ETV Bharat / city

ಸಾರಿಗೆ ನೌಕರರ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿದೆ: ಲಕ್ಷ್ಮಣ ಸವದಿ - ಸಾರಿಗೆ ನೌಕರರ ಪ್ರತಿಭಟನೆ ಸುದ್ದಿ

laxman savadi
ಲಕ್ಷ್ಮಣ ಸವದಿ
author img

By

Published : Dec 13, 2020, 6:09 PM IST

Updated : Dec 13, 2020, 7:52 PM IST

18:07 December 13

ಸಾರಿಗೆ ಸಿಬ್ಬಂದಿಯೊಂದಿಗಿನ ಸಂಧಾನ ಸಭೆ ಸಫಲ

ಲಕ್ಷ್ಮಣ ಸವದಿ

ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಭಾನುವಾರ ವಿಕಾಸಸೌಧದಲ್ಲಿ ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆ ಯಶಸ್ವಿಯಾಗಿದೆ.

ಸಾರಿಗೆ ಯೂನಿಯನ್​ಗಳೊಂದಿಗೆ ಲಕ್ಷ್ಮಣ ಸವದಿ ಸಂಧಾನ ಸಭೆ ನಡೆಸಿದ್ದು, ಬಹುತೇಕ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದೆ. ಈ ಕಾರಣದಿಂದ ಮೂರು ದಿನಗಳ ಪ್ರತಿಭಟನೆ ಅಂತ್ಯಗೊಂಡಿದೆ. ನಾಳೆಯಿಂದಲೇ ಬಸ್​​ಗಳು ರಸ್ತೆಗಿಳಿಯಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸಾರಿಗೆ ಮುಖಂಡರ ಜೊತೆ ಸಚಿವರಾದ ಸವದಿ, ಬೊಮ್ಮಾಯಿ, ಆರ್.ಅಶೋಕ್ ಸುದೀರ್ಘ ಚರ್ಚೆ ನಡೆಸಿದ್ದು, ಅವರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಬಗ್ಗೆ ಭರವಸೆ ನೀಡಿದ್ದಾರೆ‌ ಎನ್ನಲಾಗಿದೆ.

ಸುದೀರ್ಘ ಸಭೆಗಳ ಬಳಿಕ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ‌ ನೌಕರರನ್ನಾಗಿ ಮಾಡುವ ಬೇಡಿಕೆ ಬಿಟ್ಟು ಉಳಿದಂತೆ ಅವರ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಂಧಾನದ ಬಳಿಕ ಸಾರಿಗೆ ನೌಕರರಿಗೆ ಸಿಕ್ಕಿದ್ದೇನು..?

  • ಸಾರಿಗೆ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ
  • ಕೊರೊನಾದಿಂದ ಸಾವನ್ನಪ್ಪಿದ ನೌಕರರಿಗೆ 30 ಲಕ್ಷ ರೂ. ಪರಿಹಾರ
  • ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚನೆ
  • ತರಬೇತಿಯಲ್ಲಿರುವ ನೌಕರರ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಕೆ
  • ನಿಗಮದಲ್ಲಿ ಹೆಚ್ಆರ್​ಎಂಎಸ್ ಜಾರಿಗೊಳಿಸಲು ತೀರ್ಮಾನ
  • 'ನೋ ಕಲೆಕ್ಷನ್ ನೋ ಇಷ್ಯೂ' ಪದ್ಧತಿಯನ್ನು ಜಾರಿಗೊಳಿಸಲು ನಿರ್ಧಾರ
  • ಸಿಬ್ಬಂದಿಯು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ (ಬಾಟಾ)
  • ಸಾರಿಗೆ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ

ಸಾರಿಗೆ ನೌಕರರ ಸಂತಸ

ಸಾರಿಗೆ ನೌಕರರ ಮುಖಂಡರ ಜೊತೆ ರಾಜ್ಯ ಸರ್ಕಾರದ ನಡೆಸಿದ ಮಾತುಕತೆ ಯಶಸ್ವಿಯಾಗುತ್ತಿದ್ದಂತೆ ಫ್ರೀಡಂಪಾರ್ಕ್​​ನಲ್ಲಿ ಮೂರು ದಿನದಿಂದ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರು ಖುಷಿಯಾಗಿದ್ದಾರೆ.

ಓದಿ: ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್​ಗಳ ಸಂಚಾರ ಪುನಾರಂಭ

ಇದಕ್ಕೆ ಪ್ರತಿಕ್ರಿಯಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್,​​ ಸಾರಿಗೆ‌ ನೌಕರರ ಮುಖಂಡರೊಂದಿಗೆ ನಡೆಸಿದ ಮಾತುಕತೆ ನಡೆಸಿದ ಯಶಸ್ವಿಯಾಗಿದೆ ಎಂದು ಮಾಧ್ಯಮಗಳಿಂದ ತಿಳಿದುಬಂದಿದೆ‌. ಯೂನಿಯನ್ ಮುಖಂಡರು ಸ್ಥಳಕ್ಕೆ ಬಂದಿಲ್ಲ. ಅವರೊಂದಿಗೆ ಜೊತೆ ಚರ್ಚಿಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Last Updated : Dec 13, 2020, 7:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.