ETV Bharat / city

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ BS VI ವಾಹನ ಖರೀದಿಸಲು ಮುಂದಾದ BMTC - BS VI ಬಸ್

ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ BS VI ವಾಹನವನ್ನು (BMTC buys BS VI vehicle) ಖರೀದಿಸಲು ಬಿಎಂಟಿಸಿ ಸಂಸ್ಥೆ ಮುಂದಾಗಿದೆ. ಅಶೋಕ್ ಲೇಲ್ಯಾಂಡ್ ಪ್ರೈ. ಲಿಮಿಟೆಡ್ ಮುಂದಿನ ಫೆಬ್ರುವರಿ 2022 ರೊಳಗಾಗಿ ಬೆಂ.ಮ.ಸಾ.ಸಂಸ್ಥೆಗೆ ಬಸ್​ಗಳನ್ನು ಪೂರೈಸಲಿದೆ.

bmtc-buys-bs-vi-vehicle
ಬಿಎಸ್​ ವಿಐ ವಾಹನ
author img

By

Published : Nov 13, 2021, 3:38 PM IST

ಬೆಂಗಳೂರು: ಬಿಎಂಟಿಸಿ(BMTC) ಸಂಸ್ಥೆಯು ದೇಶದಲ್ಲೇ ಮೊಟ್ಟಮೊದಲ ಬಾರಿಗೆ BS VI ವಾಹನವನ್ನು (Bharat Stage Emission Standards) ಖರೀದಿಸಲು ಮುಂದಾಗಿದೆ. ಈ ವಾಹನಗಳು ಅತೀ ಶೀಘ್ರದಲ್ಲಿಯೇ ಸಂಸ್ಥೆಗೆ ಸೇರ್ಪಡೆಗೊಳ್ಳಲಿವೆ. ಈಗಾಗಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಮಾದರಿಯ BS VI ಬಸ್​​ನ್ನು ಪರಿವೀಕ್ಷಣೆ ಮಾಡಿದ್ದಾರೆ.

ಸಂಸ್ಥೆಯು BS VI ಮಾದರಿಯ ಒಟ್ಟು 565 ಬಸ್​ಗಳನ್ನು ಅಶೋಕ್ ಲೇಲ್ಯಾಂಡ್ ಪ್ರೈ. ಲಿಮಿಟೆಡ್ (M/s Ashok Leyland pvt. Ltd) ಅವರಿಂದ ಖರೀದಿಸಲು (BMTC buys BS VI vehicle) ಕಾರ್ಯಾದೇಶ ನೀಡಿದೆ. ಅದರಂತೆ ಎಲ್ಲಾ ಬಸ್ಸುಗಳನ್ನು ಮುಂದಿನ ಫೆಬ್ರುವರಿ 2022 ರೊಳಗಾಗಿ ಬೆಂ.ಮ.ಸಾ.ಸಂಸ್ಥೆಗೆ ಪೂರೈಸಲಿದ್ದಾರೆ. ಈ ವಾಹನವನ್ನು 2017-18 ರಲ್ಲಿ ಬಸ್​​ಗಳ ಖರೀದಿಗಾಗಿಯೇ ಮೀಸಲಿಟ್ಟಿರುವ ಹಣದಿಂದ ಖರೀದಿಸಲಾಗುತ್ತಿದೆ.

BS VI ವಾಹನಗಳ ವೈಶಿಷ್ಟ್ಯತೆ

  • ಇದು ಪರಿಸರ ಸ್ನೇಹಿಯಾಗಿದ್ದು ಗಾಳಿಯ ಗುಣಮಟ್ಟವನ್ನು ಸುಧಾರಿಸಿ, ವಾತಾವರಣದ ಮಾಲಿನ್ಯವನ್ನು ಕಡಿಮೆಗೊಳಿಸುತ್ತದೆ.
  • ಈ ವಾಹನವು BS IV ವಾಹನಗಳಿಗಿಂತ ಹೆಚ್ಚಿನ Engine ಸಾಮರ್ಥ್ಯವನ್ನು ಹೊಂದಿರುತ್ತದೆ (197HP).
  • ಈ ವಾಹನಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಇರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.