ETV Bharat / city

3ನೇ ದಿನಕ್ಕೆ ಕಾಲಿಟ್ಟ ಕೈ ನಾಯಕರ ಅಹೋರಾತ್ರಿ ಧರಣಿ: ಮೇಕೆದಾಟು ಪಾದಯಾತ್ರೆ ಕುರಿತು ಡಿಕೆಶಿ ಹೇಳಿದ್ದೇನು? - ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಆಗ್ರಹ

ಸಚಿವ ಕೆ.ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಗುರುವಾರ ಸಂಜೆಯಿಂದ ಆರಂಭಿಸಿರುವ ಕಾಂಗ್ರೆಸ್ ನಾಯಕರ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಡಿಕೆಶಿ
ಡಿಕೆಶಿ
author img

By

Published : Feb 19, 2022, 11:03 AM IST

Updated : Feb 19, 2022, 12:12 PM IST

ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಉಭಯ ಸದನಗಳಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಗುರುವಾರ ಸಂಜೆಯಿಂದ ಅಹೋರಾತ್ರಿ ಧರಣಿ ಆರಂಭಿಸಿರುವ ಕಾಂಗ್ರೆಸ್ ನಾಯಕರು, ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ಧರಣಿ ಮುಂದುವರಿಸುತ್ತೇವೆ. ಸದನದ ಒಳಗೂ, ಹೊರಗೂ ಹೋರಾಟ ಕೈಗೊಳ್ಳುತ್ತೇವೆ ಎಂದಿದ್ದಾರೆ. ಸೋಮವಾರದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕರ್ತರ ಮೂಲಕ ಪ್ರತಿಭಟನೆ ನಡೆಸಲು ಸಹ ಪಕ್ಷ ನಿರ್ಧರಿಸಿದೆ.

ಸಚಿವ ಕೆ.ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಆಹೋರಾತ್ರಿ ಧರಣಿ ನಡೆಸಿ, ಎರಡನೇ ದಿನವನ್ನ ವಿಧಾನಸೌಧದಲ್ಲೇ ಕಳೆದಿದ್ದಾರೆ. ಇಂದು ಬೆಳಗ್ಗೆ ಎದ್ದು ಹಲವು ಸದಸ್ಯರು ತಮ್ಮ ನಿವಾಸಕ್ಕೆ ತೆರಳಿ ಕೆಲ ಸಮಯ ಬಿಟ್ಟು ವಾಪಸ್​ ಆಗಲು ತೀರ್ಮಾನಿಸಿ ತೆರಳಿದ್ದಾರೆ. ಮತ್ತೆ ಕೆಲವರು ವಿಧಾನಸೌಧದ ಆವರಣದಲ್ಲೇ ವಾಯುವಿಹಾರ ಮಾಡಿದ್ದಾರೆ.

ನಿನ್ನೆ ರಾತ್ರಿ ಉತ್ತಮ ಭೋಜನ ವ್ಯವಸ್ಥೆಯನ್ನು ಕಾಂಗ್ರೆಸ್ ಧರಣಿನಿರತರಿಗೆ ಮಾಡಲಾಗಿತ್ತು. ಇಂದು ಬೆಳಗ್ಗೆ ಕೆಲವರು ವಿಧಾನಸೌಧದಲ್ಲಿಯೇ ಉಪಹಾರ ಸೇವಿಸಿದರೆ ಮತ್ತೆ ಕೆಲವರು ತಮ್ಮ ನಿವಾಸದತ್ತ ತೆರಳಿದರು. ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಹಾಗೂ ನಗರದ ಶಾಸಕರು ತಮ್ಮ ನಿವಾಸಕ್ಕೆ ತೆರಳಿದ್ದರೆ, ಉಳಿದವರು ವಿಧಾನಸೌಧದಲ್ಲೇ ಉಳಿದುಕೊಂಡಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅಜಯ್ ಸಿಂಗ್, ಪರಮೇಶ್ವರ್, ಪ್ರಿಯಂಕ್​ ಖರ್ಗೆ ಸೇರಿದಂತೆ ಕೆಲ ನಾಯಕರು ಮನೆಗೆ ತೆರಳಿದ್ದಾರೆ. ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲವು ನಾಯಕರು ವಿಧಾನಸೌಧದ ಆವರಣದಲ್ಲಿ ವಾಕಿಂಗ್ ಮಾಡಿದ್ದಾರೆ.

ವಿಧಾನಸೌಧದಲ್ಲಿ ವಾಯುವಿಹಾರ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ

ವಿಧಾನಸೌಧದಲ್ಲಿ ವಾಯುವಿಹಾರ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ, ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳ ಕೆಲಸ ಮಾಡುತ್ತಿಲ್ಲ. ಅವರು ಸಹ ಪಕ್ಷದ ಕೈಗೊಂಬೆಯಾಗಿದ್ದಾರೆ. ಅವರಾದರೂ ಬ್ಯಾಲೆನ್ಸ್ ಆಗಿ ಇರ್ತಾರೆ ಅಂದುಕೊಂಡಿದ್ದೆ. ಅನಗತ್ಯವಾಗಿ ನಮ್ಮವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ನಮ್ಮ ಪಕ್ಷದವರು 15 ಜನರನ್ನು ಸೇರಿಸಿ ಪ್ರತಿಭಟನೆ ಮಾಡಿದರೆ ಕೇಸ್​ ದಾಖಲಿಸುತ್ತಾರೆ.

ನಾವು ಪಾದಯಾತ್ರೆ ಮಾಡಿದಾಗ ಕೇಸು ದಾಖಲಿಸಿದರು. ಆದರೆ, ಅವರು ಕಾರ್ಯಕ್ರಮ ಮಾಡಿ ಜನರನ್ನು ಸೇರಿಸಲ್ವಾ?, ನಿರಾಣಿ ಕಾರ್ಯಕ್ರಮಕ್ಕೆ ಎಷ್ಟೊಂದು ಜನ ಸೇರಿದ್ದರು. ಬೇರೆ ಕಡೆ ಜನರನ್ನು ಸೇರಿಸುತ್ತಿಲ್ವಾ?. ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಅದನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ಅಯೋಧ್ಯೆಯಲ್ಲಿ ರಾಜಕೀಯ ಸಂಘರ್ಷ: ಎಸ್‌ಪಿ - ಬಿಜೆಪಿ ಬೆಂಬಲಿಗರ ನಡುವೆ ಗುಂಡಿನ ಚಕಮಕಿ, ಕಲ್ಲು ತೂರಾಟ

ನಾವು ಧರಣಿ ಮುಂದುವರಿಸುತ್ತೇವೆ. ಪಾದಯಾತ್ರೆ ಇದೆ, ಅದಕ್ಕೆ ಸಜ್ಜಾಗಬೇಕಿದೆ. ಅದಕ್ಕಾಗಿ ಕೊಂಚ ಓಡಾಡಲು ಹೊರಗೆ ಬಂದಿದ್ದೇನೆ. ಕಬ್ಬನ್ ಪಾರ್ಕ್​ಗೆ ಹೋದರೆ ಅಲ್ಲಿ ಬಾಗಿಲು ಹಾಕಿತ್ತು. ರಾಜ್ಯ, ರಾಷ್ಟ್ರದ ಹಿತಕ್ಕಾಗಿ ಹೋರಾಡುತ್ತಿದ್ದೇವೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಹೋರಾಡುತ್ತಿದ್ದೇವೆ. ಈಶ್ವರಪ್ಪ ದೊಡ್ಡ ಸಾಧನೆ ಮಾಡಿದವರಂತೆ ಆಡುತ್ತಿದ್ದಾರೆ. ಅವರು ಸರಿಯಿಲ್ಲ ಎಂದು ಪ್ರತಿಭಟಿಸಲು ಹೋದವರ ವಿರುದ್ಧ ಕೇಸು ದಾಖಲಾಗುತ್ತಿದೆ ಎಂದರು.

ಸೋಮವಾರದಿಂದ ನಮ್ಮ ಹೋರಾಟ ರಾಜ್ಯಮಟ್ಟದಲ್ಲಿ ಆರಂಭವಾಗಲಿದೆ. ರಾಜ್ಯದೆಲ್ಲೆಡೆ ಕಾರ್ಯಕರ್ತರು ತಾಲೂಕು ಕೇಂದ್ರಕ್ಕೆ ತೆರಳಿ ಪ್ರತಿಭಟನೆ ನಡೆಸಿ ಈಶ್ವರಪ್ಪ ವಜಾಗೆ ಆಗ್ರಹಿಸಿ ಅಲ್ಲಿಂದ ಸ್ಥಳೀಯ ಆಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸುತ್ತಾರೆ. ನಾವು ಜನತಾ ನ್ಯಾಯಾಲಯದ ಮುಂದೆ ತೆರಳುತ್ತೇವೆ.

ಪಾದಯಾತ್ರೆ ಸಹ ಮಾಡುತ್ತೇವೆ. ಬಜೆಟ್ ಹಿನ್ನೆಲೆ ಪಾದಯಾತ್ರೆ ಎರಡು ದಿನ ಕಡಿಮೆ ಮಾಡಿದ್ದೇವೆ. 3 ರಂದು ಬೆಂಗಳೂರಿನಲ್ಲಿ ಮುಕ್ತಾಯ ಮಾಡುತ್ತೇವೆ. ಸಿಎಂಗೆ, ಪೊಲೀಸರಿಗೆ ಈಗಾಗಲೇ ತಿಳಿಸಿದ್ದೇವೆ. ನಮ್ಮ ಕೆಲಸ ನಾವು ಮಾಡುತ್ತೇವೆ, ಜನರ ಮಧ್ಯೆ ತೆರಳುತ್ತೇವೆ ಎಂದರು.

Last Updated : Feb 19, 2022, 12:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.