ETV Bharat / city

ಗಾಂಜಾ ಚಟಕ್ಕೆ ಹಣ ಹೊಂದಿಸಲು ಬೈಕ್ ಕಳ್ಳತನ‌‌: ಮೂವರು ಯುವಕರು ಅರೆಸ್ಟ್

author img

By

Published : Jun 17, 2022, 1:52 PM IST

ಬೈಕ್​​ಗಳನ್ನು ಕದ್ದು ಸೇಲ್‌ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ಮೂವರು ಯುವಕರನ್ನು ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.

Three Youths Arrested in Bengaluru
ಬಂಧಿತ ಆರೋಪಿಗಳು

ಬೆಂಗಳೂರು: ಗಾಂಜಾ, ಎಣ್ಣೆ ಶೋಕಿಗೆ ಬಿದ್ದು ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಬೈಕ್ ಕಳ್ಳತನಕ್ಕೆ ಇಳಿದಿದ್ದ ಮೂವರು ಯುವಕರನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ನಿತೀನ್, ಮಾರಪ್ಪ ಮತ್ತು ಮನೋಜ್ ಬಂಧಿತ ಆರೋಪಿಗಳು.

ಇವರು ಕಂಡ ಕಂಡ ಕಡೆ ಸಿಕ್ಕ ಬೈಕ್ ಕದ್ದು ಬಂದಷ್ಟು ಹಣಕ್ಕೆ ಅವುಗಳನ್ನ ಮಾರಾಟ‌ ಮಾಡುತ್ತಿದ್ದರು. ಒಂದಿಷ್ಟು ಅಡ್ವಾನ್ಸ್ ಪಡೆದು ಡಾಕ್ಯುಮೆಂಟ್ ಕೊಟ್ಟ ಮೇಲೆ ಉಳಿದ ಹಣ ಕೊಡಿ ಎಂದು ಎಸ್ಕೇಪ್ ಆಗುತ್ತಿದ್ದರಂತೆ. ಆರೋಪಿಗಳು ಇನ್ನೂ 21 ವರ್ಷದವರಾಗಿದ್ದಾರೆ. ಚಿಕ್ಕ ವಯಸ್ಸಿಗೆ ಗಾಂಜಾ ಚಟಕ್ಕೆ ದಾಸರಾಗಿದ್ದ ಇವರು ಮೊದಲಿಗೆ ಸಣ್ಣಪುಟ್ಟ ಪಿಕ್ ಪಾಕೆಟ್ ಮಾಡುತ್ತಿದ್ದರಂತೆ.

Three Youths Arrested in Bengaluru
ಆರೋಪಿಗಳಿಂದ ಜಪ್ತಿ ಮಾಡಲಾದ ಬೈಕ್​​ಗಳು

ಶೋಕಿ ಹೆಚ್ಚಾದಂತೆ ಹಣ ಕೂಡ ಹೆಚ್ಚು ಖರ್ಚಾಗುತ್ತಿತ್ತು. ಇದಕ್ಕೆ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಬೈಕ್ ಕಳ್ಳತನಕ್ಕೆ ಇಳಿದಿದ್ದರು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳಿಂದ 14 ಲಕ್ಷ ರೂ.ಮೌಲ್ಯದ 21 ಬೈಕ್​​ಗಳನ್ನ‌ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯನಗರ: 2.79 ಲಕ್ಷ ರೂ. ಹಣವಿದ್ದ ಬ್ಯಾಗ್​​ ಎಗರಿಸಿದ ಖದೀಮರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.