ಬೆಂಗಳೂರು: ಕೋವಿಡ್ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ವರ್ಚುವಲ್ ಸಭೆ ಆರಂಭಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಆರ್.ಟಿ.ನಗರದ ತಮ್ಮ ನಿವಾಸದಿಂದ ಸಭೆಯಲ್ಲಿ ಭಾಗಿಯಾಗಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿನ ಕೋವಿಡ್ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ಈ ಸಭೆ ಕರೆದಿದ್ದಾರೆ.
ಡಿಸೆಂಬರ್ ಅಂತ್ಯದವರೆಗೂ ನಿಯಂತ್ರಣದಲ್ಲಿದ್ದ ಕೊರೊನಾ ಇದೀಗ ಸ್ಫೋಟಗೊಳ್ಳುತ್ತಿದೆ. ಪಾಸಿಟಿವಿಟಿ ರೇಟ್ ಎರಡೇ ವಾರದಲ್ಲಿ ಶೇ.1 ರಿಂದ 12-15 ರಷ್ಟು ಪ್ರಮಾಣಕ್ಕೆ ಬಂದು ತಲುಪಿರುವ ಕುರಿತು ಸಿಎಂ ಬೊಮ್ಮಾಯಿ ಪ್ರಧಾನಿಗೆ ವಿವರ ನೀಡಲಿದ್ದಾರೆ.
ಇದೇ ವೇಳೆ, ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಕಠಿಣ ಕ್ರಮ, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಬೆಂಗಳೂರಿನಲ್ಲಿ ಶಾಲಾ ಕಾಲೇಜು ಬಂದ್, ಹೋಟೆಲ್, ಮಾಲ್, ಚಿತ್ರ ಮಂದಿರಗಳಲ್ಲಿ ಶೇ. 50ರಷ್ಟು ಅವಕಾಶ ನಿಯಮ ಸೇರಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳ ಕುರಿತು ಸಿಎಂ ಮಾಹಿತಿ ನೀಡುವರು.
ಇದನ್ನೂ ಓದಿ: ಹಬ್ಬದಲ್ಲಿ ಮೈಮರೆಯುವುದು ಬೇಡ, ಕೋವಿಡ್ ನಿಯಮ ಪಾಲಿಸೋಣ: ಜನತೆಗೆ ಬಿಎಸ್ವೈ ಕರೆ