ETV Bharat / city

ಅಂಬಿ ಸ್ಮಾರಕಕ್ಕೆ ಸಿಎಂ ಭೂಮಿ ಪೂಜೆ.. ಶೀಘ್ರವೇ ಪುನೀತ್ ಸ್ಮಾರಕವೂ ನಿರ್ಮಾಣ : ಸಿಎಂ ಬೊಮ್ಮಾಯಿ

ಅಂಬರೀಶ್‌ ಕಾವೇರಿ ವಿವಾದ ಬಂದಾಗ ಒಂದು ಕ್ಷಣವೂ ಹಿಂದೆ ಮುಂದೆ ನೋಡದೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಬಂದಿದ್ದರು. ಬಹಳಷ್ಟು ಜನ ಕಾವೇರಿಗಾಗಿ ಬಹಳ ಹೋರಾಟ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ಅಧಿಕಾರವನ್ನು ಅವರ್ಯಾರು ತ್ಯಾಗ ಮಾಡಿಲ್ಲ..

memorial
ಬೊಮ್ಮಾಯಿ
author img

By

Published : Feb 27, 2022, 5:26 PM IST

ಬೆಂಗಳೂರು : ಕನ್ನಡಿಗರು ಮಾತ್ರವಲ್ಲ ಸುತ್ತಮುತ್ತಲ ರಾಜ್ಯಗಳ ಜನರು ಕೂಡ ಬಂದು ಹೋಗುವ ರೀತಿ ಅಂಬರೀಶ್ ಸ್ಮಾರಕವನ್ನು ನಿರ್ಮಾಣ ಮಾಡಲಿದ್ದೇವೆ. ಆದಷ್ಟು ಬೇಗ ಪುನೀತ್ ರಾಜ್​ಕುಮಾರ್ ಅವರ ಸ್ಮಾರಕವನ್ನೂ ನಿರ್ಮಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ.ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಸಿಎಂ, ಅಂಬರೀಶ್​ರ ಸ್ಮಾರಕ ನಿರ್ಮಾಣವಾಗಬೇಕು ಎಂಬುದು ಎಲ್ಲರ ಅಭಿಲಾಷೆ. ಪುನೀತ್ ರಾಜಕುಮಾರ್ ಅವರ ಸ್ಮಾರಕವನ್ನೂ ಶೀಘ್ರದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಮಾಡಲಿದ್ದೇವೆ. ಪುನೀತ್​ಗೆ ಕರ್ನಾಟಕ ರತ್ನವನ್ನು ನೀಡುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದರು.

ಅಂಬಿ ಸ್ಮಾರಕಕ್ಕೆ ಸಿಎಂ ಭೂಮಿ ಪೂಜೆ
ಅಂಬಿ ಸ್ಮಾರಕಕ್ಕೆ ಸಿಎಂ ಭೂಮಿ ಪೂಜೆ

ಅಂಬರೀಶ್ ಜೊತೆಗಿನ ನಮ್ಮ ಸ್ನೇಹ 40 ವರ್ಷಕ್ಕೂ ಹಳೆಯದು. ಅಂಬರೀಶ್ ಅವರು ತೆರೆದ ಪುಸ್ತಕದಂತೆ. ಯಾರು ತಮ್ಮ ಮನದಾಳದ ಇಚ್ಛೆಯಂತೆ ಬದುಕು ನಡೆಸುತ್ತಾರೋ ಅವರದ್ದು ಮಾತ್ರವೇ ಸಾರ್ಥಕತೆಯ ಬದುಕಾಗುತ್ತದೆ ಎಂದರು.

ಹುಟ್ಟಿನಿಂದಲೇ ನಾಯಕ : ಚಿತ್ರರಂಗ, ರಾಜಕೀಯದಲ್ಲಿ ಒಂದೇ ರೀತಿಯಲ್ಲಿ ಬೆಳೆದು ಬಂದರು. ಸಿನಿಮಾದಿಂದ ಅವರು ನಾಯಕರಾಗಲಿಲ್ಲ. ಹುಟ್ಟಿನಿಂದಲೇ ನಾಯಕರಾಗಿದ್ದರು. ಸ್ನೇಹಕ್ಕೆ ಬಹಳ ಬೆಲೆಯನ್ನು ಕೊಡುತ್ತಿದ್ದ ವ್ಯಕ್ತಿ ಅವರು. ರೈತರಿಗೆ, ಬಡವರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಕನಸು ಕಂಡಿದ್ದರು. ಈ ರೀತಿಯ ವ್ಯಕ್ತಿಗಳು ಬಹಳ ಕಡಿಮೆ ಎಂದರು.

ಕಾವೇರಿಗಾಗಿ ಅಧಿಕಾರ ತ್ಯಾಗ ಮಾಡಿದ ವ್ಯಕ್ತಿ : ಕಾವೇರಿ ವಿವಾದ ಬಂದಾಗ ಒಂದು ಕ್ಷಣವೂ ಹಿಂದೆ ಮುಂದೆ ನೋಡದೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಬಂದಿದ್ದರು. ಬಹಳಷ್ಟು ಜನ ಕಾವೇರಿಗಾಗಿ ಬಹಳ ಹೋರಾಟ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ಅಧಿಕಾರವನ್ನು ಅವರ್ಯಾರು ತ್ಯಾಗ ಮಾಡಿಲ್ಲ ಎಂದರು.

ಓದಿ: ಮೆರವಣಿಗೆಯಲ್ಲಿ ಸಖತ್ ಸ್ಟೆಪ್ ಹಾಕಿದ ಸಂಸದ ಸಂಗಣ್ಣ ಕರಡಿ.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.