ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದಿಂದ ಯಲಹಂಕದ ಕೆರೆಯಲ್ಲಿ ನಿರ್ಮಿಸಿರುವ ನೂತನ ಪೆಡಲ್ ಬೋಟಿಂಗ್ ವ್ಯವಸ್ಥೆಗೆ ಶಾಸಕ ಎಸ್ ಆರ್ ವಿಶ್ವನಾಥ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಶಾಸಕ ಎಸ್.ಆರ್.ವಿಶ್ವನಾಥ್, ಯಲಹಂಕ ಕೆರೆ ಈ ಹಿಂದೆ ಕೊಳಚೆ ನೀರಿನಿಂದ ಕಲುಷಿತಗೊಂಡು ಅವಸಾನದ ಸ್ಥಿತಿಯಲ್ಲಿತ್ತು. ‘ಜಲಸಿರಿ ಪ್ರತಿಷ್ಠಾನ’ ಎಂಬ ಸಂಸ್ಥೆಯ ಮೂಲಕ ಅಭಿವೃದ್ಧಿಪಡಿಸಿದ ಬಳಿಕ ಸುಂದರ ಪ್ರವಾಸಿ ತಾಣವಾಗಿದೆ. ಆದ್ದರಿಂದ ಇಲ್ಲಿ ದೋಣಿ ವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ದುಬಾರಿ ವೆಚ್ಚ ತೆತ್ತು ಖಾಸಗಿ ದೋಣಿ ವಿಹಾರಗಳಲ್ಲಿ ವಿಹರಿಸಲು ಸಾಧ್ಯವಿಲ್ಲ. ಆದರೆ, ಇಲ್ಲಿ ಕಡಿಮೆ ವೆಚ್ಚದಲ್ಲಿ ಕುಟುಂಬ ಸಮೇತರಾಗಿ ಬಂದು ದೋಣಿ ವಿಹಾರ ಮಾಡಬಹುದು ಎಂದರು. ಸಾರ್ವಜನಿಕರಿಗೆ ಮೊದಲೆರಡು ದಿನಗಳ ಕಾಲ ಉಚಿತ ದೋಣಿ ವಿಹಾರ ವ್ಯವಸ್ಥೆ ಕಲ್ಪಿಸಲಾಗಿದೆ.