ETV Bharat / city

'ಕರ್ನಾಟಕದಲ್ಲಿ ನಿಮ್ಮದೇ ಪ್ರಪಂಚ ಸೃಷ್ಟಿಸಿ': ರಾಯಭಾರಿಗಳಿಗೆ ಸಿಎಂ ಬೊಮ್ಮಾಯಿ ಕರೆ - ಇನ್ವೆಸ್ಟ್ ಕರ್ನಾಟಕ - 2022

ಬೆಂಗಳೂರಿನಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಹೂಡಿಕೆದಾರರ ಸಮಾವೇಶದ ಕುರಿತು ನವದೆಹಲಿಯಲ್ಲಿ ವಿವಿಧ ದೇಶಗಳ ರಾಯಭಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಸಂವಾದ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : May 11, 2022, 6:51 AM IST

ಬೆಂಗಳೂರು: ಬಂಡವಾಳ ಹೂಡಿಕೆಗೆ ಕರ್ನಾಟಕ ಸೂಕ್ತವಾದ ಸ್ಥಳ. ಇಲ್ಲಿ ನಿಮ್ಮದೇ ಆದ ಪ್ರಪಂಚವನ್ನು ಸೃಷ್ಟಿಸಬಹುದು ಎಂದು ವಿವಿಧ ದೇಶಗಳ ರಾಯಭಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಕೊಟ್ಟರು. ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಹೂಡಿಕೆದಾರರ ಸಮಾವೇಶದ ಕುರಿತು ನವದೆಹಲಿಯಲ್ಲಿ ವಿವಿಧ ದೇಶಗಳ ರಾಯಭಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂವಾದ ನಡೆಸಿದರು.

ಕರ್ನಾಟಕದ ಅಭಿವೃದ್ಧಿ ವೈಜ್ಞಾನಿಕವಾಗಿದೆ. ತಂತ್ರಜ್ಞಾನದ ಬದಲಾವಣೆಗಳನ್ನು ರಾಜ್ಯ ಅಳವಡಿಸಿಕೊಂಡಿದೆ. ಆದ್ದರಿಂದ ಎಲ್ಲ ವಲಯಗಳಲ್ಲಿ ಸಹಜವಾದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಸಾಧ್ಯವಾಗಿದೆ. ಮೆಷಿನ್ ಟೂಲ್ಸ್‌ಗಳನ್ನು ಉತ್ಪಾದಿಸುವ ಮೊದಲ ರಾಜ್ಯ ನಮ್ಮದು. ದೇಶದಲ್ಲಿ ಮೊದಲ ಬಾರಿ ಏರೋಸ್ಪೇಸ್ ಘಟಕವನ್ನೂ ಸ್ಥಾಪಿಸಲಾಗಿದೆ. ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ನಿರ್ಮಿಸಲಾದ ಸ್ಯಾಟಲೈಟ್​ಗಳಲ್ಲಿ ಚಂದ್ರನೆಡೆಗೆ ಪ್ರಯಾಣಿಸಲಾಯಿತು. ಬಯೋಟೆಕ್ನಾಲಜಿ, ಫಾರ್ಮಾ ಕೈಗಾರಿಕೆಗಳು, ಐಟಿ ಕ್ಷೇತ್ರಗಳು ರಾಜ್ಯದಲ್ಲಿವೆ. ಅಮೆರಿಕದ ನಂತರ ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಎಂಬ ಖ್ಯಾತಿ ಇದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗಾಲಯಗಳು ಕರ್ನಾಟಕದಲ್ಲಿವೆ. ರಾಜ್ಯದಲ್ಲಿ 400 ಸಂಶೋಧನಾ ಕೇಂದ್ರಗಳಿದ್ದು, ಅವುಗಳಲ್ಲಿ 180 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳಾಗಿವೆ ಎಂದು ಸಿಎಂ ರಾಜ್ಯದ ಹಿರಿಮೆಯನ್ನು ವಿವರಿಸಿದರು.

ದಕ್ಷತೆ, ಉತ್ಕೃಷ್ಟತೆ ಆರ್ಥಿಕ ಚಟುವಟಿಕೆಯ ಮೂಲಮಂತ್ರ: ಜಾಗತೀಕರಣದಿಂದಾಗಿ ವಿಶ್ವ ಬಹಳ ಸಣ್ಣದಾಗಿದೆ. ದಕ್ಷತೆ ಹಾಗೂ ಉತ್ಕೃಷ್ಟತೆ ಆರ್ಥಿಕ ಚಟುವಟಿಕೆಯ ಮೂಲಮಂತ್ರ. ಆದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯಕರ ಸ್ಪರ್ಧೆ ಪ್ರಾರಂಭವಾಗಿದೆ. ಇದರಲ್ಲಿ ಶ್ರೇಷ್ಠರಾದವರು ಮನ್ನಣೆ ಗಳಿಸುತ್ತಾರೆ. ಕರ್ನಾಟಕವನ್ನು ಬಹಳ ಸದೃಢವಾಗಿ, ಸಶಕ್ತವಾಗಿ ವಿಶ್ವಕ್ಕೆ ಪರಿಚಯಿಸಲಾಗುತ್ತದೆ. ರಾಜ್ಯಕ್ಕೆ ಶ್ರೀಮಂತ ಪರಂಪರೆಯೇ ಭದ್ರ ಅಡಿಪಾಯ. ಮೌಲ್ಯಗಳು, ಪ್ರಾಮಾಣಿಕತೆ ನಮ್ಮ ಪರಂಪರೆಯ ಭಾಗ. ಅತಿಥಿಗಳೇ ದೇವರು ಎಂಬುದು ಕರ್ನಾಟಕದ ಸಂಸ್ಕೃತಿ. ಶ್ರೀಮಂತ ನೈಸರ್ಗಿಕ ಸಂಪತ್ತು ನಮ್ಮಲ್ಲಿದೆ ಎಂದು ಹೇಳಿದರು.

ಬಂಡವಾಳ ಹೂಡಿಕೆಯಿಂದ ಪರಸ್ಪರ ಲಾಭ: ಕರ್ನಾಟಕದಲ್ಲಿ 10 ಕೃಷಿ ಹವಾಮಾನ ಪ್ರದೇಶಗಳಿವೆ. ಪಶ್ಚಿಮ ಘಟ್ಟ, ಅರಬಿ ಸಮುದ್ರ ತೀರ, ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು, ಎಲ್ಲ ರೀತಿಯ ಬೆಳೆಗಳ ಕೃಷಿ ಇದೆ. ನೈಸರ್ಗಿಕ ಸಂಪತ್ತು ಹಾಗೂ ಕೃಷಿಕನ ಅಭಿವೃದ್ಧಿಶೀಲ ಚಿಂತನೆಯಿಂದ ಸದೃಢವಾದ ಕೃಷಿ ವಲಯ ಹಾಗೂ ಸೇವಾ ವಲಯವನ್ನು ನಿರ್ಮಿಸಲಾಗಿದೆ ಎಂದು ಬೊಮ್ಮಾಯಿ ವಿದೇಶಿ ರಾಯಭಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.