ಬೆಂಗಳೂರು: ಬಿಎಂಟಿಸಿ ಅಧಿಕಾರಿಗಳು, ಸಿಬ್ಬಂದಿ ಬಳಸುವ ವಾಹನಗಳಲ್ಲಿ ಕರ್ನಾಟಕ ಸರ್ಕಾರದ ನಾಮಫಲಕವಾಗಲಿ ಅಥವಾ ಲಾಂಛನವಾಗಲಿ ಬಳಸುವಂತಿಲ್ಲ. ಸಂಸ್ಥೆಯ ಇಲಾಖಾ ವಾಹನಗಳಲ್ಲಿರುವ ಸರ್ಕಾರದ ನಾಮಪಲಕ ಮತ್ತು ಲಾಂಛನ ಹಾಕಿದ್ದರೆ ಕೂಡಲೇ ತೆಗೆದುಹಾಕುವಂತೆ ಸಂಸ್ಥೆ ಸೂಚನೆ ನೀಡಿದೆ.
ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ. ಸಂಸ್ಥೆಯ ಇಲಾಖೆಯ ವಾಹನಗಳಲ್ಲಿರುವ ಕರ್ನಾಟಕ ಸರ್ಕಾರ ನಾಮಫಲಕ ಮತ್ತು ಸರ್ಕಾರದ ಲಾಂಛನಗಳನ್ನು ತುರ್ತಾಗಿ ತೆಗೆದುಹಾಕಲು ಸೂಚಿಸಿದೆ. ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ಈ ರೀತಿ ವಾಹನಗಳಿಗೆ ಬಳಸುವಂತಿಲ್ಲ, ಆಗೊಮ್ಮೆ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.