ETV Bharat / city

ರಕ್ಷಾ-ನಲಪಾಡ್ ಹೊರಗಿಟ್ಟು, ಯುವ ಕಾಂಗ್ರೆಸ್​ಗೆ ಹೊಸ ಟಾಸ್ಕ್ ಕೊಟ್ಟ ಹೈಕಮಾಂಡ್ - ಯುವ ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ

ರಾಷ್ಟ್ರೀಯ ಯುವ ಕಾಂಗ್ರೆಸ್​ನಿಂದ ಕೊರೊನಾ ನಿರ್ವಹಣೆಗೆ ಯುವ ಕಾಂಗ್ರೆಸ್ ನಿಂದ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸೈಯದ್ ಖಾಲಿದ್ ಅಹಮದ್ ಗೆ ಕಚೇರಿ ಮೇಲುಸ್ತುವಾರಿ ನೀಡಲಾಗಿದೆ. ಯುವ ಕಾಂಗ್ರೆಸ್ ಚಟುವಟಿಕೆಗಳನ್ನು ಹೈಕಮಾಂಡ್ ಗೆ ವರದಿ ನೀಡುವ ಜವಾಬ್ದಾರಿಯನ್ನು ಇವರು ವಹಿಸಿಕೊಂಡಿದ್ದಾರೆ.

congress-high-command-gave-new-task-to-youth-leaders
ಯುವ ಕಾಂಗ್ರೆಸ್​ಗೆ ಹೊಸ ಟಾಸ್ಕ್ ಕೊಟ್ಟ ಹೈಕಮಾಂಡ್
author img

By

Published : May 20, 2021, 10:44 PM IST

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ನಿರ್ವಹಣೆಗೆ ಯುವ ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ಓದಿ: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವರನ್ನು ರಕ್ಷಿಸಿದ ಯೋಧರು: ಸೈನಿಕರ ಶೌರ್ಯಕ್ಕೆ ಜನರ ಸಲಾಂ

ಯುವ ಕಾಂಗ್ರೆಸ್ ಘೋಷಿತ ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ಗೆಲುವನ್ನು ತಡೆ ಹಿಡಿದ ಹಿನ್ನೆಲೆ ಹೆಚ್ಚು ಮತ ಗಳಿಸಿಯೂ ಹಿನ್ನಡೆ ಅನುಭವಿಸಿರುವ ಮೊಹಮ್ಮದ್ ನಲಪಾಡ್​ಗೆ ಯಾವುದೇ ಜವಾಬ್ದಾರಿ ನೀಡದಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಇಬ್ಬರ ನಡುವೆ ಸಾಕಷ್ಟು ತಿಕ್ಕಾಟ ನಡೆಯುತ್ತಿದ್ದು, ಇದೇ ಜವಾಬ್ದಾರಿಯಿಂದ ಇವರು ದೂರ ಉಳಿಯುವಂತೆ ಮಾಡಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತರೆಂದೇ ಗುರುತಿಸಿಕೊಂಡಿರುವ ಮೊಹಮ್ಮದ್ ನಲಪಾಡ್​ಗೆ, ಉತ್ತಮ ಸ್ಥಾನಮಾನ ಸಿಗುವ ನಿರೀಕ್ಷೆ ಹೊಂದಲಾಗಿತ್ತು. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಅವರು ಅಧ್ಯಕ್ಷ ರಕ್ಷಾ ರಾಮಯ್ಯಗಿಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಪಕ್ಷದ ಹೈಕಮಾಂಡ್ ಇದಕ್ಕೆ ಮನ್ನಣೆ ನೀಡದಿರುವುದು ಸ್ಪಷ್ಟವಾಗಿದೆ. ಇನ್ನೊಂದೆಡೆ ಅಧ್ಯಕ್ಷರಾದ ಬಳಿಕವೂ ಅಷ್ಟಾಗಿ ಪಕ್ಷದ ಹಿರಿಯ ನಾಯಕರ ಜತೆ ಸಂವಹನ ಸಾಧಿಸದ, ಪಕ್ಷದ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗದ ಹಾಗೂ ಕೋವಿಡ್ ಸಂದರ್ಭದಲ್ಲಿ ಅಷ್ಟಾಗಿ ಜನರ ಬಳಿ ತೆರಳದ ಕಾರಣಕ್ಕೆ ರಕ್ಷಾ ರಾಮಯ್ಯರನ್ನೂ ಪಕ್ಷದ ಹೈಕಮಾಂಡ್ ದೂರವೇ ಇರಿಸಿದೆ.

ಸೈಯ್ಯದ್ ಖಾಲಿದ್​ಗೆ ಅದೃಷ್ಟ:

ರಾಷ್ಟ್ರೀಯ ಯುವ ಕಾಂಗ್ರೆಸ್​ನಿಂದ ಕೊರೊನಾ ನಿರ್ವಹಣೆಗೆ ಯುವ ಕಾಂಗ್ರೆಸ್ ನಿಂದ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸೈಯದ್ ಖಾಲಿದ್ ಅಹಮದ್ ಗೆ ಕಚೇರಿ ಮೇಲುಸ್ತುವಾರಿ ನೀಡಲಾಗಿದೆ. ಯುವ ಕಾಂಗ್ರೆಸ್ ಚಟುವಟಿಕೆಗಳನ್ನು ಹೈಕಮಾಂಡ್ ಗೆ ವರದಿ ನೀಡುವ ಜವಾಬ್ದಾರಿ ಇವರು ವಹಿಸಿಕೊಂಡಿದ್ದಾರೆ. ಇವರು ದಾವಣಗೆರೆ ಮೂಲದ ಸೈಯದ್ ಖಾಲಿದ್ ಅಹಮದ್ ವಿಶೇಷ ಜವಾಬ್ದಾರಿ ಸಿಕ್ಕಿದೆ.

ರಾಜ್ಯವನ್ನು ವಿವಿಧ ವಲಯವಾಗಿ ವಿಂಗಡಿಸಿ ಜವಾಬ್ದಾರಿ ವಹಿಸಲಾಗಿದೆ. ಕೇಂದ್ರ ವಲಯದ ಜವಾಬ್ದಾರಿ ಉಪಾಧ್ಯಕ್ಷ ಸಂದೀಪ್ ನಾಯಕ್ ಗೆ ವಹಿಸಲಾಗಿದೆ. ಇದರಡಿ ಬರುವ 12 ಜಿಲ್ಲೆಗಳಿಗೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.

ದಕ್ಷಿಣ ವಲಯದ ಜವಾಬ್ದಾರಿಯನ್ನು ಉಪಾಧ್ಯಕ್ಷೆ ಭವ್ಯಾ ಕೆ.ಆರ್. ಅವರಿಗೆ ವಹಿಸಲಾಗಿದೆ. ಉತ್ತರ ವಲಯದ ಹೊಣೆಗಾರಿಕೆಯನ್ನು ಉಪಾಧ್ಯಕ್ಷ ಮಂಜುನಾಥ್ ಎಚ್ಎಸ್ ಅವರಿಗೆ ನೀಡಲಾಗಿದೆ. ಈ ಇಬ್ಬರೂ ಮುಖಂಡರು ತಮ್ಮ ವ್ಯಾಪ್ತಿಯಲ್ಲಿ ಬರುವ 12 ಮತ್ತು 13 ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಜತೆ ಸಂವಹನ ಸಾಧಿಸಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಲಿದ್ದಾರೆ. ಯಶವಂತ್ ಎನ್. ಅವರಿಗೆ ಸಾಮಾಜಿಕ ಜಾಲತಾಣದ ಹೊಣೆಗಾರಿಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.