ETV Bharat / city

ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ತಂಡದ ಜೊತೆ ಸಿಎಂ ಸಭೆ: ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚೆ - ಗೃಹ ಕಚೇರಿ ಕೃಷ್ಣಾ

ಇಎಂಆರ್‌ ನಿರ್ದೇಶಕ ಪಿ.ರವೀಂದ್ರನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಖ್ಯ ಕಾರ್ಯದರ್ಶಿ ಸೇರಿದಂತೆ ಕೇಂದ್ರದ ಅಧಿಕಾರಿಗಳ ಜೊತೆ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸುತ್ತಿದ್ದಾರೆ.

CM BSY conducting meeting with central officials
ಕೇಂದ್ರ ತಂಡದ ಜೊತೆ ಸಿಎಂ ಸಭೆ
author img

By

Published : Jul 7, 2020, 1:32 PM IST

ಬೆಂಗಳೂರು: ಕೊರೊನಾ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡದ ಜೊತೆ ಸಭೆ ನಡೆಸುತ್ತಿದ್ದಾರೆ.

ಇಎಂಆರ್‌ ನಿರ್ದೇಶಕ ಪಿ.ರವೀಂದ್ರನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಖ್ಯ ಕಾರ್ಯದರ್ಶಿ ಸೇರಿದಂತೆ ಕೇಂದ್ರದ ಅಧಿಕಾರಿಗಳ ಜೊತೆ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ರಾಜ್ಯಕ್ಕೆ ಲಾಕ್​​ಡೌನ್ ಮಾದರಿಯ ಕ್ರಮ ಅಗತ್ಯ ಇದೆಯಾ ಅನ್ನೋ ಬಗ್ಗೆಯೂ ಪರಿಶೀಲಿಸಲಿರುವ ಕೇಂದ್ರದ ತಂಡ, ರಾಜ್ಯದ ಮಟ್ಟಿಗೆ ಕೊರೊನಾ ತಜ್ಞರು ನೀಡಿರುವ ಶಿಫಾರಸ್ಸುಗಳ‌ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ.

ಸಭೆಯಲ್ಲಿ ಸಚಿವರಾದ ಶ್ರೀರಾಮುಲು‌, ಡಾ.ಕೆ.ಸುಧಾಕರ್, ಶಾಸಕ‌ ಎಸ್.ಆರ್.ವಿಶ್ವನಾಥ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಕೇಂದ್ರ ತಂಡದ ಜೊತೆ ಸಿಎಂ ಸಭೆ

ಕೊರೊನಾ ನಿರ್ವಹಣೆಗೆ ರಾಜ್ಯ ಕೈಗೊಂಡ ಕ್ರಮಗಳು, ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಕ್ರಮಗಳು, ಕೇಂದ್ರದ ಮಾರ್ಗಸೂಚಿಗಳ ಜಾರಿ ಬಗ್ಗೆ ರಿಪೋರ್ಟ್, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಕೆ, ಕಂಟೇನ್ಮೆಂಟ್ ವಲಯಗಳಲ್ಲಿ ಕೈಗೊಂಡ ಕ್ರಮಗಳು, ಆಸ್ಪತ್ರೆಗಳಲ್ಲಿ ಒದಗಿಸಿರುವ ಆರೋಗ್ಯ ಸೌಕರ್ಯ, ಒಟ್ಟು ಲಭ್ಯವಿರುವ ಹಾಸಿಗೆ, ವೆಂಟಿಲೇಟರ್, ಸಮುದಾಯಕ್ಕೆ ಸೋಂಕು ಹಬ್ಬಿರುವ ಬಗ್ಗೆ ವಿವರ, ಬೆಂಗಳೂರಿನಲ್ಲಿ ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ, ಕೊರೊನಾ ಆರಂಭವಾದಾಗಿನಿಂದ ಇಲ್ಲಿವರೆಗೂ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರದ ಅಧಿಕಾರಿಗಳು ಅಂಕಿಅಂಶ ಸಹಿತ ವಿವರ ಪಡೆಯಲಿದ್ದಾರೆ. ಒಟ್ಟಾರೆ ಟ್ರೇಸ್, ಟ್ರ್ಯಾಕ್, ಟೆಸ್ಟಿಂಗ್, ಟ್ರೀಟ್ಮೆಂಟ್ ಮತ್ತು ಟೆಕ್ನಾಲಾಜಿಗಳಿರುವ '5 T 'ಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯಲಿದ್ದಾರೆ.

ಸಚಿವರ ಜೊತೆ ಸಿಎಂ ಸಭೆ:

ಕೇಂದ್ರ ತಂಡದ ಭೇಟಿ ಹಿನ್ನೆಲೆ ಸಚಿವರಾದ ಶ್ರೀರಾಮುಲು‌, ಡಾ.ಕೆ.ಸುಧಾಕರ್, ಶಾಸಕ‌ ಎಸ್.ಆರ್.ವಿಶ್ವನಾಥ್, ಸಿಎಸ್ ವಿಜಯ್ ಭಾಸ್ಕರ್, ಹಿರಿಯ ಅಧಿಕಾರಿಗಳ ಜತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು. ಸೆಂಟ್ರಲ್ ಟೀಂಗೆ ನೀಡಬಹುದಾದ ರಿಪೋರ್ಟ್ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ರಾಜ್ಯದ ಕೊರೊನಾ ನಿಯಂತ್ರಣ ಕ್ರಮ, ಟೆಸ್ಟಿಂಗ್ ಪ್ರಮಾಣ, ಕೊರೊನಾ ಪ್ರಕರಣ, ಸಾವಿನ ಪ್ರಮಾಣದ ಬಗ್ಗೆ ಸಮಾಲೋಚನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.