ಬೆಂಗಳೂರು: ನಗರದಲ್ಲಿಂದು 1,333 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಬೊಮ್ಮನಹಳ್ಳಿಯಲ್ಲಿ 139, ದಾಸರಹಳ್ಳಿ 49, ಬೆಂಗಳೂರು ಪೂರ್ವ 130, ಮಹಾದೇವಪುರ 210, ಆರ್‌ಆರ್ ನಗರ 103, ಬೆಂಗಳೂರು ದಕ್ಷಿಣ 130, ಬೆಂಗಳೂರು ಪಶ್ಚಿಮ 99, ಯಲಹಂಕದಲ್ಲಿ 108 ಜನರಿಗೆ ಸೋಂಕು ತಗುಲಿದೆ.

ನಿನ್ನೆ ನಗರದಲ್ಲಿ 985 ಪ್ರಕರಣಗಳು ಪತ್ತೆಯಾಗಿತ್ತು. 16 ಮಂದಿ ಮೃತಪಟ್ಟಿದ್ದರು. ಈವರೆಗೆ 83,195 ಸಕ್ರಿಯ ಪ್ರಕರಣಗಳಿವೆ. ಜೂನ್ 14ರಂದು 68,286 ಜನರಿಗೆ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, 61,389 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ 2.79% ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 1.89% ಇದೆ.

ನಿನ್ನೆಯವರೆಗೂ (ಮಂಗಳವಾರ) ಒಟ್ಟು 16,459 ಹಾಸಿಗೆಗಳ ಪೈಕಿ 14,050 ಹಾಸಗೆಗಳು ಲಭ್ಯ ಇವೆ. ಐಸಿಯುನಲ್ಲಿ 270, ಐಸಿಯು ಮತ್ತು ವೆಂಟಿಲೇಟರ್ನಲ್ಲಿ 423, ಹೆಡಿಯುನಲ್ಲಿ 901 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Video: ತೀರಿ ಹೋದ ಮನೆಯೊಡತಿ; ಫೋಟೋ ನೋಡಿ ನಾಯಿಯ ರೋಧನ