ETV Bharat / city

''ನಾವು ಪಂಚೆ ಧರಿಸುವ ಮಾಜಿ ಸಿಎಂ ಪುತ್ರನಿಗೆ ಶ್ರೀಕಿ ಜೊತೆ ಸಂಬಂಧವಿದೆ ಎನ್ನಬಹುದು, ಆದ್ರೆ ಅನ್ನಲ್ಲ''- ಸಿ.ಟಿ ರವಿ

author img

By

Published : Nov 9, 2021, 1:22 PM IST

Updated : Nov 9, 2021, 3:01 PM IST

ಕಾಂಗ್ರೆಸ್​​ನವರಂತೆ ನಾವು ಕೂಡ ಆಧಾರ ರಹಿತ ಆರೋಪ ಮಾಡಬಹುದು. ಪಂಚೆ ಧರಿಸುವ ಮಾಜಿ ಮುಖ್ಯಮಂತ್ರಿಯ ಪುತ್ರನಿಗೆ ಶ್ರೀಕಿ ಜೊತೆ ಸಂಬಂಧ ಇದೆ ಎನ್ನಬಹುದು. ಆದರೆ ನಾವು ಆ ರೀತಿ ಆರೋಪ ಮಾಡಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

c t ravi
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

ಬೆಂಗಳೂರು: ಬಿಟ್ ಕಾಯಿನ್ ವಿಚಾರದಲ್ಲಿ ನಾವ್ಯಾರೂ ಸಮರ್ಥನೆಗೆ ಮುಂದಾಗಿಲ್ಲ. ಕಾಂಗ್ರೆಸ್​​ನವರಂತೆ ನಾವು ಕೂಡ ಆಧಾರ ರಹಿತ ಆರೋಪ ಮಾಡಬಹುದು. ಪಂಚೆ ಧರಿಸುವ ಮಾಜಿ ಮುಖ್ಯಮಂತ್ರಿಯ ಪುತ್ರನಿಗೆ ಶ್ರೀಕಿ ಜೊತೆ ಸಂಬಂಧ ಇದೆ ಎನ್ನಬಹುದು. ಆದರೆ ನಾವು ಆ ರೀತಿ ಆರೋಪ ಮಾಡಲ್ಲ. ಕಾಂಗ್ರೆಸ್ ಬಳಿ ದಾಖಲೆ ಇದ್ದರೆ ಸುಪ್ರೀಂ ಕೋರ್ಟ್​​ಗೆ ಹೋಗಿ ತನಿಖೆಗೆ ಬೇಡಿಕೆ ಮಂಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ಗೆ ಯಾರ ಮೇಲೆ ನಂಬಿಕೆ ಇದೆಯೋ ಅವರಿಗೆ ದಾಖಲೆ ಕೊಡಲಿ. ನ್ಯಾಯಾಂಗದ ಮೇಲೆ ನಂಬಿಕೆ ಇದ್ದರೆ ಅಲ್ಲಿಗೆ ಆಧಾರಗಳನ್ನು ಕೊಡಲಿ. ಸಿಬಿಐ ಮೇಲೆ ವಿಶ್ವಾಸವಿದ್ದರೆ ಅವರಿಗೆ ಕೊಡಲಿ. ರಾಜ್ಯ ಪೊಲೀಸರ ಮೇಲೆ ವಿಶ್ವಾಸವಿದ್ದರೆ ಅವರಿಗೆ ಕೊಡಲಿ. ಅದನ್ನು ಬಿಟ್ಟು ಆಧಾರ ರಹಿತವಾಗಿ ಆರೋಪ ಮಾಡಿದರೆ ಹೇಗೆ? ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಫ್ಐಆರ್ ದಾಖಲಾಗಿದೆ. ಆರೋಪಪಟ್ಟಿಯನ್ನೂ ಸಹ ಸಲ್ಲಿಸಿದ್ದು ಬಿಜೆಪಿ ಸರ್ಕಾರ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.

ಈ ಹಿಂದೆ ಶ್ರೀಕಿ ಸಂಬಂಧ ಯಾರ ಜೊತೆಯಲ್ಲಿತ್ತು? ಮಲ್ಯ ಟವರ್​ ಬಳಿ ಯಾರ ಜೊತೆ ಪಾರ್ಟಿ ಮಾಡುತ್ತಾ ಕುಳಿತಿದ್ದ? ಬಿಜೆಪಿ ಶಾಸಕನ ಮಗನ ಜೊತೆಯಲ್ಲೋ ಕಾಂಗ್ರೆಸ್ ಶಾಸಕನ ಮಗನ ಜೊತೆಯಲ್ಲೋ?. ಮಲ್ಯ ಟವರ್​ ಬಳಿ ದೌರ್ಜನ್ಯ ನಡೆಸಿದಾಗ ಅವರ ಜೊತೆ ಇದ್ದ ವ್ಯಕ್ತಿ ಯಾರು ಎಂದು ಬಹಿರಂಗಪಡಿಸಲಿ. ಯಾವ ಪಕ್ಷದ ಶಾಸಕ ಎಂದು ಬಹಿರಂಗ ಪಡಿಸಲಿ. ಆಗ ಸತ್ಯ ಏನೆಂದು ಗೊತ್ತಾಗುತ್ತದೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್​ಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ನಾಯಕರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಸರ್ಕಾರ ಏನನ್ನೂ ಮುಚ್ಚಿಟ್ಟಿಲ್ಲ, ಸೂಕ್ತ ತನಿಖೆ ನಡೆಸುತ್ತಿದೆ. ಬಿಜೆಪಿ ಎಷ್ಟು ಮಾಡಿದರೂ ತೃಪ್ತಿ ಇಲ್ಲದಿದ್ದರೆ, ನಿರ್ದಿಷ್ಟವಾದ ಆಧಾರ ಇವರ ಬಳಿ ಇದ್ದಲ್ಲಿ ಅವರಿಗೆ ಯಾರ ಮೇಲೆ ವಿಶ್ವಾಸವಿದೆಯೋ ಅವರಿಗೆ ಕೊಡಲಿ. ದೇಶದ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದಿದ್ದರೆ ಇಟಲಿಗೆ ಹೋಗಿ ಕೊಡಲಿ ಯಾರು ಬೇಡ ಎಂದಿದ್ದಾರೆ. ಅವರನ್ನು ತಡೆದಿರುವವರು ಯಾರು? ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಆಹಾರ ಸಚಿವರ ಜಿಲ್ಲೆಯಲ್ಲೇ ಅನ್ನಭಾಗ್ಯ ಯೋಜನೆಯ ಅಕ್ಕಿ ಹಂದಿಗಳ ಪಾಲು!

ಯಾವ ಪಕ್ಷದವರೇ ಆಗಲಿ ಉಪ್ಪು ತಿಂದವರು ನೀರು ಕುಡಿಯುತ್ತಾರೆ. ನಾವು ಯಾರನ್ನೂ ಸಮರ್ಥನೆ ಮಾಡುತ್ತಿಲ್ಲ. ಆದರೆ ಆಧಾರವಿಲ್ಲದೇ ಆರೋಪ ಮಾಡಬಾರದು. ನಾವು ಕೂಡ ಗಾಳಿಯಲ್ಲಿ ಗುಂಡು ಹಾರಿಸಬಹುದು. ಒಬ್ಬ ಮಾಜಿ ಮುಖ್ಯಮಂತ್ರಿಯ ಮಗನ ಸಂಬಂಧ ಇದೆ ಎನ್ನಬಹುದು. ಆಗ ಎಲ್ಲರೂ ಮಾಜಿ ಸಿಎಂ ಯಾರು ಎಂದು ನೋಡುತ್ತಾರೆ. ಈ ರೀತಿ ನಾವು ಸಹ ಅನುಮಾನ ವ್ಯಕ್ತಪಡಿಸಬಹುದು. ಆದರೆ ನಾವು ಹಾಗೆಲ್ಲ ಗಾಳಿಯಲ್ಲಿ ಗುಂಡು ಹಾರಿಸಲ್ಲ ಎಂದರು.

ಜವಾಬ್ದಾರಿ ಇರುವವರು ಆರೋಪ ಮಾಡುವುದಾದರೆ ಸ್ಪಷ್ಟ ಪುರಾವೆಯನ್ನು ಎಲ್ಲರ ಮುಂದಿಡಲಿ. ತಪ್ಪು ಯಾರು ಮಾಡಿದರೂ ಅವರಿಗೆ ಶಿಕ್ಷೆಯಾಗಲಿದೆ. ಗಾಳಿಸುದ್ದಿ ಹರಿಬಿಟ್ಟು ಎಲ್ಲರ ಮೇಲೆ ಅನುಮಾನ ಬರುವಂತೆ ಏಕೆ ಮಾಡಬೇಕು. ಸುಪ್ರೀಂ ಕೋರ್ಟ್​ಗೆ ಹೋಗಿ ದಾಖಲೆಗಳನ್ನು ಕೊಟ್ಟು ಕೋರ್ಟ್ ಉಸ್ತುವಾರಿಯಲ್ಲಿ ತನಿಖೆಗೆ ಬೇಡಿಕೆ ಇರಿಸಲಿ ಎಂದರು.

Last Updated : Nov 9, 2021, 3:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.