ETV Bharat / city

'ಕೈ'​ಕೊಡಲಿದ್ದಾರೆ ಪಾಲಿಕೆ ಸದಸ್ಯರು: ಇಂದು ಕಮಲ ಮುಡಿಯುವ ಸಾಧ್ಯತೆ? - ಪಕ್ಷಾಂತರ ಪರ್ವ

ಕಾಂಗ್ರೆಸ್‌ನಿಂದ ಪಾಲಿಕೆ ಸದಸ್ಯರ ದೊಡ್ಡ ತಂಡವೊಂದು ಇಂದು ಕಮಲಕ್ಕೆ ಜಿಗಿಯುವ ಸಾಧ್ಯತೆ ಹೆಚ್ಚಾಗಿದೆ.

Congress corporate-rs join to bjp
author img

By

Published : Nov 23, 2019, 8:38 AM IST

ಬೆಂಗಳೂರು: ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್‌ನಿಂದ ಪಾಲಿಕೆ ಸದಸ್ಯರ ದೊಡ್ಡ ತಂಡವೊಂದು ಕಮಲ ಪಕ್ಷಕ್ಕೆ ಜಿಗಿಯುವ ಸಾಧ್ಯತೆ ಹೆಚ್ಚಾಗಿದೆ.

ಶಿವಾಜಿನಗರ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು, ಅನರ್ಹ ಶಾಸಕ ರೋಷನ್ ಬೇಗ್ ನಾಯಕತ್ವದಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಾಲಿಕೆ ಸದಸ್ಯರು ಬಹಿರಂಗವಾಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕಾಂಗ್ರೆಸ್​ ಪಾಲಿಕೆ ಸದಸ್ಯರು ಬಿಜೆಪಿಗೆ ಬೆಂಬಲ ನೀಡುತ್ತಿರುವ ಕುರಿತು ಸಿ.ಟಿ.ರವಿ ಹೇಳಿಕೆ

ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಮೆರವಣಿಗೆಯಲ್ಲಿ ಪಾಲಿಕೆ ಸದಸ್ಯರಾದ ಗುಣಶೇಖರ್, ಗೋವಿಂದರಾಜು, ಗಣೇಶ್​ರಾವ್ ಮತ್ತು ಆನಂದ್ ಅಧಿಕೃತವಾಗಿ ಕಮಲದ ಬಾವುಟ ಹಿಡಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಾಲ್ವರು ಪಾಲಿಕೆ ಸದಸ್ಯರು ರೋಷನ್ ಬೇಗ್ ಅವರ ಪರಮಾಪ್ತರು ಎಂದು ತಿಳಿದುಬಂದಿದೆ.

ಶಿವಾಜಿನಗರದ ಜಯಮಹಲ್ ವಾರ್ಡ್ 63ರ ಸದಸ್ಯ ಎಂ.ಕೆ.ಗುಣಶೇಖರ್​ ಅವರು ಬಿಜೆಪಿ ಅಭ್ಯರ್ಥಿ ಶರವಣ ಅವರ ಜೊತೆಗೂಡಿ ಮತಯಾಚಿಸಿದ್ದಾರೆ. ಪಕ್ಷಾಂತರಗೊಂಡರೆ ಕಾಂಗ್ರೆಸ್ ತೆಗೆದುಕೊಳ್ಳುವ ಕ್ರಮದ ಬಗ್ಗೆ ಅರಿವಿದ್ದರೂ ಕಮಲಕ್ಕೆ ಬೆಂಬಲ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೂ ಮೊದಲು ಸಚಿವ ಸಿ.ಟಿ. ರವಿ ಅವರು ಕೂಡ ಕಾಂಗ್ರೆಸ್​ ಪಾಲಿಕೆ ಸದಸ್ಯರು ಬಿಜೆಪಿಗೆ ಬೆಂಬಲ ನೀಡುತ್ತಿರುವ ಕುರಿತು ಸುಳಿವು ನೀಡಿದ್ದರು.

Intro:Congress corporator asking vote for BJP

ExclusiveBody:ರಾಜ್ಯದಲ್ಲಿ ಉಪಚುನಾವಣೆ ಜೋರಾಗಿ ನಡೆಯುತ್ತಿದೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ.

ರೋಷನ್ ಬೇಗ್ ನಾಯಕತ್ವದಲ್ಲಿ ಗೆದ್ದಿದ್ದ ಕಾಂಗ್ರೆಸ್ ಕಾರ್ಪೊರೇಟರ್ ಗಳಿಂದ ಬಹಿರಂಗವಾಗಿ ಬಿಜೆಪಿಗೆ ಪ್ರಚಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ,ಮೂಲಗಳ ಪ್ರಕಾರ ನಾಳೆ ಸಂಜೆ 4 ಗಂಟೆಗೆ ನಡೆಯಲಿರುವ ಬಿಜೆಪಿಯ ರಾಲಿಯಲ್ಲಿ ಕಾಂಗ್ರೆಸ್ನ ಕಾರ್ಪೊರೇಟರ್ ಗಳಾದ ಗುಣಶೇಖರ್, ಗೋವಿಂದರಾಜು, ಗಣೇಶ್ ರಾವ್ ಮತ್ತು ಆನಂದ್ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ.

ಇಂದು ಶಿವಾಜಿನಗರದ ಜಯಮಹಲ್ ವಾರ್ಡ್ ನಂ- 63ರ ಕಾರ್ಪೋರೆಟರ್ ಎಂ.ಕೆ ಗುಣಶೇಖರ್ ನಿಂದ ಬಿಜೆಪಿಯ ಅಭ್ಯರ್ಥಿ ಶರವಣಗೆ ಬೆಂಬಲ ನೀಡಲು ಮುಂದಾಗಿದ್ದು, ಶರವಣ ಜೊತೆಗೂಡಿ ಮತಯಾಚನೆ ಮಾಡಿದ್ದಾರೆ, ಕಾಂಗ್ರೆಸ್ ಪಕ್ಷ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದರ ಅರಿವು ಇದ್ದರೂ ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿ ಶರವಣ ಅವರ ಪರ ಪ್ರಚಾರ ಮಾಡಲು ಮುಂದಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ

ಈ ನಾಲ್ಕು ಜನ ಕಾರ್ಪೋರೇಟರುಗಳು ರೋಷನ್ ಬೇಗ್ ರವರ ಪರಮಾಪ್ತರು ಎಂದು ತಿಳಿದುಬಂದಿದ್ದು, ರಿಜ್ವಾನ್ ಅರ್ಷದ್ ಗೆ ಈ ಬಾರಿ ಚುನಾವಣೆಯಲ್ಲಿ ಕೈಕೊಡೋದು ಪಕ್ಕಾ ಆಗಿದೆ, ಎಲ್ಲ ಬೆಳವಣಿಗೆಗಳಿಗೆ ಮುನ್ನುಡಿಯಂತೆ ಸಿಟಿ ರವಿ ಈ ವಿಚಾರವಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದರು.Conclusion:Video sent
ETV Bharat Logo

Copyright © 2025 Ushodaya Enterprises Pvt. Ltd., All Rights Reserved.