ETV Bharat / city

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ನಾಳೆ ಸಿಎಂ ಭೇಟಿ; ಕೋವಿಡ್ ಕೇರ್ ಸೆಂಟರ್ ಪರಿಶೀಲನೆ

ನಿರ್ಮಾಣಗೊಳ್ಳುತ್ತಿರುವ ದೇಶದ ಅತಿ ದೊಡ್ಡ ಕೋವಿಡ್ ಕೇರ್​​​​ಗಳಲ್ಲಿ ಒಂದಾಗಿರುವ ಬಿಐಇಎಸ್ ಕೋವಿಡ್ ಕೇರ್ ಸೆಂಟರ್​​ಗೆ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

High level meeting
ಉನ್ನತ ಮಟ್ಟದ ಸಭೆ
author img

By

Published : Jul 8, 2020, 2:11 PM IST

ಬೆಂಗಳೂರು: ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಶದ ಅತಿ ದೊಡ್ಡ ಕೋವಿಡ್ ಕೇರ್​​​​ಗಳಲ್ಲಿ ಒಂದಾಗಿರುವ ಬಿಐಇಎಸ್ ಕೋವಿಡ್ ಕೇರ್ ಸೆಂಟರ್​​ಗೆ ನಾಳೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಲಿದ್ದಾರೆ.

ಇಂದು ಬೆಳಗ್ಗೆ ಉನ್ನತಮಟ್ಟದ ಅಧಿಕಾರಿಗಳ ಮತ್ತು ಸಚಿವರ ತುರ್ತು ಸಭೆ ನಡೆಸಿದ ಸಿಎಂ, ಕೋವಿಡ್ ಕೇರ್ ಸೆಂಟರ್​​ಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ನಂತರ ನಾಳೆ ಖುದ್ದಾಗಿ ಕೋವಿಡ್ ಕೇರ್ ಸೆಂಟರ್​​​ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ಸೂಚಿಸಿದರು.

10 ಸಾವಿರಕ್ಕೂ‌ ಹೆಚ್ಚಿನ ಹಾಸಿಗೆ ಸೌಲಭ್ಯ ಇರುವ ಈ ಕೋವಿಡ್ ಕೇರ್ ಸೆಂಟರ್​​​​ನಲ್ಲಿ 100 ಐಸಿಯು ಬೆಡ್ ಇರಲಿದೆ. ಇಲ್ಲಿನ ಸೌಲಭ್ಯಗಳು, ವೆಚ್ಚ ಹಾಗು ನಿರ್ವಹಣೆ ಕುರಿತು ಸಿಎಂ ಪರಿಶೀಲನೆ ನಡೆಸಲಿದ್ದಾರೆ.

Covid Care Center
ಕೋವಿಡ್ ಕೇರ್ ಸೆಂಟರ್‌ನಲ್ಲಿ ಡಿಸಿಎಂ ಅಶ್ವಥ್‌ ನಾರಾಯಣ ಪರಿಶೀಲನೆ

ಜಿಕೆವಿಕೆ, ಹಜ್ ಭವನ, ರವಿಶಂಕರ್ ಗುರೂಜಿ ಆಶ್ರಮದಲ್ಲಿ ಈಗಾಗಲೇ ಕೋವಿಡ್ ಕೇರ್ ಕೇಂದ್ರಗಳು ಆರಂಭಗೊಂಡಿದ್ದು, ಅಲ್ಲಿನ‌ ನಿರ್ವಹಣೆ, ಸಮಸ್ಯೆಗಳ ಕುರಿತ ಪರಿಶೀಲನೆ ಹಾಗೂ ಕೋರಮಂಗಲದ ಒಳಾಂಗಣ ಕ್ರೀಡಾಂಗಣ, ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ನಿರ್ಮಾಣವಾಗುತ್ತಿರುವ ಸೆಂಟರ್​​​ಗಳಿಗೂ ಭೇಟಿ ನೀಡುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.