ಬೆಂಗಳೂರು: ಸಾಮಾನ್ಯ ಹಳ್ಳಿಯಿಂದ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸುವ ಮಟ್ಟಕ್ಕೆ ಬೆಳೆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಡಳಿತ ಸಾಧನೆ ಒಳಗೊಂಡ ಕೃತಿ ಡಿಸೆಂಬರ್ 13 ರಂದು ಬಿಡುಗಡೆಯಾಗಲಿದೆ.
ದೇವೇಗೌಡರ ಜೀವನ ಚರಿತ್ರೆಯನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಬರೆದಿದ್ದು, 'ಫರೋಸ್ ಇನ್ ಎ ಫೀಲ್ಡ್: ದಿ ಅನ್ಎಕ್ಸ್ಫ್ಲೋರ್ಡ್ ಲೈಫ್ ಆಫ್ ಹೆಚ್.ಡಿ.ದೇವೇಗೌಡ' ಎಂಬುದು ಈ ಪುಸ್ತಕದ ಹೆಸರಾಗಿದೆ. ನವದೆಹಲಿಯಲ್ಲಿ ಡಿ.13 ರಂದು ಖ್ಯಾತ ವಕೀಲ ಪಾಲಿ ಎಸ್. ನಾರಿಮನ್ ಅವರು ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಿಧಾನ ಪರಿಷತ್ ಫೈಟ್: ಇಂದಿನಿಂದ ದೇವೇಗೌಡರ ಮತಬೇಟೆ
ಈಗಾಗಲೇ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಆರು ಸಾವಿರ ಕೃತಿಗಳನ್ನು ಖರೀದಿಸಿದೆ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ರಾಜ್ಯ ಮತ್ತು ದೇಶಕ್ಕೆ ನೀಡಿರುವ ಸಾಧನೆಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. 600 ಪುಟಗಳ ಈ ಪುಸ್ತಕವನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸುತ್ತಿದ್ದು, ದೇವೇಗೌಡರ ಆರು ದಶಕಗಳ ರಾಜಕೀಯ ಜೀವನವನ್ನು ಮುದ್ರಿಸಲಾಗಿದೆ.