ETV Bharat / city

ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುತ್ತೇನೆ: ನೂತನ ಉಪಸಭಾಪತಿ ಪ್ರಾಣೇಶ್ - bjp member deputy speaker pranesh

ಇಂದು ಉಪಸಭಾಪತಿ ಆಗಿ ಆಯ್ಕೆಯಾಗಿರುವುದಕ್ಕೆ ಸಂತೋಷ ಮತ್ತು ದುಃಖ ಎರಡು ಆಗುತ್ತಿದೆ. ಧರ್ಮೇಗೌಡರ ಜಾಗಕ್ಕೆ ನನ್ನ ಆಯ್ಕೆಯಾಗಿದೆ. ಆದರೆ, ಅವರಿಲ್ಲ ಎನ್ನುವ ದುಃಖವಿದೆ‌. ಜನಪ್ರತಿನಿಧಿಯಾಗಿ ಸದನದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ಧರ್ಮೇಗೌಡರು ಕಿವಿಮಾತು ಹೇಳಿದ್ದರು ಎಂದು ಅವರೊಂದಿಗಿನ ಒಡನಾಟ ನೆನಪು ಮಾಡಿಕೊಂಡರು..

ಪ್ರಾಣೇಶ್
ಪ್ರಾಣೇಶ್
author img

By

Published : Jan 29, 2021, 7:12 PM IST

Updated : Jan 29, 2021, 7:23 PM IST

ಬೆಂಗಳೂರು : ಬಿಜೆಪಿ ಸದಸ್ಯನಾಗಿದ್ದರೂ ಈಗ ನಾನು ಉಪಸಭಾಪತಿ. ಸಭಾಪತಿ ಪೀಠದಲ್ಲಿ ನಿಷ್ಪಕ್ಷಪಾತವಾಗಿ ಯಾವುದೇ ತಾರತಮ್ಯ ತೋರದೆ ಜವಾಬ್ದಾರಿಯಿಂದ ಕಾರ್ಯನಿರ್ವಹಣೆ ಮಾಡುತ್ತೇನೆ ಎಂದು ನೂತನ ಉಪ ಸಭಾಪತಿ ಎಂ ಕೆ ಪ್ರಾಣೇಶ್ ಭರವಸೆ ನೀಡಿದರು.

ನೂತನ ಉಪ ಸಭಾಪತಿಯಾಗಿ ಆಯ್ಕೆಯಾದ ನಂತರ ಚೊಚ್ಚಲ ಭಾಷಣ ಮಾಡಿದ ಅವರು, ರಾಮ ಮಂದಿರ ನಿರ್ಮಾಣ ಹೋರಾಟಕ್ಕೆ ಕೈ ಜೋಡಿಸುವ ಮುಖಾಂತರ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು ನಂತರ 1989ರಲ್ಲಿ ಬಿಜೆಪಿಗೆ ಸೇರಿದೆ. ನಂತರ ಆರ್‌ಎಸ್‌ಎಸ್​​ ಸ್ವಯಂ‌ ಸೇವಕನಾದ ನಾನು ಅವರ ಮಾರ್ಗದರ್ಶನ, ನಡವಳಿಕೆ, ಅವರು ನೀಡಿದ ಸಲಹೆ, ಸೂಚನೆ ಅನುಸಾರ ಬೆಳೆದು ರಾಜಕಾರಣಕ್ಕೆ ಕಾಲಿಟ್ಟೆ.

ನಂತರ ಯುವ ಮೋರ್ಚಾ ಅಧ್ಯಕ್ಷನಾದೆ. ಹಿಂದೆ ಜಿಲ್ಲಾ ಪಂ‌ಚಾಯತ್​​ನಿಂದ ಸ್ಪರ್ಧೆ ಮಾಡಿದ್ದೆ. ನಂತರ ಮತ್ತಷ್ಟು ಎತ್ತರಕ್ಕೆ ಅವಕಾಶ ಸಿಕ್ಕಿತು. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್​ ಅಧ್ಯಕ್ಷನಾಗಿದ್ದೆ. ಈಗಲೂ ಉಪ‌ಸಭಾಪತಿ ಸ್ಥಾನಕ್ಕೆ ನನಗಿಂತಲೂ ಅರ್ಹರಿದ್ದರೂ ನನ್ನ ವಿಚಾರಧಾರೆಗೆ ಮನ್ನಣೆ ನೀಡಿ ಅವಕಾಶ ನೀಡಿದ್ದಾರೆ ಎಂದರು.

ಹಿರಿಯರೆಲ್ಲರೂ ಅರ್ಥ ಮಾಡಿಕೊಂಡು ಸಮಾಧಾನ ಚಿತ್ತದಿಂದಲೇ ನನ್ನ ಹೆಸರು ಆಯ್ಕೆ ಮಾಡಿದ್ದಾರೆ. ಉಪ‌ಸಭಾಪತಿ ಆಯ್ಕೆಗೆ ಸಿಎಂ ನಿವಾಸದಲ್ಲಿ ಸಭೆ ಕರೆದಾಗ ಹಿರಿಯರ ಹೆಸರು ಸೂಚಿಸುವ ಯೋಚನೆಯಲ್ಲಿ ಇದ್ದೆವು. ಆದರೆ, ಅಂದು ಸಂಜೆ 7.30ರ ಸುಮಾರಿಗೆ ನನ್ನ ಹೆಸರು ಪ್ರಸ್ತಾಪ ಆದಾಗ ನನಗೆ ಶಾಕ್ ಆಯಿತು.

ಎಲ್ಲರೂ ಸೇರಿ ನನ್ನ ಹೆಸರಿಗೆ ಸಹಮತ ವ್ಯಕ್ತಪಡಿಸಿದರು. ಉಪಸಭಾಪತಿ ಚುನಾವಣೆಯಲ್ಲೂ ಇಡೀ‌ ಸದನ ನನ್ನ ಮೇಲೆ ಪ್ರೀತಿ, ವಿಶ್ವಾಸ ತೋರಿದೆ. ಎಲ್ಲರ ಸಹಕಾರ, ನಂಬಿಕೆಗೆ ತಕ್ಕಂತೆ ಜವಾಬ್ದಾರಿಯಿಂದ ನಿರ್ವಹಿಸುವೆ ಎಂದು ಭರವಸೆ ನೀಡಿದರು.

ಸಂದರ್ಭಕ್ಕನುಗುಣವಾಗಿ ಆಡಳಿತ ಪಕ್ಷ, ಪ್ರತಿಪಕ್ಷದ ನಡುವೆ ಬಿಸಿ ಬಿಸಿ ಚರ್ಚೆ ಸಹಜ. ಆದರೆ, ಅವೆಲ್ಲಾ ಜನರ ಕಾಳಜಿ‌ ಚೌಕಟ್ಟಿನಲ್ಲಿರಬೇಕು, ಸಂಕಷ್ಟಕ್ಕೆ ಸ್ಪಂದಿಸುವ ರೀತಿಯಲ್ಲಿರಬೇಕು. ನಾನು ಆತ್ಮತೃಪ್ತಿಗಾಗಿ ಕಾರ್ಯನಿರ್ವಹಿಸುತ್ತೇನೆ, ಯಾವುದೇ ಬೇಧ ಭಾವವಿಲ್ಲದೆ ಕರ್ತವ್ಯ ನಿರ್ವಹಣೆ ಮಾಡುತ್ತೇನೆ ಎಂದರು.

ಇಂದು ಉಪಸಭಾಪತಿ ಆಗಿ ಆಯ್ಕೆಯಾಗಿರುವುದಕ್ಕೆ ಸಂತೋಷ ಮತ್ತು ದುಃಖ ಎರಡು ಆಗುತ್ತಿದೆ. ಧರ್ಮೇಗೌಡರ ಜಾಗಕ್ಕೆ ನನ್ನ ಆಯ್ಕೆಯಾಗಿದೆ. ಆದರೆ, ಅವರಿಲ್ಲ ಎನ್ನುವ ದುಃಖವಿದೆ‌. ಜನಪ್ರತಿನಿಧಿಯಾಗಿ ಸದನದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ಧರ್ಮೇಗೌಡರು ಕಿವಿಮಾತು ಹೇಳಿದ್ದರು ಎಂದು ಅವರೊಂದಿಗಿನ ಒಡನಾಟ ನೆನಪು ಮಾಡಿಕೊಂಡರು.

ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನೂತನ ಉಪ ಸಭಾಪತಿಗೆ ಶುಭ ಕೋರುತ್ತಾ, ವಿಧಾನ ಪರಿಷತ್​ನ ಅಗತ್ಯತೆ ಕುರಿತು ಪ್ರಸ್ತಾಪ ಮಾಡಿದರು. ಎರಡು ಸದನಗಳ ಇರುವಿಕೆಯ ಮಹತ್ವವನ್ನು ವಿವರಿಸಿದರು. ಒಂದು ಸದನದಲ್ಲಿ ಆದ ನಿರ್ಧಾರಗಳನ್ನು ಇನ್ನೊಂದು ಸದನ ಪರಾಮರ್ಶೆ ಮಾಡಬೇಕು. ಮತ್ತೊಂದು ದೃಷ್ಟಿಕೋನದಲ್ಲಿ ನೋಡಬೇಕು.

ಕೇವಲ ಬಹುಮತ ಇರುವುದು ಮುಖ್ಯವಲ್ಲ, ವಸ್ತು ನಿಷ್ಟತೆಯೂ ಮುಖ್ಯ. ಹಾಗಾಗಿ, ಈ ಸದನ ಮಹತ್ವದ್ದಾಗಿದೆ. ರಾಜ್ಯಪಾಲರ ನಂತರದ ಸ್ಥಾನ ಸಭಾಪತಿಯಾಗಿದೆ. ಪರಿಷತ್​ಗೆ ಅಷ್ಟೊಂದು ಮಹತ್ವ ನೀಡಲಾಗಿದೆ. ಸ್ಥಳೀಯ ಸಂಸ್ಥೆ, ಶಿಕ್ಷಣ, ನಾಮನಿರ್ದೇಶನದ ಮೂಲಕ ಇಲ್ಲಿಗೆ ಬಂದು ಸಾಧನೆ ಮಾಡಲು ಅವಕಾಶವಿದೆ ಎಂದು ಎರಡು ಸದನಗಳ ಅವಶ್ಯಕತೆ ಸಮರ್ಥಿಸಿದರು.

ಜೆಡಿಎಸ್ ಸದಸ್ಯ ಬೋಜೇಗೌಡ ಮಾತನಾಡಿ, ಪ್ರಾಣೇಶ್ ನಮ್ಮ ಜಿಲ್ಲೆಯವರು. ಜೊತೆಗೆ ಆತ್ಮೀಯರು. ಅವರು ಉಪ ಸಭಾಪತಿ ಆಗಿದ್ದು ಸಂತಸ. ನನ್ನ ಅಣ್ಣ ಧರ್ಮೇಗೌಡರಿಗೆ ಪ್ರಾಣೇಶ್ ಹೆಚ್ಚು ಆತ್ಮೀಯ ಸ್ನೇಹಿತ. ಇಬ್ಬರು ಒಟ್ಟಿಗೆ ಜಿಪಂ​​ನಲ್ಲಿ ಕೆಲಸ ಮಾಡಿದ್ದರು. ಅವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದನ್ನು ನೋಡಿದ್ದೇವೆ. ಸರಳ ಸಜ್ಜನಿಕೆಯ ಸ್ನೇಹಿತ.‌ ಎಲ್ಲರಿಗೂ ಅವರ ವ್ಯಕ್ತಿತ್ವ ಗೊತ್ತಿದೆ. ಸದನದ ಹಿರಿಮೆ, ಗರಿಮೆ ಎತ್ತಿ ಹಿಡಿಯುವ ಎಲ್ಲಾ ಗುಣ ಪ್ರಾಣೇಶ್ ಬಳಿ ಇದೆ ಎಂದರು.

ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಮಾತನಾಡಿ, ಪರಿಷತ್​ನ 6 ಪ್ರಮುಖ ಸ್ಥಾನ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾದವರಿಗೆ ಸಿಕ್ಕಿದೆ. ಸಭಾಪತಿ, ಉಪಸಭಾಪತಿ, ಸಭಾನಾಯಕ, ಪ್ರತಿಪಕ್ಷ ನಾಯಕ, ಸರ್ಕಾರಿ ಸಚೇತಕ, ಪ್ರತಿಪಕ್ಷ ಸಚೇತಕ ಸ್ಥಾನದಲ್ಲಿ ಸ್ಥಳೀಯ ಸಂಸ್ಥೆಯಿಂದ್ಲೇ ಆಯ್ಕೆಯಾಗಿದ್ದವರಾಗಿದ್ದೇವೆ.

ಪರಿಷತ್ ಇತಿಹಾಸದಲ್ಲಿ ಮೊದಲ ಬಾರಿ ಇಂತಹ ಘಟನೆ ನಡೆದಿದೆ. ಪ್ರಾಣೇಶ್ ಬಗ್ಗೆ ನನಗೆ ಗೌರವಿದೆ, ಪಕ್ಷಾತೀತವಾಗಿ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ ಎಂದರು. ವಿಧಾನ ಪರಿಷತ್ ಸದನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಫೋಟೋ ಹಾಕಿದ್ದಾರೆ. ಅದೇ ರೀತಿ ರಾಜ್ಯದ ಮೊದಲ‌ ಸಿಎಂ ಕೆ ಸಿ ರೆಡ್ಡಿ ಫೋಟೋ ಹಾಕುವಂತೆ ಮನವಿ ಮಾಡಿದರು.

Last Updated : Jan 29, 2021, 7:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.