ಬೆಂಗಳೂರು: ಹೇರೋಹಳ್ಳಿ ವಾರ್ಡ್ ಬಿಜೆಪಿ ಮುಖಂಡ ಅನಂತರಾಜ್ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಡರಹಳ್ಳಿ ಪೊಲೀಸರ ಮುಂದೆ ಅನಂತರಾಜು ಪತ್ನಿ ಸುಮಾ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ತಿಂಗಳು ಅನಂತರಾಜ್ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಬಳಿಕ ಪತ್ನಿ ಸುಮಾ, ತನ್ನ ಗಂಡ ಹನಿಟ್ರ್ಯಾಪ್ ಒತ್ತಡಕ್ಕೆ ಮಣಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಖಾ ಎಂಬುವವರು ಸಾವಿಗೆ ಕಾರಣ ಅವರನ್ನು ಬಂಧಿಸಬೇಕೆಂದು ದೂರು ನೀಡಿದ್ದರು.
ತನಿಖೆ ಚುರುಕುಗೊಳಿಸಿದ್ದ ಪೊಲೀಸರು ರೇಖಾಳನ್ನು ಬಂಧಿಸುತ್ತಿದ್ದಂತೆ ರೇಖಾ ಹಾಗೂ ಸುಮಾ ಅವರ ನಡುವೆ ನಡೆದ ಪೋನ್ ಸಂಭಾಷಣೆ ವೈರಲ್ ಆಗಿತ್ತು. ಪ್ರಕರಣಕ್ಕೆ ತಿರುವು ಸಿಗುತ್ತಿದ್ದಂತೆ ಸುಮಾ ಮೇಲೆ ಪೊಲೀಸರು ಅನುಮಾನದ ಕಣ್ಣು ಬಿಟ್ಟಿದ್ದರು. ವಿಚಾರಣೆಗೆ ಹಾಜರಾಗುವಂತೆ ಸುಮಾಗೆ ನೊಟೀಸ್ ಜಾರಿ ಮಾಡಿದ್ದರು.
ಇದನ್ನೂ ಓದಿ: ರಾಷ್ಟ್ರಕವಿ, ವಿಶ್ವಮಾನವ ಕುವೆಂಪು ಅವರಿಗೆ ಅವಮಾನ ಮಾಡಿದ್ಯಾರು?: ಕಾಂಗ್ರೆಸ್ ಟೀಕಿಸಿದ ಬಿಜೆಪಿ