ETV Bharat / city

ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒಗಳ ಜೊತೆ ಸಿಎಂ ವಿಡಿಯೋ ಸಂವಾದ ಆರಂಭ

ಹಳ್ಳಿಗಳಿಗೆ ನಗರ ಪ್ರದೇಶಗಳಿಂದ ಬಂದವರಿಗೆ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದರೆ ಮಾತ್ರ ಊರಿಗೆ ಪ್ರವೇಶ ಕೊಡಿ. ಪಾಸಿಟಿವ್ ಬಂದರೆ ಕ್ವಾರಂಟೈನ್ ಸೆಂಟರ್​ಗೆ ಕಳುಹಿಸಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳ ಜೊತೆಗಿನ ವೀಡಿಯೋ ಕಾನ್ಫರೆನ್ಸ್​ನಲ್ಲಿ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

CM Video Conversation
ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒಗಳ ಜೊತೆ ಸಿಎಂ ವೀಡಿಯೋ ಸಂವಾದ ಆರಂಭ
author img

By

Published : May 26, 2021, 1:39 PM IST

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ನಿಯಂತ್ರಣ ವಿಚಾರ ಸಂಬಂಧ ಶಿವಮೊಗ್ಗ, ಬಳ್ಳಾರಿ, ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳ ಆಯ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೀಡಿಯೋ ಸಂವಾದ ನಡೆಸುತ್ತಿದ್ದಾರೆ.

ಗೃಹಕಚೇರಿ ಕೃಷ್ಣಾದಿಂದ ಸಿಎಂ ನಡೆಸುತ್ತಿರುವ ವೀಡಿಯೋ ಕಾನ್ಫರೆನ್ಸ್​ನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ‌, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿದ್ದಾರೆ.

CM Video Conversation
ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒಗಳ ಜೊತೆ ಸಿಎಂ ವೀಡಿಯೋ ಸಂವಾದ ಆರಂಭ

ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಆದವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಬೇಕು. ಅವರನ್ನು ಮನೆಯಲ್ಲಿ ಬಿಡಬಾರದು. ಕೊರೊನಾ ಟೆಸ್ಟ್ ಜಾಸ್ತಿ ಮಾಡಬೇಕು. ಹೊರಗಡೆಯಿಂದ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿ. ಹಳ್ಳಿಗಳಿಗೆ ನಗರ ಪ್ರದೇಶಗಳಿಂದ ಬಂದವರಿಗೆ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದರೆ ಮಾತ್ರ ಊರಿಗೆ ಪ್ರವೇಶ ಕೊಡಿ. ಪಾಸಿಟಿವ್ ಬಂದರೆ ಕ್ವಾರಂಟೈನ್ ಸೆಂಟರ್​ಗೆ ಕಳುಹಿಸಿ ಎಂದು ವೀಡಿಯೋ ಕಾನ್ಫರೆನ್ಸ್​ನಲ್ಲಿ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ವಿರೋಧಿ ಬಣದಿಂದ ನಾಯಕತ್ವ ಬದಲಾವಣೆ ಗೂಗ್ಲಿ: ಬಿಎಸ್​​ವೈ ಪರ ಬೆಂಬಲಿಗರ ಬ್ಯಾಟಿಂಗ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.