ಬೆಂಗಳೂರು : ಪಂಜಾಬ್ ಕಾಂಗ್ರೆಸ್‌ನ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ರಾಜ್ಯ ಕಾಂಗ್ರೆಸ್‌ನಲ್ಲೂ ಇದೆ. ಅದ್ಯಾವಾಗ ಧಗ್ ಎಂದು ಹೊತ್ತಿಕೊಳ್ಳುತ್ತದೋ ಆ ದೇವರೇ ಬಲ್ಲ. ʼಕ್ಯಾಪ್ಟನ್ʼ ಇಲ್ಲದ ಹಡಗು ಸಾಗರದಲ್ಲಿ ದಿಕ್ಕೆಟ್ಟು ಓಡುತ್ತಿದೆ. ಇನ್ನೇನು ಮುಳುಗುವ ಹಂತಕ್ಕೆ ಬಂದಿದೆ. ಪಂಜಾಬ್‌ನ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಕ್ಷ ಬಿಟ್ಟು ಹೊರಡಲು ಸಿದ್ದರಾಗಿದ್ದಾರೆ. ಸ್ಥಿರ ನಾಯಕತ್ವವಿಲ್ಲದ ಪಕ್ಷದಲ್ಲಿ ಈ ದೇಶವನ್ನು ಭವಿಷ್ಯದಲ್ಲಿ ಮುನ್ನಡೆಸಲು ಸಾಧ್ಯವೇ? ಎಂದು ಮಾಜಿ ಸಚಿವ ಸಿಟಿ ರವಿ ಟ್ವೀಟ್ ಮಾಡಿದ್ದಾರೆ.
-
ಅಸ್ಥಿರ ಮನಸ್ಸಿನ ನವಜೋತ್ ಸಿಂಗ್ ಸಿಧು ಅಧಿಕಾರಕ್ಕಾಗಿ ಜೋತು ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ತರಲು ಏನೇನೋ ಸೆಣಸಾಟ.
— C T Ravi 🇮🇳 ಸಿ ಟಿ ರವಿ (@CTRavi_BJP) October 3, 2021 " class="align-text-top noRightClick twitterSection" data="
ದಲಿತ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ನೇಮಿಸಿ ಅಧಿಕಾರ ಮಾಡಲು ಬಿಡದ ಕಾಂಗ್ರೆಸ್ ಪಕ್ಷದ "ದಲಿತರ ಮೇಲೆ ತೋರಿಕೆ ಬರೀ ಪ್ರೀತಿ, ಅಧಿಕಾರದ ಮೇಲೆ ಆಸೆ" ಎದ್ದೆದ್ದು ತೋರುತ್ತಿದೆ.
2/6
">ಅಸ್ಥಿರ ಮನಸ್ಸಿನ ನವಜೋತ್ ಸಿಂಗ್ ಸಿಧು ಅಧಿಕಾರಕ್ಕಾಗಿ ಜೋತು ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ತರಲು ಏನೇನೋ ಸೆಣಸಾಟ.
— C T Ravi 🇮🇳 ಸಿ ಟಿ ರವಿ (@CTRavi_BJP) October 3, 2021
ದಲಿತ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ನೇಮಿಸಿ ಅಧಿಕಾರ ಮಾಡಲು ಬಿಡದ ಕಾಂಗ್ರೆಸ್ ಪಕ್ಷದ "ದಲಿತರ ಮೇಲೆ ತೋರಿಕೆ ಬರೀ ಪ್ರೀತಿ, ಅಧಿಕಾರದ ಮೇಲೆ ಆಸೆ" ಎದ್ದೆದ್ದು ತೋರುತ್ತಿದೆ.
2/6ಅಸ್ಥಿರ ಮನಸ್ಸಿನ ನವಜೋತ್ ಸಿಂಗ್ ಸಿಧು ಅಧಿಕಾರಕ್ಕಾಗಿ ಜೋತು ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ತರಲು ಏನೇನೋ ಸೆಣಸಾಟ.
— C T Ravi 🇮🇳 ಸಿ ಟಿ ರವಿ (@CTRavi_BJP) October 3, 2021
ದಲಿತ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ನೇಮಿಸಿ ಅಧಿಕಾರ ಮಾಡಲು ಬಿಡದ ಕಾಂಗ್ರೆಸ್ ಪಕ್ಷದ "ದಲಿತರ ಮೇಲೆ ತೋರಿಕೆ ಬರೀ ಪ್ರೀತಿ, ಅಧಿಕಾರದ ಮೇಲೆ ಆಸೆ" ಎದ್ದೆದ್ದು ತೋರುತ್ತಿದೆ.
2/6
ಅಸ್ಥಿರ ಮನಸ್ಸಿನ ನವಜೋತ್ ಸಿಂಗ್ ಸಿಧು ಅಧಿಕಾರಕ್ಕಾಗಿ ಜೋತು ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಏನೇನೋ ಸೆಣಸಾಟ. ದಲಿತ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ನೇಮಿಸಿ ಅಧಿಕಾರ ಮಾಡಲು ಬಿಡದ ಕಾಂಗ್ರೆಸ್ ಪಕ್ಷದ "ದಲಿತರ ಮೇಲೆ ಬರೀ ತೋರಿಕೆ ಪ್ರೀತಿ, ಅಧಿಕಾರದ ಮೇಲೆ ಆಸೆ" ಎದ್ದೆದ್ದು ತೋರುತ್ತಿದೆ ಎಂದು ಟೀಕಿಸಿದ್ದಾರೆ.
ನಮ್ಮ ಪ್ರಧಾನಿ ನರೇಂದ್ರ ಮೋದಿ ಏಕ ಕಾಲದಲ್ಲೇ ತಮ್ಮ ಸಂಪುಟಕ್ಕೆ 8 ದಲಿತ ಸಚಿವರನ್ನು ನೇಮಿಸಿಕೊಂಡಾಗ ಕಾಂಗ್ರೆಸ್ ಪಕ್ಷದ ಮುಖಂಡರು ಚುಚ್ಚುವ ಮಾತನಾಡಿದ್ದರು. ಈಗ ನಾಲ್ಕು ತಿಂಗಳು ದಲಿತರಿಗೆ ಪಂಜಾಬ್ನಲ್ಲಿ ಅಧಿಕಾರ ಕೊಟ್ಟು "ಮೊಣಕೈಗೆ ಬೆಣ್ಣೆ ಹಚ್ಚಿ ತಿನ್ನಿ" ಎಂದು ಹೇಳಿದಂತಿದೆ. ಈ ನಾಟಕ ಬುದ್ಧಿವಂತ ಜನರಿಗೆ ಅರ್ಥವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
-
ಪಂಜಾಬ್ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಅಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಕಂಗೆಟ್ಟಿದೆ.
— C T Ravi 🇮🇳 ಸಿ ಟಿ ರವಿ (@CTRavi_BJP) October 3, 2021 " class="align-text-top noRightClick twitterSection" data="
ಸಮಸ್ಯೆಗಳನ್ನು ಬಗೆಹರಿಸುವ ನಾಯಕರೇ ಇಲ್ಲದ ಪಕ್ಷ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದೆ.
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಒಳಗೊಂಡ ಹೈಕಮಾಂಡ್‌ಗೆ ಪಕ್ಷವನ್ನು ನಿರ್ವಹಿಸುವ ತ್ರಾಣವೇ ಇಲ್ಲವಾಗಿದೆ.
4/6
">ಪಂಜಾಬ್ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಅಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಕಂಗೆಟ್ಟಿದೆ.
— C T Ravi 🇮🇳 ಸಿ ಟಿ ರವಿ (@CTRavi_BJP) October 3, 2021
ಸಮಸ್ಯೆಗಳನ್ನು ಬಗೆಹರಿಸುವ ನಾಯಕರೇ ಇಲ್ಲದ ಪಕ್ಷ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದೆ.
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಒಳಗೊಂಡ ಹೈಕಮಾಂಡ್‌ಗೆ ಪಕ್ಷವನ್ನು ನಿರ್ವಹಿಸುವ ತ್ರಾಣವೇ ಇಲ್ಲವಾಗಿದೆ.
4/6ಪಂಜಾಬ್ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಅಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಕಂಗೆಟ್ಟಿದೆ.
— C T Ravi 🇮🇳 ಸಿ ಟಿ ರವಿ (@CTRavi_BJP) October 3, 2021
ಸಮಸ್ಯೆಗಳನ್ನು ಬಗೆಹರಿಸುವ ನಾಯಕರೇ ಇಲ್ಲದ ಪಕ್ಷ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದೆ.
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಒಳಗೊಂಡ ಹೈಕಮಾಂಡ್‌ಗೆ ಪಕ್ಷವನ್ನು ನಿರ್ವಹಿಸುವ ತ್ರಾಣವೇ ಇಲ್ಲವಾಗಿದೆ.
4/6
ಪಂಜಾಬ್ ಮತ್ತು ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಕಂಗೆಟ್ಟಿದೆ. ಸಮಸ್ಯೆಗಳನ್ನು ಬಗೆಹರಿಸುವ ನಾಯಕರೇ ಇಲ್ಲದ ಪಕ್ಷ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಒಳಗೊಂಡ ಹೈಕಮಾಂಡ್‌ಗೆ ಪಕ್ಷವನ್ನು ನಿರ್ವಹಿಸುವ ತ್ರಾಣವೇ ಇಲ್ಲವಾಗಿದೆ.
ಆ ಪಕ್ಷದ ಶಿಥಿಲ ಸ್ಥಿತಿಗೆ ಕೈಗನ್ನಡಿಯೊಳಗಿನ ಬಿಂಬ ಸ್ಪಷ್ಟವಾಗಿ ಕಾಣುತ್ತಿದೆ. ಪೂರ್ಣಾವಧಿ ಅಧ್ಯಕ್ಷರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಿ ಎಂದು ಹೇಳಿದ ಜಿ-23ರ ನಾಯಕ ಕಪಿಲ್ ಸಿಬಲ್ ಮನೆ ಮೇಲೆ ದಾಳಿ ಮಾಡಿ, ಕಾರನ್ನು ಜಖಂಗೊಳಿಸಿ ಟೊಮ್ಯಾಟೊ ಎಸೆದು ಹತ್ತಿಕ್ಕುವ ಪ್ರಯತ್ನ "ರೌಡಿಗಿರಿಯʼ" ಧ್ಯೋತಕ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ನೋಡಿ ನಮ್ಮ ಮಸಾಲೆ ಅರಿಯಲ್ಲ, ನಮ್ಮದನ್ನೇ ಆಧರಿಸಿ ಅಡುಗೆ ಮಾಡ್ತೇವೆ.. ಸಿ ಟಿ ರವಿ
ಕರ್ನಾಟಕದಲ್ಲೂ ಮಹಾಭ್ರಷ್ಟ ಪಕ್ಷದಲ್ಲಿ ಚುನಾವಣೆಗೆ 18 ತಿಂಗಳು ಇರುವಾಗಲೇ ಮುಖ್ಯಮಂತ್ರಿ ಗಾದಿಗಾಗಿ ಕಿತ್ತಾಟ, ಒಳಜಗಳ, ಮುನಿಸು, ಸಿದ್ದ ಗುದ್ದಾಟ, ಕೊತ್ವಾಲ್ ರಾಮಚಂದ್ರನ ಶಿಷ್ಯರ ರಂಪಾಟ ನೋಡಿದರೆ ಪಂಜಾಬ್ ಕಾಂಗ್ರೆಸ್‌ನ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇಲ್ಲೂ ಇದೆ. ಅದ್ಯಾವಾಗ ಧಗ್ ಎಂದು ಹೊತ್ತಿಕೊಳ್ಳುತ್ತದೋ ದೇವರೇ ಬಲ್ಲ ಎಂದು ಸರಣಿ ಟ್ವೀಟ್ ಮೂಲಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.