ETV Bharat / city

ಸಿದ್ದು ಇಂದಿರಾ ಕ್ಯಾಂಟೀನ್​​ಗೆ​ ಬರುತ್ತಾ ಹೊಸ 'ನಾಮ'..! ಮತ್ತೊಂದು ಹೆಸರು ಯಾವುದು? - bjp plan to Indira Canteens to be renamed

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ 'ಇಂದಿರಾ ಕ್ಯಾಂಟೀನ್' ಬದಲಿಗೆ 'ಕೆಂಪೇಗೌಡ ಕ್ಯಾಂಟೀನ್' ಅಥವಾ 'ಕುಟೀರ' ಎಂಬ ನಾಮಕರಣ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Indira Canteens to be renamed
author img

By

Published : Nov 15, 2019, 3:44 AM IST

Updated : Nov 15, 2019, 4:22 AM IST

ಬೆಂಗಳೂರು: ಸರ್ಕಾರ ಬದಲಾದಂತೆ ಹಿಂದಿನ ಸರ್ಕಾರದ ಯೋಜನೆಗಳು ಬದಲಾಗುವುದು ಸಾಮಾನ್ಯ. ಸದ್ಯ ಬಿಜೆಪಿ ಕೂಡ ಅದೇ ದಾರಿಗೆ ಬರುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್​ ಯೋಜನೆ ಹೆಸರು ಬದಲಾಯಿಸಲು ತಯಾರಿ ನಡೆಸುತ್ತಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕಿ ಹೆಸರಿರುವ 'ಇಂದಿರಾ ಕ್ಯಾಂಟೀನ್' ಬದಲಿಗೆ 'ಕೆಂಪೇಗೌಡ ಕ್ಯಾಂಟೀನ್ ಅಥವಾ 'ಕುಟೀರ' ಎಂಬ ನಾಮಕರಣ ಮಾಡುವ ಸಾಧ್ಯತೆ ಇದೆ. ಕ್ಯಾಂಟೀನ್ ನಿರ್ವಹಣೆಗೆ ಹಣದ ಸಮಸ್ಯೆ ಎದುರಾಗುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಅಲ್ಲದೆ, ಸರ್ಕಾರ ಕೂಡ ಪೂರ್ಣ ಪ್ರಮಾಣದ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಇದು ಬಿಬಿಎಂಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಪಾಲಿಕೆಯ ಆಡಳಿತ, ಒಳಗೊಳಗೆ ಇಂದೀರಾ ಕ್ಯಾಂಟೀನ್​​​ ಹೆಸರು ಬದಲಾಯಿಸುವ ಮಾತುಕತೆ ನಡೆಸುತ್ತಿದೆ.

ಈ ಕುರಿತು ದೂರವಾಣಿ ಮೂಲಕ ಮಾಹಿತಿ ನೀಡಿರುವ ಉಪಮೇಯರ್ ರಾಮ್​​ಮೋಹನ್ ರಾಜು, ಸರ್ಕಾರದ ಹಣಕಾಸು ಇಲಾಖೆ ಶೇ 25ರಷ್ಟು ಅನುದಾನ ನೀಡಲು ಒಪ್ಪಿದೆ. ಆದರೆ, ಇದರಿಂದ ಕ್ಯಾಂಟೀನ್​ ನಿರ್ವಹಣೆ ಅಸಾಧ್ಯ. ಆದರಿಂದ ಉಪಚುನಾವಣೆ ಬಳಿಕ ಮರುನಾಮಕರಣ ಮಾಡಿ, ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿಎಂ ಬಿಎಸ್​. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

Intro:ಉಪಚುನಾವಣೆ ಬಳಿಕ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಚಿಂತನೆ!

ಬೆಂಗಳೂರು- ಸಧ್ಯದಲ್ಲೇ ಇಂದಿರಾ ಕ್ಯಾಂಟೀನ್ ಬದಲು 'ಕೆಂೇಗೌಡ ಕ್ಯಾಂಟೀನ್ ಅಥವಾ 'ಕುಟೀರ' ಎಂಬ ನಾಮಕರಣವಾಗುವ ಸಾಧ್ಯತೆ ಇದೆ.. ಹೌದು ಬಿಜೆಪಿ ಆಡಳಿತ ಬಂದ ನಂತರ ಕಾಂಗ್ರೆಸ್ ನಾಯಕಿಯ ಹೆಸರಿರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹಣದ ಸಮಸ್ಯೆ ಎದುರಾಗ್ತಿದೆ..
ಸರ್ಕಾರವೂ ಪೂರ್ಣ ಪ್ರಮಾಣದ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ.. ಇದು ಬಿಬಿಎಂಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದು, ಇಂದಿರಾ ಕ್ಯಾಂಟೀನ್ ಗೆ ದೊಡ್ಡ ಮೊತ್ತದ ಅನುದಾನ ಹೊಂದಿಸುವುದು ಕಷ್ಟವಾಗ್ತಿದೆ. ಹೀಗಾಗಿ ಪಾಲಿಕೆಯ ಆಡಳಿತದ ಒಳಗೊಳಗೆ ಇಂದೀರಾ ಕ್ಯಾಂಟೀನ್ ಗಳ ಹೆಸರ‌್ನು ಬದಲಾಯಿಸುವ ಮಾತುಕತೆ ನಡೀತಿದೆ ಎನ್ನಲಾಗಿದೆ.
ಈ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿರುವ ಉಪಮೇಯರ್ ರಾಮ್ ಮೋಹನ್ ರಾಜು, ಸರ್ಕಾರದ ಹಣಕಾಸು ಇಲಾಖೆ ಶೇಕಡಾ ಇಪ್ಪತ್ತೈದರಷ್ಟು ಅನುದಾನ ಕೊಡಲು ಒಪ್ಪಿದ್ದು, ಇದರಿಂದ ನಿರ್ವಹಣೆ ಅಸಾಧ್ಯ.. ಹೀಗಾಗಿ ಉಪಚುನಾವಣೆ ಬಳಿಕ ಕೆಂಪೇಗೌಡ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಿ, ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಸೌಮ್ಯಶ್ರೀ
Kn_bng_04_Indira_canteen_7202707
Please use file shotsBody:..Conclusion:..
Last Updated : Nov 15, 2019, 4:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.