ETV Bharat / city

ಕೊರೊನಾ ಅಟ್ಟಹಾಸ ಸಾಮಾನ್ಯ ವರ್ಗದ ಮೇಲೆ.. ಗಣ್ಯರ ಪಾಲು ಶೇ.1ರಷ್ಟೂ ಇಲ್ಲ - bangalore news

ರಾಜ್ಯದಲ್ಲಿ ಇಂದಿಗೂ ಸಹ ಕೆಳ ಹಾಗೂ ಕಾರ್ಮಿಕ ವರ್ಗಗಳನ್ನೇ ಮಹಾಮಾರಿ ಕೊರೊನಾ ಗುರಿಯಾಗಿಸಿಕೊಂಡಿದೆ. ಶ್ರೀಮಂತರ ಮನೆಗೆ ಕೆಲಸಕ್ಕೆ ತೆರಳುವವರಿಂದಾಗಿ ಒಂದಿಷ್ಟು ಬೆರಳೆಣಿಕೆಯಷ್ಟು ನಾಯಕರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇದು ಅತ್ಯಂತ ನಗಣ್ಯ ಪ್ರಮಾಣ. ಬೆರಳೆಣಿಕೆಯಷ್ಟು ಗಣ್ಯರಿಗೆ ಕೊರೊನಾ ವಕ್ಕರಿಸಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಸಾಮಾನ್ಯ ವರ್ಗದವರೇ ಕೊರೊನಾಗೆ ಬಲಿಯಾಗಿದ್ದಾರೆ.

Corona Attacks on the general category
ಕೊರೊನಾ ಅಟ್ಟಹಾಸ ಸಾಮಾನ್ಯ ವರ್ಗದ ಮೇಲೆ..ಗಣ್ಯರ ಪಾಲು ಶೇ.1ರಷ್ಟೂ ಇಲ್ಲ
author img

By

Published : Jul 19, 2020, 10:46 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಅಂದಾಜನ್ನೂ ಮೀರಿ ಸಾಗಿದೆ. ತಜ್ಞರ ಪ್ರಕಾರ ಈಗ ರೋಗ ಉತ್ತುಂಗದ ಹಂತದಲ್ಲಿದೆ. ಸಾಮಾನ್ಯ ನಾಗರಿಕರಿಂದ, ಸಮಾಜದ ವಿವಿಧ ಗಣ್ಯರವರೆಗೆ ಯಾರನ್ನೂ ಬಿಡದ ಕೋವಿಡ್ ಕೆಲವರ ಪ್ರಾಣಕ್ಕೂ ಎರವಾಗಿದೆ.

ಕೊರೊನಾ ಅಟ್ಟಹಾಸ ಸಾಮಾನ್ಯ ವರ್ಗದ ಮೇಲೆ..ಗಣ್ಯರ ಪಾಲು ಶೇ.1ರಷ್ಟೂ ಇಲ್ಲ

ರಾಜ್ಯದಲ್ಲಿ ಇಂದಿನ ಮಾಹಿತಿ ಪ್ರಕಾರ ಇದುವರೆಗೂ ಒಟ್ಟು 63,772 ಸೋಂಕಿತರಲ್ಲಿ 23,065 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 39,370 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1,331 ಮಂದಿ ಕೋವಿಡ್ ಹಾಗೂ 6 ಮಂದಿ ಕೋವಿಡ್ ಹಾಗೂ ಇತರ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ 579 ಮಂದಿ ಐಸಿಯುನಲ್ಲಿದ್ದಾರೆ.

ರಾಜ್ಯದಲ್ಲಿ ಸದ್ಯ ನಿತ್ಯ 4 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದ್ದು, ಬಹುತೇಕ ಅರ್ಧದಷ್ಟು ಪ್ರಕರಣ ರಾಜಧಾನಿ ಬೆಂಗಳೂರಿನದ್ದಾಗಿದೆ. ಮಾರ್ಚ್ 9ಕ್ಕೆ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಮಾ.24ರಿಂದ ಲಾಕ್​ಡೌನ್​ ಜಾರಿಗೊಳಿಸಲಾಯಿತು. ಆ ಸಮಯಕ್ಕೆ ರಾಜ್ಯದಲ್ಲಿ 24 ಪ್ರಕರಣ ಇದ್ದವು. ವಿದೇಶದಿಂದ ಬಂದವರು, ತಬ್ಲಿಗಿಗಳು, ಅಕ್ಕಪಕ್ಕದ ರಾಜ್ಯದಿಂದ ಬಂದವರಿಂದಾಗಿ ಪ್ರಕರಣ ಹೆಚ್ಚುತ್ತಾ ಸಾಗಿತು. ಬಹುತೇಕ ನಿಯಂತ್ರಣದಲ್ಲಿದ್ದ ರೋಗ, ಅನ್ಯರಾಜ್ಯದಿಂದ ಕಾರ್ಮಿಕರು ವಾಪಸ್ ಆಗುವ ಮೂಲಕ ಎಲ್ಲಾ ಜಿಲ್ಲೆಗಳಿಗೆ ವ್ಯಾಪಿಸಲು ಆರಂಭಿಸಿತು. ಮಾರ್ಚ್ 24ರಿಂದ ಜೂ.24ರ ನಡುವೆ ಇದ್ದದ್ದು ಕೇವಲ 10,118 ಪ್ರಕರಣಗಳು. ಅಲ್ಲದೇ, ಅಂದು 200-300 ಪ್ರಕರಣ ದಾಖಲಾಗುತ್ತಿದ್ದವು. ಆದರೆ, ಅಲ್ಲಿಂದ ನಿಧಾನವಾಗಿ ಹೆಚ್ಚಾದ ಪ್ರಕರಣಗಳು ಜೂ.27ರಿಂದ ಏರಿಕೆ ಕಾಣುತ್ತಲೇ ಸಾಗಿ, ಕೇವಲ 23 ದಿನಗಳಲ್ಲಿ 63 ಸಾವಿರದ ಗಡಿ ದಾಟಿದೆ. 11 ರಿಂದ 14ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ ನಾಲ್ಕನೇ ಸ್ಥಾನ ತಲುಪಿದೆ. ಅಲ್ಲಿಯವರೆಗೂ ಮಧ್ಯಮ, ಕೆಳಮಧ್ಯಮ, ಕಾರ್ಮಿಕ ವರ್ಗಗಳಲ್ಲಿ ಮಾತ್ರ ಸುತ್ತಾಡಿಕೊಂಡಿದ್ದ ಮಹಾಮಾರಿ ಮೇಲ್ವರ್ಗ ಹಾಗೂ ಗಣ್ಯರನ್ನೂ ತಲುಪಿದೆ.

ಶೇ.99 ಬಡವರನ್ನು ಕಾಡಿದೆ: ರಾಜ್ಯದಲ್ಲಿ ಇಂದಿಗೂ ಸಹ ಕೆಳ ಹಾಗೂ ಕಾರ್ಮಿಕ ವರ್ಗಗಳನ್ನೇ ಮಹಾಮಾರಿ ಗುರಿಯಾಗಿಸಿಕೊಂಡಿದೆ. ಶ್ರೀಮಂತರ ಮನೆಗೆ ಕೆಲಸಕ್ಕೆ ತೆರಳುವವರಿಂದಾಗಿ ಒಂದಿಷ್ಟು ಬೆರಳೆಣಿಕೆಯಷ್ಟು ನಾಯಕರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇದು ಅತ್ಯಂತ ನಗಣ್ಯ ಪ್ರಮಾಣ. ಬೇರೆ ರಾಜ್ಯದಿಂದ ಆಗಮಿಸಿದ ಕಾರ್ಮಿಕರಿಂದಾಗಿ ಇಡೀ ರಾಜ್ಯವೇ ಕೊರೊನಾಮಯವಾಗಿದೆ. ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕುಗಳಿಗೆ ತಲುಪಿರುವ ಮಾರಿ, ಗ್ರಾಮೀಣ ಪ್ರದೇಶಗಳನ್ನು ಕೂಡ ಬಿಟ್ಟಿಲ್ಲ. ಹಂತ ಹಂತವಾಗಿ ಲಾಕ್​ಡೌನ್​ ನಿಯಮ ಸಡಿಲಿಸುತ್ತಿದ್ದಂತೆ ಕೊರೊನಾ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಉತ್ತರ ಭಾರತದ ಕೆಲ ರಾಜ್ಯಗಳು ನಿಯಂತ್ರಣ ಸಾಧಿಸುವಲ್ಲಿ ಸಫಲವಾಗಿದ್ದು, ಕರ್ನಾಟಕದ ಪರಿಸ್ಥಿತಿ ದೇವರ ಮೇಲೆ ಎಂದು ಸಚಿವರೇ ಭಾರ ಹಾಕುವ ಹಂತ ತಲುಪಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪೀಡಿತರಲ್ಲಿ ಶೇ.99ರಷ್ಟು ಮಂದಿ ಬಡವರು ಎನ್ನುವುದು ಗಮನಾರ್ಹ.

ಗಣ್ಯರಿಗೆ ಕೊರೊನಾ: ಗಣ್ಯರ ವಿಚಾರಕ್ಕೆ ಬಂದರೆ ಚಿತ್ರರಂಗದ ಪ್ರಮುಖರು, ರಾಜಕೀಯ ನಾಯಕರು, ಸಮಾಜ ಸೇವಕರು, ಹಿರಿಯ ಅಧಿಕಾರಿಗಳಿಗೆ ಕೆಲವರಿಗೆ ಕೊರೊನಾ ಕಾಡಿದೆ. ಇವರಲ್ಲಿ ಪ್ರಮುಖರೆಂದರೆ ಬಿಜೆಪಿ ಸಚಿವ ಸಿ.ಟಿ. ರವಿ, ಎಂಎಲ್​ಸಿ ಎಂ.ಕೆ. ಪ್ರಾಣೇಶ್, ಮಾಜಿ ಉಪಸಭಾಪತಿ ಪುಟ್ಟಣ್ಣ, ಸಂಸದ ಭಗವಂತ ಖೂಬಾ, ಶಾಸಕರಾದ ಭರತ್ ಶೆಟ್ಟಿ, ರಾಜಕುಮಾರ್ ಪಾಟೀಲ್ ತೇಲ್ಕೂರ್, ಪರಣ್ಣ ಮನವಳ್ಳಿ, ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಪಕ್ಷೇತರ ಸಂಸದೆ ಸುಮಲತಾ, ಜೆಡಿಎಸ್ ನ ಎಂಎಲ್ ಸಿ ಬೋಜೇಗೌಡ, ಕಾಂಗ್ರೆಸ್ ಶಾಸಕರಾದ ಡಾ. ರಂಗನಾಥ್, ಎನ್. ಶಿವಣ್ಣ, ಡಾ. ಅಜಯ್ ಸಿಂಗ್, ಟಿಡಿ ರಾಜೇಗೌಡ, ಪ್ರಸಾದ್ ಅಬ್ಬಯ್ಯ, ಮಹಾಂತೇಶ ಕೌಜಲಗಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಚಿತ್ರರಂಗದ ಪ್ರಮುಖರಾದ ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್, ನಟ ಧ್ರುವ ಸರ್ಜಾ, ಹಿರಿಯ ನಟ ಹುಲಿವಾನ್ ಗಂಗಾಧರಯ್ಯ (ನಿಧನರಾಗಿದ್ದಾರೆ), ಅಧಿಕಾರಿಗಳಲ್ಲಿ ಗಮನಿಸುವುದಾದರೆ ಬಂದೀಖಾನೆ ಇಲಾಖೆಯ ಉಪ ಅಧೀಕ್ಷಕ ಸುರೇಶ್, ಬಂದೀಖಾನೆಯ ಇಲಾಖೆಯ ಡಿಐಜಿ ಆನಂದ ರೆಡ್ಡಿ, ಕೆಎಸ್ಆರ್​ಪಿ ಕಮಾಂಡ್ ಸೆಂಟರ್ ಡಿಸಿಪಿ ಅಜಯ್ ಹಿಲೋರಿ, ಕಾರ್ಪೋರೇಟರ್​​ಗಳಾದ ಇಮ್ರಾನ್ ಪಾಷಾ, ಕಟ್ಟೆ ಸತ್ಯನಾರಾಯಣ, ಮುಜಾಹಿದ್ ಪಾಷಾ, ಸೀಮಾ ಖಾನಂ ಅವರಿಗೆ ಕೊರೊನಾ ವಕ್ಕರಿಸಿತ್ತು.

ಒಟ್ಟಾರೆ ಬೆರಳೆಣಿಕೆಯಷ್ಟು ಗಣ್ಯರಿಗೆ ಕೊರೊನಾ ವಕ್ಕರಿಸಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಸಾಮಾನ್ಯ ವರ್ಗದವರೇ ಕೊರೊನಾಗೆ ಬಲಿಯಾಗಿದ್ದಾರೆ. ಒಂದಿಷ್ಟು ನಿರ್ಲಕ್ಷ್ಯ ತೋರಿದ ಹಿನ್ನೆಲೆ, ಕೆಲ ಜನಪ್ರತಿನಿಧಿಗಳು ಹಾಗೂ ಜನರ ನಡುವೆ ಬೆರೆತ ಹಿನ್ನೆಲೆ ಮತ್ತೆ ಕೆಲವರಿಗೆ ಕೊರೊನಾ ವಕ್ಕರಿಸಿದೆ. ಗಣ್ಯರಲ್ಲಿ ನಿಧನರಾಗುವ ಮಟ್ಟದ ಸಮಸ್ಯೆ, ಕಾಟ ಎಲ್ಲಿಯೂ ಆಗಿಲ್ಲ.

ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್ ಮಂಜುನಾಥ್ ಪ್ರಕಾರ, ರಾಜ್ಯದಲ್ಲಿ ದಾಖಲಾಗಿರುವ ಕೊರೊನಾ ಪ್ರಕರಣಗಳಲ್ಲಿ ಶೇ. 38 ಲಕ್ಷಣರಹಿತ ಕೇಸ್​ಗ​​ಳು. ಅಂದರೆ, ಸೋಂಕು ಇದ್ದರೂ ಅವರಿಗೆ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಒಂದು ತಿಂಗಳ ಹಿಂದೆ ಶೇ.2ರಷ್ಟು ಜನರಲ್ಲಿ ಮಾತ್ರ ಸೋಂಕಿನ ಲಕ್ಷಣಗಳು ಇರುತ್ತಿದ್ದವು. ಅದು ಕೂಡಾ ಅನ್ಯ ಕಾಯಿಲೆ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವವರಲ್ಲಿ ಮಾತ್ರ ಲಕ್ಷಣಗಳು ಕಾಣಿಸುತ್ತಿದ್ದವು. ಸಂಪರ್ಕದ ಆಧಾರದಲ್ಲಿ ಪರೀಕ್ಷೆ ನಡೆಸಿದವರಲ್ಲಿ ಹೆಚ್ಚಿನವರಿಗೆ ಸೋಂಕಿನ ಲಕ್ಷಣಗಳೇ ಇರಲಿಲ್ಲ. ಈ ನಡುವೆ, ಲಕ್ಷಣರಹಿತರೇ ಹೆಚ್ಚಾಗಿ ಸೋಂಕಿನ ಹರಡುವಿಕೆಯೂ ಹೆಚ್ಚಿರುವ ಸಾಧ್ಯತೆ ಇದೆ. ಕೆಮ್ಮು, ಜ್ವರ, ಗಂಟಲು ನೋವು, ಮೈಕೈ ನೋವು, ತಲೆ ನೋವು, ರುಚಿಸದಿರುವುದು, ವಾಸನೆ ಗ್ರಹಿಕೆ ಸಾಮರ್ಥ್ಯ ಕುಸಿತ, ಆಲಸ್ಯ ಸಹಿತ ಲಕ್ಷಣಗಳು ಕಂಡುಬಂದವರು ಮಾತ್ರ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಅವರಲ್ಲಿ ಪಾಸಿಟಿವ್ ಬರುವುದು ಹೆಚ್ಚುತ್ತಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.