ETV Bharat / city

ಪೊಲೀಸ್ ವಸತಿಗೃಹ ಆವರಣದಲ್ಲಿ ಜೈವಿಕ ಅನಿಲ ಸ್ಥಾವರ: ಗೇಲ್ ಗ್ಯಾಸ್​ನೊಡನೆ ಬೆಂಗಳೂರು ಪೊಲೀಸ್ ಒಡಂಬಡಿಕೆ - ಬೆಂಗಳೂರಿನ ಆಡುಗೋಡಿ ಸಮುಚ್ಚಯ

ಆಡುಗೋಡಿ ಪೊಲೀಸ್ ವಸತಿಗೃಹ ಸಮುಚ್ಚಯದಲ್ಲಿ ಗೇಲ್ ಗ್ಯಾಸ್ ಲಿಮಿಟೆಡ್​​ ಹಾಗೂ ಹಸಿರುದಳ ಸಂಸ್ಥೆಗಳ ಸಹಯೋಗದೊಂದಿಗೆ ಪೊಲೀಸ್ ವಸತಿಗೃಹ ಆವರಣದಲ್ಲಿ ಜೈವಿಕ ಅನಿಲ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ.

bio-gas-plant-in-police-quarters-in-bengaluru
ಪೊಲೀಸ್ ವಸತಿಗೃಹ ಆವರಣದಲ್ಲಿ ಜೈವಿಕ ಅನಿಲ ಸ್ಥಾವರ: ಗೇಲ್ ಗ್ಯಾಸ್​ನೊಡನೆ ಬೆಂಗಳೂರು ಪೊಲೀಸ್ ಒಡಂಬಡಿಕೆ
author img

By

Published : Jan 11, 2022, 2:37 AM IST

ಬೆಂಗಳೂರು: ನಗರದ ಆಡುಗೋಡಿಯ ಸಿಎಆರ್ (ದಕ್ಷಿಣ) ಪೊಲೀಸ್ ವಸತಿಗೃಹ ಆವರಣದಲ್ಲಿ ಜೈವಿಕ ಅನಿಲ ಸ್ಥಾವರವನ್ನು ಸ್ಥಾಪಿಸಲು ಗೇಲ್ ಗ್ಯಾಸ್ ಲಿಮಿಟೆಡ್​ ಹಾಗೂ ಹಸಿರುದಳ ಸಂಸ್ಥೆಗಳ ಸಹಯೋಗದೊಂದಿಗೆ ಸ್ಥಾಪಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಜೈವಿಕ ಅನಿಲ ಸ್ಥಾವರವನ್ನು ನಿರ್ಮಿಸುವ ಸಂಬಂಧ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂತ್, ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಸಮ್ಮುಖದಲ್ಲಿ ಯೋಜನೆಯ ಕರಾರು ಪತ್ರಕ್ಕೆ ಸಹಿ ಮಾಡಲಾಯಿತು.

ಗೇಲ್ ಗ್ಯಾಸ್​ನೊಡನೆ ಬೆಂಗಳೂರು ಪೊಲೀಸ್ ಒಡಂಬಡಿಕೆ

ಸಿಎಆರ್ (ದಕ್ಷಿಣ) ಆಡುಗೋಡಿ ಪೊಲೀಸ್ ವಸತಿಗೃಹ ಸಮುಚ್ಚಯದಲ್ಲಿ 1,600 ವಸತಿ ಗೃಹಗಳಿದ್ದು, 7 ಸಾವಿರ ಸಿಬ್ಬಂದಿ ಹಾಗೂ ಕುಟುಂಬ ವರ್ಗದವರು ವಾಸಿಸುತ್ತಿದ್ದಾರೆ. ಇವರ ಉಪಯೋಗಕ್ಕಾಗಿ ಗೇಲ್ ಗ್ಯಾಸ್ ಲಿಮಿಟೆಡ್​​ ಹಾಗೂ ಹಸಿರುದಳ ಸಂಸ್ಥೆಗಳ ಸಹಯೋಗದೊಂದಿಗೆ ಪೊಲೀಸ್ ವಸತಿಗೃಹ ಆವರಣದಲ್ಲಿ ಜೈವಿಕ ಅನಿಲ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ.

ಇದರೊಂದಿಗೆ ಜೈವಿಕ ಅನಿಲ ಸ್ಥಾವರದಿಂದ ಉತ್ಪಾದಿಸಲಾಗುವ ಜೈವಿಕ ಅನಿಲವನ್ನು ಸಿಎಆರ್ ದಕ್ಷಿಣ ಘಟಕದಲ್ಲಿರುವ ಡಾಗ್ ಕೆನಾಲ್‌ನಲ್ಲಿರುವ ಶ್ವಾನಗಳ ಆಹಾರ ತಯಾರಿಕೆಗೆ ಉಪಯೋಗಿಸಿಕೊಳ್ಳಲಾವುದು. ಜತೆಗೆ ಹೆಚ್ಚುವರಿಯಾಗಿ ಜೈವಿಕ ಅನಿಲ ಉತ್ಪಾದನೆಯಾದಲ್ಲಿ ಸಿಎಆರ್ ದಕ್ಷಿಣ ಘಟಕದಲ್ಲಿರುವ ಕಲ್ಯಾಣ ಮಂಟಪಕ್ಕೂ ಬಳಸಿಕೊಳ್ಳಲಾಗುತ್ತದೆ.

ಈ ಯೋಜನೆಗೆ ಅಗತ್ಯವಿರುವ ಬಂಡವಾಳವನ್ನು ಬೆಂಗಳೂರಿನ ಗೇಲ್ ಗ್ಯಾಸ್ ಲಿಮಿಟೆಡ್​ ಭರಿಸಲಿದ್ದು, 39.20 ಲಕ್ಷ ರೂಪಾಯಿಯನ್ನು ಸಿಎಸ್​ಆರ್​ ಅನುದಾನದಲ್ಲಿ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯನ್ನು ಏಪ್ರಿಲ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ : ಶೀಘ್ರ ಗುಣಮುಖರಾಗಲು ಹೆಚ್​ಡಿಕೆ, ಬಿಎಸ್​ವೈ ಹಾರೈಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.