ETV Bharat / city

ಡಿಕೆಶಿಗಾಗಿ ಕಾದು ಸುಸ್ತಾದ ಕಾರ್ಯಕರ್ತರು, ರೋಡ್ ಶೋ ಕಾರಣ ಟ್ರಾಫಿಕ್ ಜಾಮ್

‌ಡಿ.ಕೆ.ಶಿವಕುಮಾರ್ ನಾಲ್ಕು ಗಂಟೆಗೆ ಬರುತ್ತಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಗಂಟೆಗಟ್ಟಲೆ ಕಾದು ಕಾದು ಸುಸ್ತಾದ ಘಟನೆ ನಡೆಯಿತು. ಜೊತೆಯಲ್ಲಿ ವಿಜಯಪುರದಿಂದ ದೇವನಹಳ್ಳಿ, ಶಿಡ್ಲಘಟ್ಟ, ಕೋಲಾರಕ್ಕೆ ಹೋಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್‌ ಉಂಟಾಗಿ ವಾಹನ ಸವಾರರು ‌ಪರದಾಟ ಅನುಭವಿಸಿದರು.

author img

By

Published : Apr 10, 2019, 7:24 PM IST

ಟ್ರಾಫಿಕ್ ಜಾಮ್

ಬೆಂಗಳೂರು: ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಾಯಕನಿಗಾಗಿ ಕಾಯುತ್ತಾ, ಕಾರ್ಯಕರ್ತರು ಬಿಸಿಲಿನಲ್ಲಿ ಬಳಲಿ ಬೆಂಡಾದ ಘಟನೆ ದೇವನಹಳ್ಳಿಯ ವಿಜಯಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪಮೊಯ್ಲಿ ಪರ‌ ಮತಯಾಚನೆ ಮಾಡಲು ಸಚಿವ ಡಿ‌.ಕೆ ಶಿವಕುಮಾರ್ ಆಗಮಿಸಬೇಕಿತ್ತು. ಅವರು ತಡವಾಗಿ ಆಗಿಮಿಸಿದ ಪರಿಣಾಮ ಕಾರ್ಯಕರ್ತರು ಕಾದು ಸುಸ್ತಾದರೆ, ಇನ್ನೊಂದೆಡೆ ರೋಡ್ ಶೋ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

‌ಡಿ.ಕೆ ಶಿವಕುಮಾರ್ ಸಂಜೆ ನಾಲ್ಕು ಗಂಟೆಗೆ ಬರುತ್ತಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಕಾಯುತ್ತಿದ್ದರು. ಆದರೆ ಸಮಯ ಮೀರುತ್ತಿತ್ತೇ ಹೊರತು, ಸಚಿವರು ಮಾತ್ರ ಕಾಣಲಿಲ್ಲ. ಹಾಗಾಗಿ ಕಾಂಗ್ರೆಸ್ ಹಾಗು ಜೆಡಿಎಸ್‌ ಕಾರ್ಯಕರ್ತರು ಗಂಟೆಗಟ್ಟಲೆ ಕಾಯಬೇಕಾಯ್ತು. ಇದರ ಜೊತೆಯಲ್ಲಿ ವಿಜಯಪುರದಿಂದ ದೇವನಹಳ್ಳಿ, ಶಿಡ್ಲಘಟ್ಟ, ಕೋಲಾರಕ್ಕೆ ಹೋಗುವ ಮಾರ್ಗದಲ್ಲಿ ಟ್ರಾಫಿಕ್ ಕಿರಿಕಿರಿ ಉಂಟಾಗಿ ವಾಹನ ಸವಾರರು ‌ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಯಿತು.

ಡಿಕೆಶಿ ರೋಡ್ ಶೋ ಹಿನ್ನೆಲೆ ಟ್ರಾಫಿಕ್ ಜಾಮ್

ಘಟನೆಯ ವಿವರ: ಡಿ.ಕೆ ಶಿವಕುಮಾರ್ ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೆಲಮಂಗಲ, ವಿಜಯಪುರ, ಹೊಸಕೋಟೆಯಲ್ಲಿ ರೋಡ್‌ ಶೋ ಮೂಲಕ ವೀರಪ್ಪಮೊಯ್ಲಿ ಪರವಾಗಿ ಮತಯಾಚನೆ ಮಾಡುವ ಕಾರ್ಯಕ್ರಮವಿತ್ತು. ನೆಲಮಂಗಲದಲ್ಲಿ ಮಧ್ಯಾಹ್ನ ಎರಡು ಗಂಟೆಯಿಂದ 3 ಗಂಟೆಯವರೆಗೆ ಪ್ರಚಾರ ಮುಗಿಸಿಕೊಂಡು 4 ಗಂಟೆಗೆ ವಿಜಯಪುರ ಮತ್ತು 6 ಗಂಟೆಗೆ ಹೊಸಕೋಟೆಯ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು.

ಆದರೆ, ನೆಲಮಂಗಲದಲ್ಲೇ ಪ್ರಚಾರ ಸಭೆ ತಡವಾಗಿದ್ದರಿಂದ ದೇವನಹಳ್ಳಿಯ ವಿಜಯಪುರಕ್ಕೆ ಬರುವುದಕ್ಕೆ ಎರಡೂವರೆ ಗಂಟೆಗೂ ಹೆಚ್ಚು ಕಾಲ ಬೇಕಾಯಿತು. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಸಚಿವರಿಗಾಗಿ ಕಾದು ಕಾದು ಸುಸ್ತಾದ್ರು.‌ ಈ ವೇಳೆ ಅಸಮಾಧಾನಗೊಂಡು ಮನೆಗೆ ತೆರಳಿದರೆ ಇನ್ನು ಕೆಲವರು ಡಿಕೆಶಿಗಾಗಿ ಕಾದು ಕುಳಿತರು.

ಈ ವೇಳೆ ಕೋಲಾರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಶಿಡ್ಲಘಟ್ಟಕ್ಕೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಯ್ತು. ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸರು ಪರದಾಟ ನಡೆಸಬೇಕಾಯಿತು.

Intro:ಡಿಕೆಶಿಗಾಗಿ ಕಾದು ಕಾದು ಸುಸ್ತಾದ ಕಾರ್ಯಕರ್ತರು: ರೋಡ್ ಶೋ ಹಿನ್ನೆಲೆ ಟ್ರಾಫಿಕ್ ಜಾಮ್

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರ‌ ಮತಯಾಚನೆ ಮಾಡಲು ಸಚಿವ ಡಿ‌.ಕೆ ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ..‌ಡಿಕೆ ಶಿವಕುಮಾರ್ ನಾಲ್ಕು ಗಂಟಗೆ ಬರ್ತಾರೆ ಎಂದು ನಾಲ್ಕು ಗಂಟೆಗೆ ಆಗಮಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಡಿಕೆ ಶಿವಕುಮಾರ್ ಗಾಗಿ ಗಂಟೆಗಟ್ಟಲೆ ಕಾದು ಕಾದು ಸುಸ್ತಾದ ಘಟನೆ ನಡೆಯಿತು.. ಇದರ ಜೊತೆಯಲ್ಲಿ ವಿಜಯಪುರದಿಂದ ದೇವನಹಳ್ಳಿ, ಶಿಡ್ಲಘಟ್ಟ, ಕೋಲಾರಕ್ಕೆ ಹೋಗುವ ಮಾರ್ಗದಲ್ಲಿ ತುಂಬಾ ಟ್ರಾಫಿಕ್ ಜಾಮ್‌ ಉಂಟಾಗಿ ವಾಹನ ಸವಾರರು ‌ಪರದಾಡುವಂತ ಪರಿಸ್ಥಿತಿ ಉಂಟಾಯ್ತು..
ಶಿವಕುಮಾರ್ ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೆಲಮಂಗಲ, ವಿಜಯಪುರ, ಹೊಸಕೋಟೆ ಯಲ್ಲಿ ರೋಡ್‌ಶೋ ಮೂಲಕ ವೀರಪ್ಪಮೊಯ್ಲಿ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.. ನೆಲಮಂಗಲ ದಲ್ಲಿ ಮಧ್ಯಾನ್ಹ ಎರಡು ಗಂಟೆಯಿಂದ ಒಂದು ಗಂಟೆ ಅಂದರೆ ೩ ಗಂಟೆಗೆ ಮುಗಿಸಿಕೊಂಡು ೪ ಗಂಟೆಗೆ ವಿಜಯಪುರ ಮತ್ತು ೬ ಗಂಟೆಗೆ ಹೊಸ ಕೋಟೆ ಯಲ್ಲಿ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು.. ಆದರೆ ನೆಲಮಂಗಲ ದಲ್ಲಿ ತಡವಾಗಿದ್ದರಿಂದ ದೇವನಹಳ್ಳಿಯ ವಿಜಯಪುರಕ್ಕೆ ಬರುವುದಕ್ಕೆ ಎರಡುವರೆ ಗಂಟೆಗು ಹೆಚ್ಚು ಕಾಲ ತಡವಾಗಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಸಚಿವರಿಗಾಗಿ ಕಾದು ಕಾದು ಸುಸ್ತಾದ್ರು..‌ಕೆಲವರು ಮೆನೆಗೆ ತೆರಳಿದರೆ ಇನ್ನು ಕೆಲವರು ಡಿಕೆಶಿಗಾಗಿ ಕಾದು ಕುಳಿತರು..

ಒಂದು ಕಡೆ ಕಾರ್ಯಕರ್ತರು ರಸ್ತೆಯ ಪಕ್ಕದಲ್ಲಿ ಕಾದು ನಿಂತಿದ್ದರಿಂದ ರಸ್ತೆಗೂ ಕಾರ್ಯಕರ್ತರು ಬರತೊಡಗಿದರು.. ಈ ವೇಳೆ ಕೋಲಾರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಶಿಡ್ಲಘಟ್ಟಕ್ಕೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಯ್ತು.. ಇನ್ನು ಪೊಲೀಸರು ಟ್ರಾಫಿಕ್ ಜಾಮ್ ಅನ್ನು ಸರಿದೂಗಿಸುವಲ್ಲಿ ಪರದಾಡಿದ್ರು..

Body:ನೊ

Conclusion:ನೊ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.