ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೆಂಡಕಾರುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಇಂದು ಮೊದಲ ಬಾರಿಗೆ ಸಿಎಂಗೆ ಮುಖಾಮುಖಿಯಾದ ಅಪರೂಪದ ಘಟನೆ ವಿಧಾನಸೌಧದಲ್ಲಿ ನಡೆಯಿತು.
ವಿಧಾನಸಭೆ ಕಲಾಪ ಮುಂದೂಡುತ್ತಲೇ ಯಡಿಯೂರಪ್ಪ - ಯತ್ನಾಳ್ ಮುಖಾಮುಖಿಯಾದರು. ವಿಧಾನಸೌಧದ ಪಶ್ಚಿಮ ದ್ವಾರದ ಬಳಿಯ ಮೊಗಸಾಲೆಯಲ್ಲಿ ಸಚಿವ ಸಿ.ಸಿ. ಪಾಟೀಲ್ ಜೊತೆ ಯತ್ನಾಳ್ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಸಿಎಂ ಅಚಾನಕ್ಕಾಗಿ ಆಗಮಿಸಿ, ಯತ್ನಾಳ್ ಅವರ ಬೆನ್ನು ತಟ್ಟಿ ಮಾತಾಡಿಸಿದರು.
ನಾನು ನೀನು ಕುಳಿತು ಮಾತಾಡೋಣ. ಪಂಚಮಸಾಲಿ ಮೀಸಲಾತಿ ಕುರಿತು ಮತ್ತು ಏನು ಬೇಕೋ ಅದರ ಬಗ್ಗೆ ಮಾತಾಡೋಣ ಎಂದು ಯತ್ನಾಳ್ಗೆ ಸಿಎಂ ಭರವಸೆ ನೀಡಿದರು. ಈ ವೇಳೆ ಯತ್ನಾಳ್ ಆಯ್ತು ಬಿಡಿ ಸರ್. ನಮ್ಮ ಬೇಡಿಕೆ ಈಡೇರಿಸಿ ಸರ್ ಎಂದು ಮನವಿ ಮಾಡಿದರು. ಈ ವೇಳೆ ತಲೆ ಅಲ್ಲಾಡಿಸಿ ಅಲ್ಲಿಂದ ಹೊರಟು ಹೋದರು.