ಬೆಂಗಳೂರು: ರಾಜ್ಯದಲ್ಲಿ ಒಂದು ಬಲಿ ಪಡೆದ ಕೊರೊನಾ ಭಯಕ್ಕೆ ಮುಂಜಾಗೃತ ಕ್ರಮವಾಗಿ ರಾಜ್ಯದಲ್ಲಿ ಒಂದು ವಾರ ಚಿತ್ರ ಮಂದಿರ, ಮಾಲ್ಗಳು ಸೇರಿದಂತೆ ಹಲವು ಸಾರ್ವಜನಿಕ ಜಾಗಗಳು ತೆರೆಯಲು ಸರ್ಕಾರ ನಿಷೇಧ ಹೇರಿದ್ದು, ಬುಕ್ ಮೈ ಶೋ ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.
ಆದರೆ ಸರ್ಕಾರದ ಆದೇಶದ ಮೇರೆಗೆ ಚಿತ್ರಮಂದಿರಗಳು ಬಾಗಿಲನ್ನು ಮುಚ್ಚಿರುತ್ತವೆ. ಹೀಗಾಗಿ ಬುಕ್ ಮಾಡಿದ ಟಿಕೆಟ್ ಹಣ ಹಿಂಪಡೆಯಬಹುದಾ ಎಂಬ ಸ್ಪಷ್ಟತೆಯನ್ನು ಇನ್ನೂ ಸಂಸ್ಥೆ ನೀಡಿಲ್ಲ. ಆದ್ದರಿಂದ ಟಿಕೆಟ್ ಬುಕ್ ಮಾಡುವುದನ್ನೇ ಬುಕ್ಕಿಂಗ್ ಸಂಸ್ಥೆಗಳು ನಿಲ್ಲಿಸಬೇಕಾಗಿದೆ.