ETV Bharat / city

ರಾಷ್ಟ್ರಕವಿ, ವಿಶ್ವಮಾನವ ಕುವೆಂಪು ಅವರಿಗೆ ಅವಮಾನ ಮಾಡಿದ್ಯಾರು?: ಕಾಂಗ್ರೆಸ್ ಟೀಕಿಸಿದ ಬಿಜೆಪಿ - ಕಾಂಗ್ರೆಸ್​ ಟ್ವಿಟ್​

ಪಠ್ಯದಲ್ಲಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್​ ಟ್ವಿಟ್​ಗೆ ಬಿಜೆಪಿ ಸಹ ಸರಣಿ ಟ್ವಿಟ್​ ಮಾಡಿ ಪ್ರತಿಕ್ರಿಯಿಸಿದೆ..

bjp reacted on tweet to congress tweet about Kuvempu in 4th standard lesson
ಕುವೆಂಪುಗೆ ಅವರಿಗೆ ಅವಮಾನ ಮಾಡಿದ್ಯಾರು?: ಕಾಂಗ್ರೆಸ್ ಟೀಕಿಸಿದ ಬಿಜೆಪಿ
author img

By

Published : May 24, 2022, 3:51 PM IST

ಬೆಂಗಳೂರು : ಕಾಂಗ್ರೆಸ್‌ ಪಕ್ಷ ತನ್ನ ಸರ್ಕಾರದ ಅವಧಿಯಲ್ಲೇ ಮಾಡಿದ ಘನಂದಾರಿ ಕೆಲಸವನ್ನು ಬಿಜೆಪಿ ಸರ್ಕಾರದ ಮೇಲೆ ಕಟ್ಟಲು ಯತ್ನಿಸುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಷ್ಕರಣೆಗೊಂಡ ಪರಿಸರ ಅಧ್ಯಯನ ಪಠ್ಯಪುಸ್ತಕದ ʼಕೆಲವು ಪ್ರಸಿದ್ಧ ವ್ಯಕ್ತಿಗಳುʼ ಎಂಬ ಪಠ್ಯದಲ್ಲಿ ಮುದ್ರಿತಗೊಂಡ ಪಠ್ಯದ ಚಿತ್ರವನ್ನು ಹಂಚಿಕೊಂಡು ಇದು ಬಿಜೆಪಿ ಸರ್ಕಾರದ ಪರಿಷ್ಕರಣಾ ಸಮಿತಿ ಮಾಡಿದ್ದು ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಅದೇ ಶಬ್ದ, ಅವೇ ವಾಕ್ಯ, ಅವೇ ಸಾಲು! ಯಾವುದೇ ಬದಲಾವಣೆ, ಪರಿಷ್ಕರಣೆ ಮಾಡಿಲ್ಲ. ‘ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂದು ಕುವೆಂಪು ಅವರ ಕುರಿತು ಕಾಂಗ್ರೆಸ್ ಅವಧಿಯಲ್ಲಿ ಬರಗೂರು ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮುದ್ರಿಸಿತ್ತು. ಹಾಗಾದರೆ, ಕಾಂಗ್ರೆಸ್‌ ಸರ್ಕಾರದ ಕಾಲದಲ್ಲಿ ಆಗದ ಅವಮಾನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗುತ್ತಿದೆ ಎಂಬ ಹತಾಶೆಯ ಹಿಂದಿನ ಗುಪ್ತ ಅಜೆಂಡಾವೇನು? ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ‌.

  • Dear @INCKarnataka

    ಸಿದ್ದರಾಮಯ್ಯ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಷ್ಕರಣೆಗೊಂಡ ಪರಿಸರ ಅಧ್ಯಯನ ಪಠ್ಯಪುಸ್ತಕದ ʼಕೆಲವು ಪ್ರಸಿದ್ಧ ವ್ಯಕ್ತಿಗಳುʼ ಎಂಬ ಪಠ್ಯದಲ್ಲಿ ಮುದ್ರಿತಗೊಂಡ ವ್ಯಕ್ತಿ ಪರಿಚಯದ ಸಾಲುಗಳಿವು.

    ಹಾಗಾದರೆ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಯಾರು?#CONgressInsultedKuvempu pic.twitter.com/GFWQQpyWkt

    — BJP Karnataka (@BJP4Karnataka) May 24, 2022 " class="align-text-top noRightClick twitterSection" data=" ">

ಕಾಂಗ್ರೆಸ್‌ ಪಕ್ಷದ ನಾಟಕ ಈಗ ಬಯಲಾಗಿದೆ. ತಮ್ಮದೇ ಸರ್ಕಾರದ ಅವಧಿಯಲ್ಲಿ ತಾವೇ ನೇಮಿಸಿದ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಕುವೆಂಪು ಅವರನ್ನು ಶಬ್ದಗಳಲ್ಲಿ ಅವಮಾನಿಸಿತ್ತು. ಅದರ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುವ ಕಾಂಗ್ರೆಸ್‌ ಈಗ ರಾಷ್ಟ್ರಕವಿ ಕುವೆಂಪು ಅವರಿಗೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದು ಬೊಬ್ಬಿಡುತ್ತಿದೆ.

ಕಾಂಗ್ರೆಸ್‌ ಸರ್ಕಾರ ನೇಮಿಸಿದ ಬರಗೂರು ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕುವೆಂಪು ಅವರ ಎರಡು ಅತ್ಯುತ್ತಮ ಬರಹಗಳನ್ನು ಪಠ್ಯಗಳಿಂದ ಕೈಬಿಟ್ಟಿತ್ತು. ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಪಠ್ಯದಿಂದಲೇ ಈ ಸಮಿತಿ ತೆಗೆದು ಹಾಕಿತ್ತು. ವಾಸ್ತವ ಹೀಗಿರುವಾಗ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್‌ ಎನ್ನುವುದರಲ್ಲಿ ಅನುಮಾನವಿದೆಯೇ? ಎಂದು ಬಿಜೆಪಿ ಟೀಕಿಸಿದೆ.

  • ರಾಷ್ಟ್ರಕವಿ ಕುವೆಂಪು ಅವರ ಕುರಿತು ಪಾಠ ಇರುವ 4ನೇ ತರಗತಿ 'ಪರಿಸರ ಅಧ್ಯಯನ' ಪುಸ್ತಕದ ಪರಿಷ್ಕರಣೆ ಆಗಿಲ್ಲ.

    ರಾಜ್ಯ @BJP4Karnataka ಸರ್ಕಾರದ ಜನಪರ ಕಾರ್ಯಗಳನ್ನು‌ ಸಹಿಸದ ಕಾಂಗ್ರೆಸ್ ಪಕ್ಷದ ಮುಖಂಡರು ದಿನಕ್ಕೊಂದು ಸುಳ್ಳು ಹೇಳಿ‌ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ.

    ಸುಳ್ಳನ್ನು ಎಷ್ಟು ಸಲ ಹೇಳಿದರು ಸತ್ಯವಾಗದು ! pic.twitter.com/8oXgofvbda

    — B.C Nagesh (@BCNagesh_bjp) May 24, 2022 " class="align-text-top noRightClick twitterSection" data=" ">

ರಾಷ್ಟ್ರಕವಿ ಕುವೆಂಪು ಬರೆದ ʼಅನಲೆʼ ಎಂಬ ನಾಟಕ ಹಾಗೂ ʼಅಜ್ಜಯ್ಯನ ಅಭ್ಯಂಜನʼ ಎಂಬ ಸುಂದರ ಲಲಿತ ಪ್ರಬಂಧ ಕೈಬಿಟ್ಟಿತ್ತು. ಆದರೆ, ಬಿಜೆಪಿ ಸರ್ಕಾರ ನೇಮಿಸಿದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ʼಬಹುಮಾನʼ ಎಂಬ ಅರ್ಥಪೂರ್ಣ ಕವಿತೆ ಹಾಗೂ ʼಬೊಮ್ಮನಹಳ್ಳಿಯ ಕಿಂದರಿಜೋಗಿʼ ಎಂಬ ಶಿಶು ಸಾಹಿತ್ಯವನ್ನು ಸೇರಿಸಿದೆ. ಹಾಗಾದರೆ, ಕುವೆಂಪು ಅವರಿಗೆ ಅವಮಾನ ಮಾಡಿದ್ಯಾರು? ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ನಾಡಗೀತೆ, ಕುವೆಂಪು ಅವಮಾನಿಸಿದವರನ್ನು ಒದ್ದು ಒಳಕ್ಕೆ ಹಾಕಬೇಕು : ಚಕ್ರತೀರ್ಥ ವಿರುದ್ಧ ಹೆಚ್​ಡಿಕೆ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.