ ಸದಾಶಿವನಗರದ ಇನ್ಸ್​ಸ್ಪೆಕ್ಟರ್ ಸೇರಿದಂತೆ ಹತ್ತು ಸಿಬ್ಬಂದಿಯನ್ನು ಹೋಮ್​ ಕ್ವಾರಂಟೈನ್​​ ಮಾಡಲಾಗಿದೆ. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ತಲೆ‌ಮರೆಸಿಕೊಂಡಿದ್ದ ಆರೋಪಿ, ಕೆಲ ದಿನಗಳ ಹಿಂದೆ ದೊಡ್ಡಬೊಮ್ಮಸಂದ್ರದಲ್ಲಿ ಬಂಧಿಸಲಾಗಿತ್ತು. ಬಂಧನದ ಬಳಿಕ ಆರೋಪಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು, ಈಗ ಬಂದ ವರದಿಯಲ್ಲಿ ಕೊರೊನಾ‌ ಪಾಸಿಟಿವ್ ಕಂಡು ಬಂದಿದೆ.

ನಗರ ಟ್ರಾಫಿಕ್ ಜಂಕ್ಷನ್​ನಲ್ಲಿ‌ ಕೆಲಸ ಮಾಡುತ್ತಿದ್ದ ಐವರು ಟ್ರಾಫಿಕ್ ಪೊಲೀಸರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಉಪ್ಪಾರಪೇಟೆ ಮತ್ತು ಕಾಮಾಕ್ಷಿಪಾಳ್ಯ ಟ್ರಾಫಿಕ್ ಠಾಣೆಯ ತಲಾ ಇಬ್ಬರು ಮತ್ತು ಕೆಎಸ್ ಲೇಔಟ್ ಟ್ರಾಫಿಕ್ ಠಾಣೆಯ ಓರ್ವ ಕಾನ್​ಸ್ಟೆಬಲ್​ಗೆ ಸೋಂಕು ದೃಢಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.