ETV Bharat / city

ಉಪಚುನಾವಣೆಗೆ ಕೈ ಪಕ್ಷದ ತಯಾರಿ: ಹೆಚ್ಚು ಸ್ಥಾನಗಳನ್ನು ಗೆಲ್ಲಲು ರಣತಂತ್ರ

ಉಪ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್​​ ನಾಯಕರ ಜೊತೆ ಶುಕ್ರವಾರ ‌ಸಭೆ ನಡೆಯಿತು.

ಕಾಂಗ್ರೆಸ್​​ ನಾಯಕರ ಸಭೆ
author img

By

Published : Nov 24, 2019, 11:40 AM IST

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ನೇತೃತ್ವದಲ್ಲಿ ಚುನಾವಣೆ ಉಸ್ತುವಾರಿ ಹೊತ್ತಿರುವ ನಾಯಕರ ಜೊತೆ ಕೆಪಿಸಿಸಿ ಕಚೇರಿಯಲ್ಲಿ ‌ನಿನ್ನೆ ರಾತ್ರಿ ಸಭೆ ನಡೆಯಿತು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಪ್ರಮುಖ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಸಂಬಂಧ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಇದುವರೆಗೂ ನಡೆಸಿರುವ ಪ್ರಯತ್ನ ಹಾಗೂ ಮುಂದೆ ನಡೆಸಬೇಕಿರುವ ಕಾರ್ಯತಂತ್ರಗಳ ಕುರಿತು ಈ ಸಂದರ್ಭ ವೇಣುಗೋಪಾಲ್ ಮಾರ್ಗದರ್ಶನ ನೀಡಿದರು.

ಮಹಾರಾಷ್ಟ್ರ ಸರ್ಕಾರ ರಚನೆಗೆ ಆಕ್ರೋಶ

ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಬಿಜೆಪಿ ಹಾಗೂ ಎನ್​​​ಸಿಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದನ್ನು ನೋಡಿದರೆ, ಪ್ರಜಾಪ್ರಭುತ್ವ ಎಲ್ಲಿದೆ ಎಂಬ ಪ್ರಶ್ನಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಗೆ ಈ ವಿಚಾರದಲ್ಲಿ ಕೊಂಚವೂ ಕೀಳರಿಮೆ ಇಲ್ಲದಂತಾಗಿದೆ. ಬಿಜೆಪಿ ಮಾಡಿರುವ ಅಸಹ್ಯ ಕೆಲಸಕ್ಕೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರುತ್ತದೆ ಎಂದು ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಿದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೆವು. ಅದೇ ರೀತಿ ಮಹಾರಾಷ್ಟ್ರದ ವಿಚಾರದಲ್ಲೂ ಕೂಡ ಹಿಂದೆ ಸರಿಯುವುದಿಲ್ಲ. ಇನ್ನು ಮಹಾರಾಷ್ಟ್ರದಲ್ಲಿ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರ ನಾಲ್ಕೈದು ದಿನಗಳಲ್ಲಿ ಪತನವಾಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಭಾನುವಾರ ಕಾಂಗ್ರೆಸ್​​ ಪಕ್ಷದ ಶಾಸಕಾಂಗ ಸಭೆ ಕೂಡ ನಡೆಯಲಿದೆ. ಪಕ್ಷದ 44 ಶಾಸಕರು ಒಟ್ಟಾಗಿದ್ದು, ಎಲ್ಲರನ್ನೂ ರಕ್ಷಿಸಿಕೊಳ್ಳಲಿದ್ದೇವೆ. ರಾಜ್ಯಪಾಲರು ನೀತಿ ನಿಯಮಗಳನ್ನು ಮೀರಿ ರಾತ್ರೋರಾತ್ರಿಯೇ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ. ಅದನ್ನು ಖಂಡಿಸುತ್ತೇವೆ. ಕಾಂಗ್ರೆಸ್​​​ ಶಿವಸೇನೆಗೆ ಬೆಂಬಲ ನೀಡುವ ಭರವಸೆಯನ್ನು ಶಾಸಕರ ಸಹಿ ಸಮೇತ ನೀಡಲಿದ್ದೇವೆ. ನಮ್ಮ ಜೊತೆಗೆ ಎನ್​​ಸಿಪಿಯೂ ಇರಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಈಗ ಮತ್ತೆ ಹಣ ಮತ್ತು ಅಧಿಕಾರದ ಬಲದಿಂದ ಉಪ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದೆ. ಆಪರೇಷನ್​ ಕಮಲಕ್ಕೆ ಬಿಜೆಪಿ ಕೈ ಹಾಕಿದ ಪರಿಣಾಮ ಜನರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಉಪಚುನಾವಣೆಯಲ್ಲಿ 15 ಸ್ಥಾನಗಳಲ್ಲೂ ಕಾಂಗ್ರೆಸ್​​ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಹಾಗೂ ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಅರಾಜಕತೆ ಪ್ರತಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಹಾಗೂ ಅಧಿವೇಶನದಲ್ಲೂ ಇದೇ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂದರು.

Intro:newsBody:ಬಿಜೆಪಿ ವಿರುದ್ಧ ದೇಶಾದ್ಯಂತ ಹಾಗೂ ಲೋಕಸಭೆ ಸದನದ ಒಳಗೆ ಹೋರಾಟ: ವೇಣುಗೋಪಾಲ್

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ನೇತೃತ್ವದಲ್ಲಿ ಉಪಚುನಾವಣಾ ಹಿನ್ನೆಲೆಯಲ್ಲಿ ಎಐಸಿಸಿಯಿಂದ ಉಸ್ತುವಾರಿಗಳು ಹಾಗೂ ಕರ್ನಾಟಕದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಗಳ ಜೊತೆ ‌ಸಭೆ ನಿನ್ನೆ ರಾತ್ರಿ ನಡೆದಿದೆ.
ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಸಂಬಂಧ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಇದುವರೆಗೂ ನಡೆಸಿರುವ ಪ್ರಯತ್ನ ಹಾಗೂ ಮುಂದೆ ನಡೆಸಬೇಕಿರುವ ಕಾರ್ಯತಂತ್ರಗಳ ಕುರಿತು ಈ ಸಂದರ್ಭ ವೇಣುಗೋಪಾಲ್ ಮಾರ್ಗದರ್ಶನ ನೀಡಿದರು.
ಮಹಾರಾಷ್ಟ್ರ ಸರ್ಕಾರ ರಚನೆಗೆ ಆಕ್ರೋಶ
ಪ್ರತಿಪಕ್ಷಗಳು ಮಾಧ್ಯಮ ಸೇರಿದಂತೆ ಯಾರಿಗೂ ಮಾಹಿತಿ ನೀಡದೆ ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಬಿಜೆಪಿ ಹಾಗೂ ಕೆಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಪ್ರಜಾಪ್ರಭುತ್ವ ಎಲ್ಲಿದೆ ಎನ್ನುವ ಪ್ರಶ್ನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯವರಿಗೆ ಈ ವಿಚಾರದಲ್ಲಿ ಕೊಂಚ ಕೀಳರಿಮೆ ಇಲ್ಲದಂತಾಗಿದೆ. ಈ ಕಾರ್ಯಕ್ಕೆ ಅವರು ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗಿ ಬರಲಿದೆ. ರಾಜ್ಯದ ಬಿಜೆಪಿ ಸರ್ಕಾರ ರಚನೆಯನ್ನೇ ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಮಹಾರಾಷ್ಟ್ರದ ವಿಚಾರದಲ್ಲಿ ಕೂಡ ಹಿಂದೆ ಸರಿಯುವುದಿಲ್ಲ. ನ್ಯಾಯಾಲಯದ ಮೊರೆ ಹೋಗುತ್ತೇವೆ. ಇನ್ನೂ ನಾಲ್ಕೈದು ದಿನಗಳಲ್ಲಿ ಮಹಾರಾಷ್ಟ್ರದ ಸರ್ಕಾರ ಪತನವಾಗಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.
ಕಾಂಗ್ರೆಸ್ನ ಎಲ್ಲ 44 ಶಾಸಕರು ಒಟ್ಟಾಗಿ ಇದ್ದಾರೆ. ಭಾನುವಾರ ಪಕ್ಷದ ಶಾಸಕಾಂಗ ಸಭೆ ಕೂಡ ನಡೆಯಲಿದೆ. ನಾವು ನಮ್ಮ ಶಾಸಕರ ರಕ್ಷಣೆ ಮಾಡಿಕೊಳ್ಳಲಿದ್ದೇವೆ. ರಾಜ್ಯಪಾಲರು ಎಲ್ಲ ನೀತಿ ನಿಯಮಗಳನ್ನು ಮೀರಿ ಮಹಾರಾಷ್ಟ್ರದಲ್ಲಿ ನಡೆದುಕೊಂಡಿದ್ದಾರೆ. ನಾವು ನಮ್ಮ ಶಾಸಕರು ಶಿವಸೇನೆಗೆ ಬೆಂಬಲ ನೀಡುವ ಭರವಸೆಯನ್ನು ಶಾಸಕರ ಸಹಿ ಸಮೇತ ನೀಡಲಿದ್ದೇವೆ. ಸರ್ಕಾರ ರಚನೆಗೆ ಮಧ್ಯರಾತ್ರಿ ಬಿಜೆಪಿಯನ್ನು ವಾಹನದ ರಾಜ್ಯಪಾಲರ ಕ್ರಮವನ್ನು ಖಂಡಿಸುತ್ತೇವೆ. ಕಾಂಗ್ರೆಸ್ ಹಾಗೂ ಶಿವಸೇನೆ ಜೊತೆ ಎಂಸಿಬಿಎ ಶಾಸಕರು ಇರಲಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಿಜೆಪಿ ನಡೆಸುತ್ತಿರುವ ಕೃತ್ಯ ಇಡೀ ದೇಶಕ್ಕೆ ಸಂದೇಶವನ್ನು ರವಾನಿಸುತ್ತದೆ. ವಿದೇಶದಲ್ಲಿ ಆಗಬಾರದು ಆಗುತ್ತಿದೆ ಎಂಬ ಸೂಚನೆ ಸಿಗುತ್ತದೆ ಎಂದರು.
ರಾಜ್ಯದಲ್ಲಿ ಕೂಡ ಕುದುರೆ ವ್ಯಾಪಾರ ನಡೆದಿದೆ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಅವರು ಈಗ ಹಣ ಹಾಗೂ ಅಧಿಕಾರದ ಬಲದಿಂದ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಆದಾಗ್ಯೂ ಜನ ನಮ್ಮನ್ನು ನಂಬಿದ್ದಾರೆ ಎಲ್ಲ 15 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ರಾಜ್ಯದ ಈ ಸಮಸ್ಯೆಯನ್ನು ಖಂಡಿಸಿ ಹಾಗೂ ದೇಶದಲ್ಲಿ ನಡೆಯುತ್ತಿರುವ ಬಿಜೆಪಿ ಅರಾಜಕತೆಯನ್ನು ಪ್ರತಿರೋಧಿಸಿ ನಾವು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಸೋಮವಾರ ಅಧಿವೇಶನದಲ್ಲಿ ಕೂಡ ಇದೇ ವಿಚಾರವನ್ನು ಪ್ರಸ್ತಾಪಿಸುತ್ತೇವೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಯಾಗಿದೆ. ಇದರಿಂದಾಗಿ ಇಂತಹ ಸೂಕ್ಷ್ಮ ವಿಚಾರವನ್ನು ನಾವು ರಾಷ್ಟ್ರೀಯ ಮಟ್ಟದ ಹೋರಾಟದ ಮೂಲಕವೇ ಖಂಡಿಸುತ್ತೇವೆ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.