ETV Bharat / city

ಸುದೀರ್ಘ 8 ಗಂಟೆ ಶಸ್ತ್ರಚಿಕಿತ್ಸೆ: ಹಿಮ್ಮುಖ ಅಂಗ ಹೊಂದಿದ್ದ ರೋಗಿಗೆ ದ್ವಿಪಕ್ಷೀಯ ಶ್ವಾಸಕೋಶ ಕಸಿ ಯಶಸ್ವಿ - ಹಿಮ್ಮುಖ ಅಂಗ ಹೊಂದಿದ್ದ ರೋಗಿ

ಪ್ರೈಮರಿ ಸಿಲಿಯರಿ ಡಿಸ್ಕಿನೇಸಿಯಾ ಅಥವಾ ಸಿಟಸ್ ಇನ್ವರ್ಸಸ್ ಟೊಟಾಲಿಸ್ ಎಂದು ಕರೆಯಲ್ಪಡುವ ಈ ರೋಗಕ್ಕೆ ತುತ್ತಾದ ರೋಗಿಗಳು ಹುಟ್ಟಿನಿಂದಲೇ ಉಸಿರಾಟದ ಸಮಸ್ಯೆ ಮತ್ತು ಪದೇಪದೆ ಶ್ವಾಸನಾಳದ ಸೋಂಕು ಅನುಭವಿಸುತ್ತಾರೆ. ಬ್ರಾಂಕಿಕ್ಟಾಸಿಸ್, ಪುನರಾವರ್ತಿತ ಸೈನಸೈಟಿಸ್‌ನಿಂದ ಬಳಲುವುದು ಹಾಗೂ ವರ್ಷಪೂರ್ತಿ ಮೂಗು ಕಟ್ಟುವಿಕೆ, ದೀರ್ಘಕಾಲದ ಕೆಮ್ಮು ಇರುತ್ತದೆ. ಇದು 30 ಸಾವಿರ ಜನರಲ್ಲಿ ಒಬ್ಬರಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ..

ಸುದೀರ್ಘ 8 ಗಂಟೆಯ ಶಸ್ತ್ರಚಿಕಿತ್ಸೆ: ಹಿಮ್ಮುಖ ಅಂಗ ಹೊಂದಿದ್ದ ರೋಗಿಗೆ ದ್ವಿಪಕ್ಷೀಯ ಶ್ವಾಸಕೋಶ ಕಸಿ ಯಶಸ್ವಿ

author img

By

Published : Apr 6, 2022, 12:34 PM IST

‌ಬೆಂಗಳೂರು : ಕಾರ್ಟಜೆನರ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 25 ವರ್ಷದ ರೋಗಿಗೆ ನಗರದ ಆಸ್ಟರ್ ಆರ್‌ವಿ ಆಸ್ಪತ್ರೆ ವೈದ್ಯರು ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ. ಸುದೀರ್ಘ 8 ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ನಡೆಸಿದ್ದು, ಹಿಮ್ಮುಖ ಅಂಗ ಹೊಂದಿದ್ದ ರೋಗಿಗೆ ದ್ವಿಪಕ್ಷೀಯ ಶ್ವಾಸಕೋಶ ಕಸಿ ಮಾಡಲಾಗಿದೆ.

ಪ್ರೈಮರಿ ಸಿಲಿಯರಿ ಡಿಸ್ಕಿನೇಸಿಯಾ ಅಥವಾ ಸಿಟಸ್ ಇನ್ವರ್ಸಸ್ ಟೊಟಾಲಿಸ್ ಎಂದು ಕರೆಯಲ್ಪಡುವ ಈ ರೋಗಕ್ಕೆ ತುತ್ತಾದ ರೋಗಿಗಳು ಹುಟ್ಟಿನಿಂದಲೇ ಉಸಿರಾಟದ ಸಮಸ್ಯೆ ಮತ್ತು ಪದೇಪದೆ ಶ್ವಾಸನಾಳದ ಸೋಂಕು ಅನುಭವಿಸುತ್ತಾರೆ. ಬ್ರಾಂಕಿಕ್ಟಾಸಿಸ್, ಪುನರಾವರ್ತಿತ ಸೈನಸೈಟಿಸ್‌ನಿಂದ ಬಳಲುವುದು ಹಾಗೂ ವರ್ಷಪೂರ್ತಿ ಮೂಗು ಕಟ್ಟುವಿಕೆ, ದೀರ್ಘಕಾಲದ ಕೆಮ್ಮನ್ನು ಇರುತ್ತದೆ.

ಇಲ್ಲಿ ಅಂಗಗಳು ದೇಹದ ವಿರುದ್ಧ ಬದಿಯಲ್ಲಿ ಬೆಳವಣಿಗೆಗಾಗಿ ಆಂತರಿಕ ಅಂಗಗಳ ದರ್ಪಣ ಪ್ರತಿಬಿಂಬ ಹಿಮ್ಮುಖವಾಗಲು ಕಾರಣವಾಗಿರುತ್ತದೆ. ಇದು 30 ಸಾವಿರ ಜನರಲ್ಲಿ ಒಬ್ಬರಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ. ಶಿವಮೊಗ್ಗ ಮೂಲದ ಶಿವಂ (ಹೆಸರು ಬದಲಾಯಿಸಲಾಗಿದೆ) ಅವರ ಎರಡೂ ಶ್ವಾಸಕೋಶಗಳಲ್ಲಿ ಬ್ರಾಂಕಿಯೆಕ್ಟಾಸಿಸ್ ಹೊಂದಿದ್ದು, ಇದು ಎಡ ಶ್ವಾಸಕೋಶದ ಸಂಪೂರ್ಣ ಹಾನಿಯೊಂದಿಗೆ ಬಲಕ್ಕಿಂತ ಎಡಕ್ಕೆ ಹೆಚ್ಚು ಪರಿಣಾಮ ಬೀರಿತು. ಇದು ಅವರ ಬಲ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡಿತ್ತು.

ಹೀಗಾಗಿ, ಕಳೆದ ತಿಂಗಳು ಆಸ್ಪತ್ರೆಗೆ ಅವರು ದಾಖಲಾಗಿದ್ದರು.‌ ನಂತರದ ದಿನದಲ್ಲಿ ಅದು ಮತ್ತಷ್ಟು ಉಲ್ಬಣಗೊಂಡಿತು.‌ ಇದರಿಂದಾಗಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಈತ ಜೀವ ಉಳಿಸಲು ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ಏಕೈಕ ಆಯ್ಕೆಯಾಗಿತ್ತು ಎನ್ನುತ್ತಾರೆ ಎಂದು ಕಿಮ್ಸ್ ಅಧ್ಯಕ್ಷ ಡಾ.ಸಂದೀಪ್ ಅತ್ತಾವರ.

ಸವಾಲಿನ ಶಸ್ತ್ರಚಿಕಿತ್ಸೆ : ಕಡಿಮೆ ತೂಕ ಮತ್ತು ಕಡಿಮೆ ಪೌಷ್ಠಿಕಾಂಶ ಹೊಂದಿದ್ದ ಕಾರಣ ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವುದು ವೈದ್ಯರಿಗೆ ಸವಾಲಾಗಿತ್ತು. ನಿಧಾನಗತಿಯ ಚೇತರಿಕೆ ಮತ್ತು ನಿರ್ಜಲೀಕರಣದಂತಹ (ಡಿಹೈಡ್ರೆಷನ್) ಸಮಸ್ಯೆಗಳು ಎದುರಾಗುವ ಸಾಧ್ಯತೆಯಿಂದಾಗಿ ನಿಖರವಾದ ನಿರ್ವಹಣೆಯ ಅಗತ್ಯವಿತ್ತು. ಎಡ ಶ್ವಾಸಕೋಶವು ಎದೆಯ ಗೋಡೆಗೆ ತೀವ್ರವಾಗಿ ಅಂಟಿ ಕೊಂಡಿರುವುದರಿಂದ ಹಾನಿಗೊಳಗಾದ ಶ್ವಾಸಕೋಶ ಬಿಡಿಸಲು ಮತ್ತು ಸರಿಪಡಿಸಲು ಹೆಚ್ಚಿನ ರಕ್ತಸ್ರಾವ ಮತ್ತು ಪ್ರಮುಖ ನರಗಳಿಗೆ ಗಾಯಗಳಾಗುವ ಅಪಾಯವಿತ್ತು. ಹೀಗಾಗಿ, ಇದು ದೊಡ್ಡ ಸವಾಲಿನ ಶಸ್ತ್ರಚಿಕಿತ್ಸೆ ಆಗಿತ್ತು.

ಇವರಿಗೆ ಶ್ವಾಸಕೋಶದ ದಾನಿ ಅಗತ್ಯವಾಗಿದ್ದು, ದಾನಿಗಳ ಅಂಗಾಂಗ ಕಸಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಲಾಗಿತ್ತು. ಮರು ದಿನವೇ ದಾನಿಯೊಬ್ಬರ ಶ್ವಾಸಕೋಶ ಲಭ್ಯವಾಯಿತು. ಅಂತೆಯೇ ಮಾರ್ಚ್ ಮೊದಲ ವಾರದಲ್ಲಿ ಸುದೀರ್ಘ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ದಾನಿಯಿಂದ ಅಳವಡಿಸಿದ್ದ ಶ್ವಾಸಕೋಶಗಳಿಂದ ಶಸ್ತ್ರಚಿಕಿತ್ಸೆಯ ನಂತರ ಕೇವಲ 3 ದಿನಗಳಲ್ಲಿ ಚೇತರಿಸಿಕೊಂಡಿದ್ದಾರೆ.

ಅಂದಹಾಗೇ ಈ ಕಾಯಿಲೆಯಿಂದ ಬಳಲುತ್ತಿರುವವರು ಸಾಮಾನ್ಯ ಜೀವನ ನಡೆಸಲು ಸಮರ್ಥರಾಗಿದ್ದರೂ ಸಹ ಶ್ವಾಸಕೋಶದ ಸಮಸ್ಯೆಯಿಂದಾಗಿ ಶ್ವಾಸನಾಳಗಳಿಂದ ದ್ರವ ಮತ್ತು ಲೋಳೆಯನ್ನು ಪರಿಣಾಮಕಾರಿಯಾಗಿ ತೆರವುಗೊಳಿಸಲು ಸಾಧ್ಯವಾಗುವುದಿಲ್ಲ. ಇದು ಬ್ಯಾಕ್ಟೀರಿಯಾವನ್ನು ನಿರ್ಮಿಸಲು ಮತ್ತು ಶೇಖರಣೆಗೆ ಕಾರಣವಾಗುತ್ತದೆ.

ಕಡಿಮೆ ಹಸಿವು, ತೂಕ ಕಳೆದುಕೊಳ್ಳುವಿಕೆ ಮತ್ತು ಪದೇಪದೆ ಆಸ್ಪತ್ರೆಗೆ ದಾಖಲಾಗುವಂತೆ ಮಾಡುತ್ತದೆ. ಆಮ್ಲಜನಕದ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಜತೆಗೆ ಜೀವಕ್ಕೂ ಅಪಾಯವನ್ನುಂಟು ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಶ್ವಾಸಕೋಶದ ಕಸಿ ಮಾತ್ರ ಆಶಾಕಿರಣವಾಗಿರಬಹುದು ಎಂದು ಆಸ್ಟರ್ ಆರ್‌ವಿ ಆಸ್ಪತ್ರೆಯ ಇಂಟರ್‌ವೆನ್ಷನಲ್ ಪಲ್ಮನಾಲಜಿ ಮತ್ತು ಶ್ವಾಸಕೋಶ ಕಸಿ ವಿಭಾಗದ ಮುಖ್ಯ ತಜ್ಞ ಡಾ.ಪವನ್ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ನಾಪತ್ತೆಯಾಗಿದ್ದ ಶಿಶು 21 ದಿನಗಳ ನಂತರ ಪತ್ತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.