ETV Bharat / city

ಬಹು ಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ಗೆ ಬಿಜೆಪಿ ಎಂಟ್ರಿ - ಬಿಜೆಪಿ ಕರ್ನಾಟಕ

ಬಹು ಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ನಲ್ಲಿ ಬಿಜೆಪಿ ತನ್ನ ಖಾತೆಯನ್ನು ತೆರೆದಿದೆ.

BJP enter into micro blogging platform 'Koo'
ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ಗೆ ಬಿಜೆಪಿ ಎಂಟ್ರಿ
author img

By

Published : Nov 10, 2021, 11:03 AM IST

ಬೆಂಗಳೂರು: ಸ್ಥಳೀಯ ಜನರೊಂದಿಗೆ ಸಂವಾದ ನಡೆಸಲು ಮತ್ತು ರಾಜ್ಯದಲ್ಲಿ ಡಿಜಿಟಲ್ ಅಸ್ತಿತ್ವವನ್ನು ಬಲಪಡಿಸಲು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಕರ್ನಾಟಕ ವಿಭಾಗವು ಫೇಸ್ ಬುಕ್, ಟ್ವಿಟ್ಟರ್ ನಂತರ ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ನಲ್ಲಿ ತನ್ನ ಖಾತೆಯನ್ನು ತೆರೆದಿದೆ.

BJP enter into micro blogging platform 'Koo'
ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ಗೆ ಬಿಜೆಪಿ ಎಂಟ್ರಿ

@BJP4Karnataka ಹ್ಯಾಂಡಲ್ ಮೂಲಕ ಪಕ್ಷದಿಂದ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ವಿಚಾರಗಳನ್ನು ಬಿಜೆಪಿ ಕರ್ನಾಟಕ ವೇದಿಕೆಯಲ್ಲಿ ಹಂಚಿಕೊಂಡಿದೆ. “ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಜಗತ್ತಿನ ಅತ್ಯಂತ ನೆಚ್ಚಿನ ಜನನಾಯಕನಾಗಿ ಹೊರಹೊಮ್ಮಿದ್ದಾರೆ. ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ನಲ್ಲಿ ಜಗತ್ತಿನಾದ್ಯಂತದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರದ ದಿಗ್ಗಜ ನಾಯಕರ ಪೈಕಿ ಪ್ರಧಾನಿ ಮೋದಿ ಉನ್ನತ ಸ್ಥಾನದಲ್ಲಿದ್ದಾರೆ'' ಎಂಬ ಹಿನ್ನೆಲೆಯಲ್ಲಿ ''ಬಿಜೆಪಿ ಕರ್ನಾಟಕ ಕೂ ಖಾತೆ'' ತೆರೆಯಲಾಗಿದೆ.

'ಬಿಜೆಪಿ ಕರ್ನಾಟಕ ನಮ್ಮ ಬಹುಭಾಷಾ ವೇದಿಕೆಗೆ ಬಂದಿರುವುದು ಸಂತೋಷಕರ. ಇದು ಸ್ಥಳೀಯ ಭಾರತೀಯ ಭಾಷೆಗಳಾದ್ಯಂತ ಅಭಿವ್ಯಕ್ತಿಯನ್ನು ಶಕ್ತಗೊಳಿಸುತ್ತದೆ. ಕರ್ನಾಟಕದ ಜನರು ಈಗ ತಮ್ಮ ನೆಚ್ಚಿನ ಪಕ್ಷದೊಂದಿಗೆ ನೇರವಾಗಿ ಚರ್ಚಿಸಬಹುದಾಗಿದೆ ಮತ್ತು ಪಕ್ಷದ ಕುರಿತ ಎಲ್ಲ ಮಾಹಿತಿಯನ್ನು ಅವರ ಮಾತೃಭಾಷೆಯಲ್ಲೇ ತಿಳಿದುಕೊಳ್ಳಬಹುದಾಗಿದೆ' ಎಂದು 'ಕೂ' ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಫೈನಾನ್ಸ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಅಡ್ಡಗಟ್ಟಿ ದರೋಡೆ

ದೇಸಿ ಆ್ಯಪ್ ಕೂ ಸಾಕಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದು, ಕ್ರೀಡಾತಾರೆಯರು, ಸಿನಿಮಾ ತಾರೆಯರು ಮತ್ತು ಕ್ಷೇತ್ರಗಳಾದ್ಯಂತದ ವ್ಯಕ್ತಿಗಳ ಜೊತೆಗೆ, ಕರ್ನಾಟಕದ ರಾಜಕೀಯ ನಾಯಕರು ಕನ್ನಡದಲ್ಲಿ 'ಕೂ' ಮಾಡುವ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ @bsbommai, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ @bsybjp, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ @h_d_devegowda, ಕರ್ನಾಟಕ ಕಾಂಗ್ರೆಸ್ @inckarnataka ಮತ್ತು ಜನತಾ ದಳ @jds_official ಸೇರಿದಂತೆ ಈಗಾಗಲೇ ಕರ್ನಾಟಕದ ಅನೇಕ ಗಣ್ಯರು ಕೂ ಆ್ಯಪ್ ಪ್ರವೇಶಿಸಿದ್ದಾರೆ ಎಂದು 'ಕೂ' ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.