ETV Bharat / city

ಕಾಂಗ್ರೆಸ್ ಅವಧಿಯಲ್ಲಿ ತಲೆ ಮೇಲೆ ಸಿಲಿಂಡರ್‌ ಹೊತ್ತಿದ್ದವರು ಈಗ ಎಲ್ಲಿದ್ದಾರೆ..? : ರಾಮಲಿಂಗಾರೆಡ್ಡಿ

ಕಾಂಗ್ರೆಸ್​ ಅವಧಿಯಲ್ಲಿ ಸಿಲಿಂಡರ್​ ಬೆಲೆ ಹೆಚ್ಚಾಗಿದ್ದಾಗ ತಲೆ ಮೇಲೆ ಸಿಲಿಂಡರ್​​ ಇಟ್ಟುಕೊಂಡು ಹೋರಾಟ ಮಾಡಿದ್ದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಸದ್ಯ ಎಲ್ಲಿದ್ದಾರೆ. ಎತ್ತಿನ ಗಾಡಿಯಲ್ಲಿ ಬಂದಿದ್ದ ಮಾಜಿ ಸಿಎಂ ಯಡಿಯೂರಪ್ಪ ಯಾಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಗುಡುಗಿದರು.

congress protest against cylinder rate hike
ಕಾಂಗ್ರೆಸ್​ ಪ್ರತಿಭಟನೆ
author img

By

Published : Aug 26, 2021, 3:28 PM IST

ಬೆಂಗಳೂರು: ಈ ಹಿಂದೆ ಗ್ಯಾಸ್​​ ಬೆಲೆ 400 ಕೂಡಾ ಮುಟ್ಟದೇ ಇದ್ದರೂ, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ತಲೆ ಮೇಲೆ ಸಿಲಿಂಡರ್​​ ಇಟ್ಟುಕೊಂಡು ಹೋರಾಟ ಮಾಡಿದ್ರು. ಯಡಿಯೂರಪ್ಪ ಎತ್ತಿನಗಾಡಿಯಲ್ಲಿ ಬಂದಿದ್ರು. ಸದ್ಯ LPG ಬೆಲೆ 900 ರೂ. ದಾಟಿದೆ. ಇವಾಗ ಎಲ್ಲರೂ ಎಲ್ಲಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು.

ಅಡುಗೆ ಅನಿಲ ಹೆಚ್ಚಳ ವಿರೋಧಿಸಿ ಕಾಂಗ್ರೆಸ್​ ಪ್ರತಿಭಟನೆ

ಬಿಬಿಎಂಪಿ ಆಸ್ತಿ‌ ತೆರಿಗೆ ವಿಚಾರದಲ್ಲಿ ವಲಯ ವರ್ಗೀಕರಣ ಮಾಡಿ, ಹೆಚ್ಚುವರಿ ತೆರಿಗೆ ಹೊರೆ ಹೊರೆಸಿದ್ದನ್ನು ವಿರೋಧಿಸಿ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಈ ನಿರ್ಧಾರ ಹಿಂತೆಗೆದುಕೊಳ್ಳಲು ಗಡುವು ನೀಡಲಾಗಿತ್ತು. ಆದರೆ ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಕಾಂಗ್ರೆಸ್ ಇಂದು ಬಿಬಿಎಂಪಿ ಮುತ್ತಿಗೆ ಹಾಕಿತು.

ಪ್ರತಿಭಟನೆ ಬಳಿಕ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, 85 ಸಾವಿರ ಆಸ್ತಿ ಹೊಂದಿರುವ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಒಟ್ಟು 360 ಕೋಟಿ ರೂ. ಹೆಚ್ಚುವರಿ ವಸೂಲಿಗೆ ಮುಂದಾಗಿದೆ. ಬಿಬಿಎಂಪಿ ಅಧಿಕಾರಿಗಳು 70 ಸಾವಿರ ಜನಕ್ಕೆ ನೋಟಿಸ್ ಕೊಟ್ಟಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಸರ್ಕಾರವೇ 2017 ರಲ್ಲಿ ಇದನ್ನು ಆರಂಭ ಮಾಡಿತು‌ ಎಂದರು.

ಪಾಲಿಕೆ ಈ ಕಾನೂನು ಹಿಂಪಡೆಯದಿದ್ದರೆ ಜನರು ಸಹಿಸುವುದಿಲ್ಲ. ಜನಪ್ರತಿನಿಧಿಗಳು ಇಲ್ಲದ ಸಮಯದಲ್ಲಿ, ಶಾಸಕರ ಸಭೆಯನ್ನೂ ಕರೆಯದೆ ಈ ರೀತಿ ಮಾಡಿರುವುದು ತಪ್ಪು ಎಂದು ಬಿಬಿಎಂಪಿ ವಿರುದ್ಧ ರಾಮಲಿಂಗಾರೆಡ್ಡಿ ಕಿಡಿಕಾರಿದರು.

'ಸ್ವೇಟರ್​' ಬಗ್ಗೆ ನನಗೆ ಮಾಹಿತಿ ಇಲ್ಲ

ಸ್ವೇಟರ್​ ಖರೀದಿ ಹಗರಣ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ‌ಆದ್ರೂ ಸ್ವೇಟರ್​ ಕೊಡದೆ ಹಣ ಬಿಡುಗಡೆ ಆಗಿದ್ದರೇ ಯಾರು ಹಣ ಬಿಡುಗಡೆ ಮಾಡಿದ್ರಿ ಆ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಗರಣದಲ್ಲಿ ಯಾರೇ ಭಾಗಿಯಾಗಿದ್ರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಶಾಮೀಲಾಗಿದ್ರು. ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.