ETV Bharat / city

ಬಯೋ ಸ್ಪೆಕ್ಟ್ರಂ ಸಮೀಕ್ಷೆ: ರಾಜ್ಯದ ಇನ್​ಕ್ಯುಬೇಟರ್​ಗಳಿಗೆ ಅಗ್ರಸ್ಥಾನ

author img

By

Published : Jun 4, 2022, 5:33 PM IST

ಈ ವರ್ಷದ ರಾಷ್ಟ್ರೀಯ ಬಯೋಸ್ಪೆಕ್ಟ್ರಂ ಸಮೀಕ್ಷೆಯಲ್ಲಿ 40 ಇನ್​ಕ್ಯುಬೇಟರ್​ಗಳನ್ನು ಅಂತಿಮ ಸುತ್ತಿನಲ್ಲಿ ಪರಿಗಣಿಸಲಾಗಿತ್ತು. ಈ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ..

Minister Dr. C.N.Ashwattha Narayana
ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು : ರಾಜ್ಯ ಸರ್ಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲ ಪಡೆದಿರುವ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ (ಬಿಬಿಸಿ) ಮತ್ತು ಸೆಂಟರ್ ಫಾರ್ ಸೆಲ್ಯುಲರ್ ಆ್ಯಂಡ್ ಮಾಲಿಕ್ಯುಲರ್ ಪ್ಲಾಟ್ ಫಾರಂಸ್ (ಸಿ-ಕ್ಯಾಂಪ್), ಬಯೋ ಸ್ಪೆಕ್ಟ್ರಂ ವಾರ್ಷಿಕ ಸಮೀಕ್ಷೆಯಲ್ಲಿ ಸಾರ್ವಜನಿಕ ವಲಯ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿವೆ.

ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ್‌ ನಾರಾಯಣ ಶನಿವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಸರ್ಕಾರದ ಕರ್ನಾಟಕ ಇನ್ನೋವೇಟಿವ್ ಟೆಕ್ನಾಲಾಜಿಕಲ್ ಸೊಸೈಟಿಯ (ಕಿಟ್ಸ್) ಬೆಂಬಲ ಹೊಂದಿರುವ ಮಣಿಪಾಲ್ ಬಯೋ ಇನ್​ಕ್ಯುಬೇಟರ್ ಸಂಸ್ಥೆಯು ಖಾಸಗಿ ವಲಯದಡಿ ಐದನೇ ಸ್ಥಾನ ಗಳಿಸಿದೆ ಎಂದು ತಿಳಿಸಿದ್ದಾರೆ.

top-rank-for-states-incubaters
ರಾಜ್ಯದ ಇನ್​ಕ್ಯುಬೇಟರ್​ಗಳಿಗೆ ಅಗ್ರಸ್ಥಾನ

ಬಿಬಿಸಿ ಮತ್ತು ಸಿ-ಕ್ಯಾಂಪ್ ಎರಡೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಉಪಕ್ರಮಗಳಾಗಿವೆ. ಇವುಗಳಿಗೆ ಕಿಟ್ಸ್ ಮೂಲಕ ಬೆಂಬಲ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

40 ಇನ್​ಕ್ಯುಬೇಟರ್​ಗಳು ಅಂತಿಮ ಸುತ್ತಿಗೆ : ಈ ವರ್ಷದ ರಾಷ್ಟ್ರೀಯ ಬಯೋಸ್ಪೆಕ್ಟ್ರಂ ಸಮೀಕ್ಷೆಯಲ್ಲಿ 40 ಇನ್​ಕ್ಯುಬೇಟರುಗಳನ್ನು ಅಂತಿಮ ಸುತ್ತಿನಲ್ಲಿ ಪರಿಗಣಿಸಲಾಗಿತ್ತು. ರಾಜ್ಯದಲ್ಲಿ ನವೋದ್ಯಮಗಳಿಗೆ ಅಗತ್ಯವಾದ ಕಾರ್ಯ ಪರಿಸರವನ್ನು ಸೃಷ್ಟಿಸಲಾಗಿದೆ. ಈ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಇದರಲ್ಲಿ ವಿಶೇಷವಾಗಿ, ಜೈವಿಕ ವಿಜ್ಞಾನ ಮತ್ತು ಆರೋಗ್ಯ ವಿಜ್ಞಾನ ಕ್ಷೇತ್ರಗಳಿಗೆ ಆದ್ಯ ಗಮನ ಹರಿಸಲಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಐಟಿ-ಬಿಟಿ ಸಚಿವರನ್ನು ಭೇಟಿಯಾದ ಇಸ್ರೇಲ್ ನಿಯೋಗ.. ರಾಜ್ಯದಲ್ಲಿ ನವೋದ್ಯಮವು ಬೆಳೆಯುತ್ತಿರುವುದರ ಬಗ್ಗೆ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.