ದೇವನಹಳ್ಳಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬುಲಾವ್ ಹಿನ್ನೆಲೆ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ರಾತ್ರಿ ಬೆಂಗಳೂರಿಗೆ ಬರುವಾಗ ಸಿಹಿ ಸುದ್ದಿಯೊಂದಿಗೆ ಆಗಮಿಸಿದ್ದಾರೆ. ಸಚಿವಾಕಾಂಕ್ಷಿಗಳಿಗೆ ಸಂಕ್ರಾಂತಿ ಮುನ್ನವೇ ಸಿಹಿ ಸುದ್ದಿ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, 7 ಶಾಸಕರು ಸಚಿವ ಸಂಪುಟ ಸೇರ್ಪಡೆಯಾಗುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಜ.14ರಂದು ಸಂಕ್ರಾಂತಿ ಹಬ್ಬ ಇರುವ ಹಿನ್ನೆಲೆ ಜ.13ರ ಮಧ್ಯಾಹ್ನದ ನಂತರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಒಂದೆರಡು ವ್ಯತ್ಯಾಸದೊಂದಿಗೆ ನಾವು ಹೇಳಿದವರೆಲ್ಲ ಮಂತ್ರಿಮಂಡಲ ಸೇರೋದು ಪಕ್ಕಾ ಎಂದು ಯಡಿಯೂರಪ್ಪ ಬೆಂಗಳೂರಲ್ಲಿ ತಿಳಿಸಿದರು.
ಅಮಿತ್ ಶಾ ಅವರ ನಿವಾಸದಲ್ಲಿ ನಡೆದ ಒಂದು ಗಂಟೆಯ ಚರ್ಚೆಯಲ್ಲಿ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿದ್ದರು.