ಬೆಂಗಳೂರು: ನಗರದಲ್ಲಿ ಇಂದೂ ಕೂಡಾ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, 1439 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಸೋಂಕಿತರ ಸಂಖ್ಯೆ 3,40,075 ಕ್ಕೆ ಏರಿಕೆಯಾಗಿದೆ. ಇಂದು 5925 ಮಂದಿ ಗುಣಮುಖರಾಗಿದ್ದು, ಈವರೆಗೆ 3,10,088 ಮಂದಿ ಬಿಡುಗಡೆ ಹೊಂದಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 26,098 ಕ್ಕೆ ಇಳಿಕೆಯಾಗಿದೆ.
ಇಂದು 14 ಮಂದಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 3,888 ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 458 ಕ್ಕೆ ಏರಿಕೆಯಾಗಿದೆ.