ಬೆಂಗಳೂರು: ಜನಪರ ಸಮಸ್ಯೆಗಳ ಬಗ್ಗೆ ಚರ್ಚಿಸದೇ ಸಚಿವರು ರಕ್ಷಣೆ ಕೋರಿ ಕೋರ್ಟ್ಗೆ ಹೋಗಿರುವ ವಿಚಾರವನ್ನು ಕಾಂಗ್ರೆಸ್ ದೊಡ್ಡದು ಮಾಡಿ ಕಲಾಪದ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಆರೋಪಿಸಿದರು.
ಈ ವೇಳೆ ಇಂದು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನಿವೃತ್ತ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗ್ಡೆಯವರ ಹೇಳಿಕೆಯನ್ನ ಸದನದಲ್ಲಿ ಉಲ್ಲೇಖಿಸಿದರು. ಅಷ್ಟೇ ಅಲ್ಲದೆ, ಹಿರಿಯ ವಕೀಲ ಬಿ.ವಿ ಆಚಾರ್ಯ ಹಾಗೂ ಮಾಜಿ ಸಚಿವ ನಾಣಯ್ಯ ಅವರ ಹೇಳಿಕೆಗಳನ್ನ ಉಲ್ಲೇಖಿಸಿ ಕಾಂಗ್ರೆಸ್ ನೀತಿಯನ್ನ ಖಂಡಿಸಿದರು. ಮಂತ್ರಿ ಅಷ್ಟೇ ಅಲ್ಲ ಸಾಮಾನ್ಯ ಜನರು ಕೋರ್ಟ್ನಿಂದ ರಕ್ಷಣೆ ಪಡೆಯುವ ಹಕ್ಕಿದೆ. ಕೋರ್ಟ್ನಿಂದ ಪಡೆದ ರಕ್ಷಣೆಯನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಸಂತೋಷ್ ಹೆಗ್ಡೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ ಎಂದು ಸರ್ಕಾರದ ಕ್ರಮವನ್ನ ಸಿಎಂ ಬಲವಾಗಿ ಸಮರ್ಥಿಸಿಕೊಂಡರು
ಇದನ್ನು ಓದಿ: ಸದನದಲ್ಲಿ ಮುಂದುವರೆದ ‘ಸಿಡಿ’ ವಾರ್.. ‘ಬ್ಲ್ಯೂ ಬಾಯ್ಸ್’ ಎಂದು ಧಿಕ್ಕಾರ ಕೂಗಿದ ವಿಪಕ್ಷ ಸದಸ್ಯರು
ರಾಜ್ಯದ ಆಯವ್ಯಯದ ಬಗ್ಗೆ ಚರ್ಚಿಸುವ ಬದಲು ಸಿಡಿ ಪ್ರಕರಣ ಕುರಿತು ತನಿಖೆಯಾಗಬೇಕೆಂದು ಪಟ್ಟುಹಿಡಿದಿರುವ ಕಾಂಗ್ರೆಸ್ನ ನೀತಿ ಸರಿಯಲ್ಲ ಎಂದರು. ಇನ್ನು ಬಜೆಟ್ ಅಧಿವೇಶನದ ಮಹತ್ವ ಅರಿಯದೇ ಕಾಲಹರಣ ಮಾಡಲು ವಿರೋಧ ಪಕ್ಷದ ನಾಯಕರು ಮುಂದಾಗಿದ್ದಾರೆ. ಬೇರೆ ಯಾವ ವಿಚಾರವು ಚರ್ಚಿಸಲು ಇಲ್ಲದಿರುವ ಕಾರಣ ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿಎಂ ಗುಡುಗಿದರು.