ETV Bharat / city

ಪರಿಷತ್​ನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಸಿಕ್ತು ಬಹುಮತ.. ಉಭಯ ಸದನಗಳಲ್ಲಿ ಕಮಲ ಕಮಾಲ್! - ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಜಯ

ವಿಧಾನ ಪರಿಷತ್ತಿನಲ್ಲೂ ಬಿಜೆಪಿಗೆ ಬಹುಮತ ಸಿಕ್ಕಿದೆ. ಈ ಮೂಲಕ ಮೇಲ್ಮನೆಯಲ್ಲಿ ಮಸೂದೆ ಅಂಗೀಕಾರಕ್ಕಿದ್ದ ತೊಡಕು ನಿವಾರಣೆಗೆಯಾಗಿದೆ.

BJP Majority
BJP Majority
author img

By

Published : Jun 17, 2022, 7:46 AM IST

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಬಹುಮತ ಇಲ್ಲ ಎಂಬ ಕೊರಗು ಎದುರಿಸುತ್ತಿದ್ದ ಆಡಳಿತ ಪಕ್ಷ ಬಿಜೆಪಿಗೆ ಈಗ ಮೇಲ್ಮನೆಯಲ್ಲೂ ಬಹುಮತ ಲಭ್ಯವಾಗಿದೆ. ಇತ್ತೀಚೆಗೆ ವಿಧಾನಸಭೆ, ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಿಂದ ಒಟ್ಟು 11 ಸ್ಥಾನಗಳಿಗೆ ನಡೆದ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 6 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಸದಸ್ಯರ ಸಂಖ್ಯೆಯನ್ನು 39ಕ್ಕೆ ಹೆಚ್ಚಿಸಿಕೊಂಡು ಮೆಜಾರಿಟಿ ಸಾಧಿಸಿದೆ.

ಬಿಜೆಪಿಯು ವಿಧಾನಸಭೆಯಲ್ಲಿ ಬಹುಮತ ಹೊಂದಿದ್ದರೂ ಕೌನ್ಸಿಲ್​​ನಲ್ಲಿ ಬಹುಮತದ ಕೊರತೆ ಇದ್ದುದರಿಂದ ಅಧಿವೇಶನ ನಡೆಯುವ ಸಂದರ್ಭಗಳಲ್ಲಿ ಮತಾಂತರ ನಿಷೇಧ ಸೇರಿದಂತೆ ಹಲವಾರು ವಿವಾದಾತ್ಮಕ ವಿಧೇಯಕಗಳಿಗೆ ಅಂಗೀಕಾರ ಪಡೆಯುವಾಗ ಎಚ್ಚರಿಕೆಯ ಹೆಜ್ಜೆಯಿಡಬೇಕಾಗಿತ್ತು.

ಪ್ರತಿಪಕ್ಷ ಕಾಂಗ್ರೆಸ್ ಪ್ರಮುಖ ವಿಧೇಯಕಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದಾಗ ಬಿಜೆಪಿ ಮಸೂದೆಗೆ ಅಂಗೀಕಾರ ಪಡೆಯಲು ಜೆಡಿಎಸ್ ನೆರವು ಪಡೆಯಬೇಕಾಗಿತ್ತು. ಪರಿಷತ್ತಿನಲ್ಲಿ ಬಹುಮತದ ಕೊರತೆಯಿಂದ ಆಗುವ ಅಡಚಣೆಗಳ ನಿವಾರಣೆಗೆ ಬಹುಮತ ಸಾಧಿಸಲೇಬೇಕೆನ್ನುವ ಗುರಿಯಿಟ್ಟುಕೊಂಡು ಚುನಾವಣೆ ಕಾರ್ಯತಂತ್ರ ರೂಪಿಸಿದ ಬಿಜೆಪಿ ಎರಡು ಶಿಕ್ಷಕರ ಕ್ಷೇತ್ರ ಮತ್ತು ಎರಡು ಪದವೀಧರ ಕ್ಷೇತ್ರದಲ್ಲಿ ನಡೆದ ಮೇಲ್ಮನೆ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಗುರಿ ಸಾಧಿಸಿದೆ.

ವಿಧಾನಸಭೆಯಿಂದ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕರ ಸಂಖ್ಯಾಬಲಕ್ಕನುಗುಣವಾಗಿ 4 ಸೀಟುಗಳನ್ನು ಮತ್ತು ಶಿಕ್ಷಕರ, ಪದವೀಧರರ 4 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 2 ಸೀಟುಗಳನ್ನು ಗೆದ್ದು ಮೇಲ್ಮನೆಯಲ್ಲಿ ತನ್ನ ಸಂಖ್ಯಾಬಲ 39ಕ್ಕೆ ವೃದ್ಧಿಸಿಕೊಂಡಿದೆ.

75 ಸದಸ್ಯ ಬಲದ ವಿಧಾನ ಪರಿಷತ್ತಿನಲ್ಲಿ ಬಿಜೆಪಿ - 39, ಕಾಂಗ್ರೆಸ್ - 26, ಜೆಡಿಎಸ್ - 8 , ಪಕ್ಷೇತರ - 1, ಖಾಲಿ - 1 (ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿರುವುದು) ಬಲಾಬಲ ಹೊಂದಿವೆ. ಸದ್ಯದ ಪರಿಸ್ಥಿತಿಯಲ್ಲಿ ಬಹುಮತಕ್ಕೆ 37 ಸದಸ್ಯರ ಅಗತ್ಯತೆ ಇತ್ತು. ಒಂದು ಸ್ಥಾನ ಹೆಚ್ಚು ಗೆಲ್ಲುವುದರೊಂದಿಗೆ ಭಾರತೀಯ ಜನತಾ ಪಕ್ಷ ನಿಚ್ಚಳ ಬಹುಮತ ಪಡೆದುಕೊಂಡಿದೆ.

ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಸದ್ಯ ರಾಜ್ಯ ವಿಧಾನ ಪರಿಷತ್​ನಲ್ಲೂ ಕಮಲ ಪೂರ್ಣವಾಗಿ ಅರಳಿ ಬಹುಮತ ಸಾಧಿಸಿದೆ. ರಾಜ್ಯಸಭೆಯಲ್ಲೂ ಕೂಡ ಬಹುಮತದ ಅಂಚಿನಲ್ಲಿದೆ. ಈ ಮೂಲಕ ಕೆಳ ಮನೆ, ಮೇಲ್ಮನೆಯಲ್ಲೂ ಬಿಜೆಪಿ ಬಹುಮತ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

(ಇದನ್ನೂ ಓದಿ: ಪ್ರತಿಭಟನೆ ಫಲ: ಅಗ್ನಿಪಥ್​ ನೇಮಕಾತಿಗೆ ಗರಿಷ್ಠ ವಯೋಮಿತಿ ಹೆಚ್ಚಿಸಿದ ಕೇಂದ್ರ ಸರ್ಕಾರ!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.