ETV Bharat / city

ನಾಳೆಯಿಂದ ಬಿಜೆಪಿ 'ಜನಸ್ವರಾಜ್ ಸಮಾವೇಶ'.. ಪರಿಷತ್ ಕದನಕ್ಕೆ ಕಮಲ ಕಲಿಗಳಿಂದ ಭರ್ಜರಿ ತಾಲೀಮು.. - ಬಿಜೆಪಿ ಜನಸ್ವರಾಜ್ ಸಮಾವೇಶ ಸುದ್ದಿ

ರಾಜ್ಯದಲ್ಲಿ ವಿಧಾನಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ನಾಳೆಯಿಂದ ನ.21ರವರೆಗೆ ಸಮಾವೇಶಗಳನ್ನು ಆಯೋಜಿಸಿದೆ. ಮೊದಲನೇ ಸಮಾವೇಶದ ಆರಂಭದಲ್ಲಿ 4 ತಂಡಗಳು ಒಬ್ಬ ಗ್ರಾಮ ಪಂಚಾಯತ್‌ ಅಧ್ಯಕ್ಷನ ಮನೆಯಲ್ಲಿ ಉಪಾಹಾರ ಮಾಡಿ ಅಲ್ಲಿಂದ ಸಮಾವೇಶಕ್ಕೆ ಹೋಗುವ ಯೋಚನೆ ಮಾಡಿವೆ..

ಜನಸ್ವರಾಜ್ ಸಮಾವೇಶ
ಜನಸ್ವರಾಜ್ ಸಮಾವೇಶ
author img

By

Published : Nov 17, 2021, 8:24 PM IST

ಬೆಂಗಳೂರು : ರಾಜ್ಯದ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ನಾಳೆಯಿಂದ ಪ್ರತಿ ಜಿಲ್ಲೆಗೆ ಒಂದರಂತೆ ಬಿಜೆಪಿಯಿಂದ 'ಜನಸ್ವರಾಜ್ ಸಮಾವೇಶ' (BJP Janasvaraj Convention) ನಡೆಯಲಿದೆ. ನಾಲ್ಕು ತಂಡಗಳಲ್ಲಿ ನಾಲ್ಕು ದಿನಗಳ ಕಾಲ ಸಮಾವೇಶಗಳು ಜರುಗಲಿವೆ.

ರಾಜ್ಯದಲ್ಲಿ ವಿಧಾನಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ನಾಳೆಯಿಂದ ನ.21ರವರೆಗೆ ಸಮಾವೇಶಗಳನ್ನು ಆಯೋಜಿಸಲಾಗಿದೆ. ಒಂದನೇ ತಂಡ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ನೇತೃತ್ವದಲ್ಲಿ ಇರಲಿದೆ.

ಎರಡನೇ ತಂಡಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವ, ಮೂರನೇ ತಂಡವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಮತ್ತು ನಾಲ್ಕನೇ ತಂಡ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿವೆ.

ಮೊದಲನೇ ತಂಡವು ನವೆಂಬರ್ 18, 19, 20ರಂದು ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳ ಪ್ರವಾಸ ಮಾಡಲಿದೆ. ಇದರ ಸಂಚಾಲಕರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಹ ಸಂಚಾಲಕರಾಗಿ ಕೇಶವ ಪ್ರಸಾದ್ ಇರುತ್ತಾರೆ.

ಎರಡನೇ ತಂಡವು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸಂಚಾಲಕತ್ವ ಹೊಂದಿದ್ದು, ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಅವರ ಸಹ ಸಂಚಾಲಕತ್ವದಲ್ಲಿ 4 ದಿನಗಳ ಕಾಲ ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ ಮತ್ತು ಚಿಕ್ಕೋಡಿ, ಬೆಳಗಾವಿಗಳಲ್ಲಿ ಸಂಚರಿಸಲಿದೆ. ಉತ್ತರ ಕನ್ನಡದಿಂದ ಈ ಯಾತ್ರೆ ಆರಂಭವಾಗಲಿದೆ.

ಮೂರನೇ ತಂಡವು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಅವರ ಸಂಚಾಲಕತ್ವ, ರಾಜ್ಯ ಕಾರ್ಯದರ್ಶಿ ವಿನಯ ಬಿದರೆ ಅವರ ಸಹ ಸಂಚಾಲಕತ್ವ ಹೊಂದಿದೆ. ಈ ತಂಡವು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಪ್ರವಾಸ ಮಾಡಲಿದೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಸಂಚಾಲಕರಾಗಿ, ಮುನಿರಾಜು ಗೌಡ ಸಹ ಸಂಚಾಲಕರಾಗಿರುವ ನಾಲ್ಕನೇ ತಂಡವು ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ 7 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

ಮೊದಲನೇ ಸಮಾವೇಶದ ಆರಂಭದಲ್ಲಿ 4 ತಂಡಗಳು ಒಬ್ಬ ಗ್ರಾಮ ಪಂಚಾಯತ್‌ ಅಧ್ಯಕ್ಷನ ಮನೆಯಲ್ಲಿ ಉಪಾಹಾರ ಮಾಡಿ ಅಲ್ಲಿಂದ ಸಮಾವೇಶಕ್ಕೆ ಹೋಗುವ ಯೋಚನೆ ಮಾಡಿವೆ. ಗ್ರಾಮ ಪಂಚಾಯತ್ ಸದಸ್ಯರಿಗೆ ಹೆಚ್ಚು ಮಹತ್ವ ಕೊಡುತ್ತಿದೆ.

ಓದಿ: ನವೆಂಬರ್ 25ರಂದು ರಾಜ್ಯ ಸಚಿವ ಸಂಪುಟ ಸಭೆ ಕರೆದ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.