ETV Bharat / city

ಚಿಕ್ಕಪೇಟೆಯಲ್ಲಿ ಗರಿಗೆದರಿದ ವ್ಯಾಪಾರ ವಹಿವಾಟು: ವ್ಯಾಪಾರಸ್ಥರು ಫುಲ್ ಖುಷ್

author img

By

Published : Jun 21, 2021, 12:31 PM IST

ಬೆಂಗಳೂರಿನ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಚಿಕ್ಕಪೇಟೆ ಸುತ್ತಮುತ್ತಲ ಎರಡು ಕಿ.ಮೀ ವ್ಯಾಪ್ತಿಯ ಸಾವಿರಾರು ಅಂಗಡಿಗಳು ಬಾಗಿಲು ತೆರೆದಿದ್ದು, ಅಂಗಡಿಗಳನ್ನೇ ನಂಬಿಕೊಂಡ 2 ಲಕ್ಷ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Bangalore
ಚಿಕ್ಕಪೇಟೆಯಲ್ಲಿ ಗರಿಗೆದರಿದ ವ್ಯಾಪಾರ ವಹಿವಾಟು

ಬೆಂಗಳೂರು: ಇಂದಿನಿಂದ ಬೆಂಗಳೂರಲ್ಲಿ ಅನ್​ಲಾಕ್​ 2.0 ಆರಂಭವಾಗಿದೆ. ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆಗಳಿಗೆ ಬೆಳಗ್ಗೆ 6 ರಿಂದ ಸಂಜೆ 5 ಗಂಟೆಯವರೆಗೆ ವ್ಯಾಪಾರ ನಡೆಸಲು ಅನುಮತಿ ಸಿಕ್ಕಿದೆ.

ಹೀಗಾಗಿ, ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಚಿಕ್ಕಪೇಟೆ ಸುತ್ತಮುತ್ತಲ ಎರಡು ಕಿ.ಮೀ ವ್ಯಾಪ್ತಿಯ ಸಾವಿರಾರು ಅಂಗಡಿಗಳು ಬಾಗಿಲು ತೆರೆದಿದ್ದು, ಮಾಲೀಕರು ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಾರ-ವಹಿವಾಟು ಗರಿಗೆದರಿದ್ದು, ಅಂಗಡಿಗಳನ್ನೇ ನಂಬಿಕೊಂಡ 2 ಲಕ್ಷ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಕುರಿತು ಚಿಕ್ಕಪೇಟೆ ಗಾರ್ಮೆಂಟ್ಸ್ ಟ್ರೇಡರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಸಜ್ಜನ ರಾಜ್ ಮೆಹ್ತಾ ಮಾತನಾಡಿ, ಲಾಕ್​ಡೌನ್ ತೆರವು ಮಾಡಿ ವ್ಯಾಪಾರಕ್ಕೆ ಅನುಮತಿ ಕೊಡುವಂತೆ ಮನವಿ ಮಾಡಿದ್ದೆವು. ಅದಕ್ಕೆ ಸರ್ಕಾರ ಸ್ಪಂದಿಸಿದೆ. ಎಲ್ಲರೂ ಮಾಸ್ಕ್ ಧರಿಸಿ, ಅಂಗಡಿಗಳಿಗೆ ಸ್ಯಾನಿಟೈಸ್ ಮಾಡಿಸಿದ್ದೇವೆ.

ಸಾಮಾನ್ಯ ದಿನಗಳಲ್ಲಿ ಚಿಕ್ಕಪೇಟೆಯಿಂದ ಸರ್ಕಾರಕ್ಕೆ ಹತ್ತು ಸಾವಿರ ಕೋಟಿ ಆದಾಯ ಬರುತ್ತಿತ್ತು. ಆದರೆ, ಮೇ ತಿಂಗಳಲ್ಲಿ ಕೇವಲ ಎರಡು ಸಾವಿರ ಕೋಟಿ ಆದಾಯ ಬಂದಿದೆ. ಲಾಕ್​ಡೌನ್ ನಷ್ಟದಿಂದ ಸಾಕಷ್ಟು ಅಂಗಡಿ ಮಾಲೀಕರು ವ್ಯಾಪಾರ ನಿಲ್ಲಿಸಿಬಿಟ್ಟಿದ್ದಾರೆ. ಹೀಗಾಗಿ, ಬಿಬಿಎಂಪಿ ಆಸ್ತಿ ತೆರಿಗೆ ವಿನಾಯಿತಿ ಕೊಟ್ಟರೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಇನ್ನಾದರೂ ವ್ಯಾಪಾರ ವಹಿವಾಟು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದರು.

ಇದನ್ನೂ ಓದಿ: ಸೀಟು ಹಿಡಿಯಲು ಮುಗಿಬಿದ್ದ ಪ್ರಯಾಣಿಕರು; ಕೊರೊನಾ ಹಾಟ್‌ಸ್ಪಾಟ್ ಆಗ್ತಿದೆಯೇ BMTC ಬಸ್ ಸ್ಟಾಪ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.