ETV Bharat / city

ಗುತ್ತಿಗೆ ಆಧಾರಿತ ಕೊರೊನಾ ವಾರಿಯರ್ಸ್ ಕೆಲಸದಿಂದ ವಜಾ: ಆರೋಗ್ಯ ಇಲಾಖೆ ವಿರುದ್ಧ ಪ್ರತಿಭಟನೆ

ಕೊರೊನಾ ಕಡಿಮೆ ಆಗುತ್ತಿದ್ದಂತೆ ಒಂದೂವರೆ ವರ್ಷ ಕೊರೊನಾ ರೋಗಿಗಳ ಸೇವೆ ಮಾಡಿದ ಕೊರೊನಾ ವಾರಿಯರ್ಸ್ ಬದುಕು ಬೀದಿಗೆ ಬಿದ್ದಿದೆ. ಹೀಗಾಗಿ ಗುತ್ತಿಗೆ ಆಧರಿತ ಕೊರೊನಾ ವಾರಿಯರ್ಸ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

protest in Bangalore
ಆರೋಗ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಆಧಾರಿತ ಕೊರೊನಾ ವಾರಿಯರ್ಸ್
author img

By

Published : Sep 22, 2021, 8:23 PM IST

ಬೆಂಗಳೂರು: ಕೋವಿಡ್​​ 3ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದರೂ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವರ್ತನೆ ತೋರುತ್ತಿದೆ. ಏಕಾಏಕಿ ಎಲ್ಲಾ ಗುತ್ತಿಗೆ ಆಧಾರಿತ ಕೊರೊನಾ ವಾರಿಯರ್ಸ್​ಗಳನ್ನು ಕರ್ತವ್ಯದಿಂದ ಕೈ ಬಿಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಕೊರೊನಾ ವಾರಿಯರ್ಸ್​ಗಳಾದ ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನೀಷಿಯನ್ಸ್, ಡಿ ಗ್ರೂಪ್ ನೌಕರರನ್ನು ಸೆಪ್ಟಂಬರ್ ಅಂತ್ಯಕ್ಕೆ ಕರ್ತವ್ಯದಿಂದ ಕೈ ಬಿಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಇಲಾಖೆಯ ನಡೆ ಖಂಡಿಸಿ ಕೊರೊನಾ ವಾರಿಯರ್ಸ್​ಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಆರೋಗ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಆಧಾರಿತ ಕೊರೊನಾ ವಾರಿಯರ್ಸ್

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ಕೋವಿಡ್​​ ಆಸ್ಪತ್ರೆಗಳಲ್ಲಿ, ವಾರ್ಡ್‌ಗಳಲ್ಲಿ ಕೆಲಸಕ್ಕೆ ಇಲಾಖೆ ನೇಮಕ ಮಾಡಿಕೊಂಡಿತ್ತು. ಆದರೆ ಸೋಂಕು ಕಡಿಮೆಯಾಗುತ್ತಿದ್ದಂತೆ ಒಂದೂವರೆ ವರ್ಷದವರೆಗೆ ಕೋವಿಡ್​​ ರೋಗಿಗಳ ಸೇವೆ ಮಾಡಿದ ಕೊರೊನಾ ವಾರಿಯರ್ಸ್​ಗಳನ್ನು ಕೈ ಬಿಡಲಾಗುತ್ತಿದ್ದು, ಅವರ ಬದುಕು ಬೀದಿಗೆ ಬಂದಿದೆ.

ಹೀಗಾಗಿ ಗುತ್ತಿಗೆ ಆಧಾರಿತ ಕೊರೊನಾ ವಾರಿಯರ್ಸ್ ತಮಗೆ ನ್ಯಾಯ ಒದಗಿಸುವಂತೆ ಆರೋಗ್ಯ ಇಲಾಖೆ ವಿರುದ್ಧ ನಗರದ ಮೌರ್ಯ ಸರ್ಕಲ್‌ನ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.