ETV Bharat / city

ಪಕ್ಷ ಸಂಘಟನೆ, ಬಲವರ್ಧನೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಿಎಲ್​ಪಿಯಲ್ಲಿ ಸುದೀರ್ಘ ಚರ್ಚೆ

author img

By

Published : Feb 4, 2021, 11:53 AM IST

ಕಾಂಗ್ರೆಸ್ ಶಾಸಕಾಂಗ ಸಭೆ ಬುಧವಾರ ನಡೆದಿದ್ದು, ಚರ್ಚೆಯಲ್ಲಿ ಅತ್ಯಂತ ಪ್ರಮುಖವಾಗಿ, ಅಧಿವೇಶನ ಮುಗಿದ ಬಳಿಕ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರೈತ ವಿರೋಧಿ ಕಾನೂನುಗಳ ವಿರುದ್ಧ ಜನಾಂದೋಲನ ರೂಪಿಸುವ ಕುರಿತು ಚರ್ಚಿಸಲಾಗಿದೆ.

CLP meeting
ಸಿಎಲ್​ಪಿ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆ ಬುಧವಾರ ರಾತ್ರಿವರೆಗೂ ನಡೆದಿದ್ದು, ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಪಾಲ್ಗೊಂಡು ಸುದೀರ್ಘ ಚರ್ಚೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆ

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು ಎರಡು ದಿನ ಬಾಕಿ ಉಳಿದಿರುವ ವಿಧಾನಮಂಡಲ ಅಧಿವೇಶನದಲ್ಲಿ ಕೈಗೊಳ್ಳಬಹುದಾದ ನಿಲುವುಗಳು ಹಾಗೂ ಹೋರಾಟ ಮತ್ತು ಅಧಿವೇಶನದ ನಂತರ ಸದನದ ಹೊರಗೆ ಕೈಗೊಳ್ಳಬಹುದಾದ ಹೋರಾಟಗಳು ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ.

ಚರ್ಚೆಯಲ್ಲಿ ಅತ್ಯಂತ ಪ್ರಮುಖವಾಗಿ, ಅಧಿವೇಶನ ಮುಗಿದ ಬಳಿಕ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರೈತ ವಿರೋಧಿ ಕಾನೂನುಗಳ ವಿರುದ್ಧ ಜನಾಂದೋಲನ ರೂಪಿಸುವ ಕುರಿತು ಚರ್ಚಿಸಲಾಗಿದೆ. ಜನಾಂದೋಲನ ಕಾರ್ಯಕ್ರಮದಲ್ಲಿ ಶಾಸಕರು ಮತ್ತು ಸೋತ ಕೈ ಅಭ್ಯರ್ಥಿಗಳು ಮತ್ತು ಜಿಲ್ಲಾ ಘಟಕ ಪದಾಧಿಕಾರಿಗಳು ಭಾಗಿಯಾಗಬೇಕು ಎಂದು ತಿಳಿಸಲು ತೀರ್ಮಾನಿಸಲಾಗಿದೆ.

ಪ್ರವಾಸ ಅನಿವಾರ್ಯ:

ಮಾರ್ಚ್ ತಿಂಗಳಿಂದ ವಿರೋಧ ಪಕ್ಷದ ನಾಯಕರು, ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಪ್ರವಾಸ ಮಾಡಬೇಕು. ಪಕ್ಷ ಸಂಘಟನೆ ಸಲುವಾಗಿ ಪ್ರವಾಸ ಅಗತ್ಯವಾಗಿದೆ. ಪ್ರತ್ಯೇಕ ಪ್ರವಾಸಕಿಂತಲೂ ಅಧ್ಯಕ್ಷ, ಪ್ರತಿಪಕ್ಷ ನಾಯಕ ಒಟ್ಟಾಗಿ ಪ್ರವಾಸ ಮಾಡುವುದು ಸೂಕ್ತ ಹಾಗೂ ಉತ್ತಮ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಂಘಟಿತವಾಗಿದೆ. ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳು ಇಲ್ಲ ಎನ್ನುವುದನ್ನು ತೋರಿಸಲು ನಾಯಕರು ಒಟ್ಟಾಗಿ ತೆರಳುವುದು ಸೂಕ್ತ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳ್ಳುತ್ತದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ಇಂತಹ ಪ್ರಯತ್ನ ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಕಡೆಯಿಂದಲೂ ಸಮ್ಮತಿ ವ್ಯಕ್ತವಾಗಿದ್ದು, ಪ್ರವಾಸದ ಕುರಿತು ರೂಪುರೇಷೆ ಸಿದ್ಧಪಡಿಸಲು ಸೂಚಿಸಲಾಗಿದೆ.

ಇತರ ಮಹತ್ವದ ನಿರ್ಧಾರ:

ಸರ್ಕಾರದ ಲೋಪಗಳನ್ನ ಜನರಿಗೆ ತಲುಪಿಸುವುದೇ ಇದರ ಉದ್ದೇಶ ಮತ್ತು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು. ಮುಂಬರುವ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಆದಷ್ಟು ಬೇಗ ಅಂತಿಮ ಮಾಡಿ ಚುನಾವಣೆ ಗೆಲ್ಲಲು ಒಂದಾಗಿ ದುಡಿಯುವುದು. ತಳಮಟ್ಟದ ಕಾರ್ಯಕರ್ತರಿಗೆ ಉತ್ತೇಜನ ಹಾಗೂ ಅಧಿಕಾರ ನೀಡುವ ಮೂಲಕ ಅವರಲ್ಲಿ ಹೆಚ್ಚಿನ ಆಸಕ್ತಿ ಬೆಳೆಸುವುದು. ಕೆಪಿಸಿಸಿ ವಿವಿಧ ಸಮಿತಿಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡುವ ಕುರಿತು ಚರ್ಚೆ ನಡೆದಿದೆ.

ಸಭಾಪತಿ ವಿವೇಚನೆಗೆ ಬಿಟ್ಟ ಕಾಂಗ್ರೆಸ್

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಪ್ರತಾಪ್ ಚಂದ್ರಶೆಟ್ಟಿ ವಿವೇಚನೆಗೆ ಬಿಟ್ಟ ಕಾಂಗ್ರೆಸ್ ನಾಯಕರು, ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷರು, ಪರಿಷತ್ ವಿಪಕ್ಷ ನಾಯಕರು ಸಭಾಪತಿ ಜತೆ ಚರ್ಚೆ ಮಾಡಿ ಆದಷ್ಟು ಬೇಗ ಗೊಂದಲ ನಿವಾರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಪಕ್ಷದ ಕಡೆಯಿಂದ ಸ್ಥಾನದಲ್ಲಿ ಕೂರುವುದಕ್ಕೆ ಹಾಗೂ ವಿಶ್ವಾಸಮತ ಯಾಚಿಸುವುದಕ್ಕೆ ಮತ್ತು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರಕ್ಕೂ ಉಳಿದವರು ಅಡ್ಡಿಪಡಿಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಇಂದು ಸಂಜೆ ಸಚಿವ ಸಂಪುಟದ ಉಪ ಸಮಿತಿ ಸಭೆ.. ಕಡಲೆಕಾಳು, ತೊಗರಿ ಖರೀದಿ ಕುರಿತು ಚರ್ಚೆ

ಬಿಜೆಪಿ ವಿರುದ್ಧ ಹೋರಾಟ

ಬಿಜೆಪಿಯಲ್ಲಿ ಸೃಷ್ಟಿ ಆಗ್ತಿರುವ ನಾಯಕತ್ವ ಗೊಂದಲವನ್ನ ಕಾಂಗ್ರೆಸ್ ಸಂಘಟನೆಗೆ ಸಮರ್ಥವಾಗಿ ಬಳಸಿಕೊಳ್ಳುವುದು. ಮುಂದಿನ ದಿನಗಳಲ್ಲಿ ಬಿಜೆಪಿಯ ಆಂತರಿಕ ಭಿನ್ನಮತವನ್ನು ವಿಷಯವಾಗಿ ಇಟ್ಟುಕೊಂಡು ಪಕ್ಷದ ರಾಜ್ಯ ನಾಯಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಜನರಿಗೆ ಮಾಹಿತಿ ಒದಗಿಸುವ ಕಾರ್ಯ ಮಾಡಬೇಕು. ಕೇವಲ ನಗರ ಕೇಂದ್ರಿತವಾಗಿ ನಮ್ಮ ಹೋರಾಟ ಸೀಮಿತವಾಗದೆ ಗ್ರಾಮೀಣ ಭಾಗಗಳಿಗೆ ಹಾಗೂ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೂ ತಲುಪುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಶಾಸಕರು ಮಾತ್ರವಲ್ಲದೆ ಮಾಜಿ ಶಾಸಕರು ಮಾಜಿ ಸಚಿವರು ಹಾಗೂ 2018 ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಸಹಃ ಹೋರಾಟದಲ್ಲಿ ಕೈಜೋಡಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ.

ಒಟ್ಟಾರೆ ಮುಂಬರುವ ದಿನಗಳಲ್ಲಿ ಬರುವ ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುವ ಜೊತೆಗೆ ನಮ್ಮ ವಿರೋಧಿ ಪಕ್ಷವಾದ ಬಿಜೆಪಿ ಹಾಗೂ ಜೆಡಿಎಸ್ ಅನ್ನು ಸಮಾನವಾಗಿ ದೂರದಲ್ಲಿಟ್ಟು ಕಾರ್ಯನಿರ್ವಹಿಸಬೇಕು ಎಂದು ಸಲಹೆಗಳು ಕೇಳಿಬಂದವು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಈ ಎಲ್ಲಾ ಚರ್ಚೆಯನ್ನು ಮುಕ್ತವಾಗಿ ಸ್ವೀಕರಿಸಿ ಮುಂಬರುವ ದಿನಗಳಲ್ಲಿ ಪಕ್ಷ ಬಲವರ್ಧನೆಗೆ ಹಾಗೂ ಸಂಘಟನೆಗೆ ಅಗತ್ಯವಿರುವ ರೀತಿಯಲ್ಲಿ ಕ್ರಮ ಕೈಗೊಳ್ಳುವ ಭರವಸೆ ಇತ್ತರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.