ಬೆಂಗಳೂರು: ಉಕ್ರೇನ್‌ನಲ್ಲಿ ಶೆಲ್ ದಾಳಿಯ ವೇಳೆ ಮೃತಪಟ್ಟ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಪಾರ್ಥಿವ ಶರೀರವನ್ನು ಮರಳಿ ದೇಶಕ್ಕೆ ತರಲು ಶ್ರಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧನ್ಯವಾದ ಸಲ್ಲಿಸಿದ್ದಾರೆ.
ಈ ಬಗ್ಗೆ ಪತ್ರ ಬರೆದು ಕೃತಜ್ಞತೆ ಹೇಳಿರುವ ಸಿಎಂ ಬೊಮ್ಮಾಯಿ, ಉಕ್ರೇನ್‌ನಲ್ಲಿ ಯುದ್ಧ ಪರಿಸ್ಥಿತಿಯ ಮಧ್ಯೆಯೂ ರಾಜ್ಯದ ಯುವಕನ ಮೃತದೇಹವನ್ನು ಮರಳಿ ತರುವಲ್ಲಿ ನಿಮ್ಮ ಶ್ರಮ ಅಗಣಿತ. ದೇಶದ, ರಾಜ್ಯದ ಜನರ ಬೇಡಿಕೆಗೆ ಅನುಗುಣವಾಗಿ ನವೀನ್ ಮೃತದೇಹವನ್ನು ತಾಯ್ನಾಡಿಗೆ ತರಲಾಗುತ್ತಿದೆ. ಇದಕ್ಕೆ ಸಹಕರಿಸಿದ ನಿಮಗೆ ನವೀನ್ ಕುಟುಂಬ ಮತ್ತು ರಾಜ್ಯದ ಜನರ ಪರವಾಗಿ ಧನ್ಯವಾದ ಸಲ್ಲಿಸುವೆ ಎಂದಿದ್ದಾರೆ.
-
Hon'ble @narendramodi ji with your efforts the mortal remains of Naveen Shekharappa Gyangoudar is reaching Bengaluru at 2:45 am on Monday.
— Basavaraj S Bommai (@BSBommai) March 20, 2022 " class="align-text-top noRightClick twitterSection" data="
Myself and people of Karantaka are grateful to your deep concern. pic.twitter.com/ULq8iQMnU4
">Hon'ble @narendramodi ji with your efforts the mortal remains of Naveen Shekharappa Gyangoudar is reaching Bengaluru at 2:45 am on Monday.
— Basavaraj S Bommai (@BSBommai) March 20, 2022
Myself and people of Karantaka are grateful to your deep concern. pic.twitter.com/ULq8iQMnU4Hon'ble @narendramodi ji with your efforts the mortal remains of Naveen Shekharappa Gyangoudar is reaching Bengaluru at 2:45 am on Monday.
— Basavaraj S Bommai (@BSBommai) March 20, 2022
Myself and people of Karantaka are grateful to your deep concern. pic.twitter.com/ULq8iQMnU4
ಇನ್ನು ನವೀನ್ ಪಾರ್ಥಿವ ಶರೀರ ನಾಳೆ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದು, ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಹಾವೇರಿಗೆ ಕೊಂಡೊಯ್ದು ಸಾರ್ವಜನಿಕ ದರ್ಶನ, ಮೆರವಣಿಗೆಯ ನಂತರ ಶವವನ್ನು ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಓದಿ: ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!