ಬೆಂಗಳೂರು: ಮೈಸೂರು ರಸ್ತೆ ಮಾರ್ಗದಿಂದ ಕೆ.ಆರ್.ಮಾರುಕಟ್ಟೆ, ಟೌನ್‌ಹಾಲ್ ಕಡೆಗೆ ಸಂಪರ್ಕ ಕಲ್ಪಿಸುವ ಬಿಜಿಎಸ್ ಮೇಲ್ಸೇತುವೆಯ ಪಾರ್ಶ್ವಭಾಗ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಗುತ್ತಿಗೆದಾರರಿಗೆ ನೀಡಿದ್ದ ಗಡುವು ಮೀರಿದ್ದು, ಇನ್ನೂ ಹತ್ತು ದಿನ ವಿಳಂಬವಾಗಲಿದೆ.
ಸಾವಿರಾರು ವಾಹನಗಳು ಈ ಮೇಲ್ಸೇತುವೆಯಲ್ಲಿ ಓಡಾಡುತ್ತಿದ್ದು, ಇದೀಗ ದುರಸ್ಥಿ ಹಿನ್ನಲೆಯಲ್ಲಿ ಒಂದು ಭಾಗ ಮುಚ್ಚಿರುವುದರಿಂದ ಬೆಳಗ್ಗೆ ಹಾಗೂ ಮಧ್ಯಾಹ್ನದ ವೇಳೆ ಸಂಚಾರ ದಟ್ಟಣೆಯಾಗುತ್ತಿದೆ. ಜ.16 ರಂದೇ ಗುತ್ತಿಗೆದಾರರಿಗೆ ಕೊಟ್ಟಿದ್ದ ಗಡುವು ಮುಕ್ತಾಯವಾಗಿದ್ದು, ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಮುಂದಿನ ಒಂದು ವಾರ ಅಥವಾ ಹತ್ತು ದಿನದೊಳಗೆ ಸಂಚಾರಕ್ಕೆ ಮುಕ್ತ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಎರಡು ಹಂತದಲ್ಲಿ ದುರಸ್ಥಿ ಕಾರ್ಯ ನಡೆದಿದ್ದು, ಒಂದು ಹಂತ ಈಗಾಗಲೇ ಮುಗಿದಿದೆ. ಮೈಸೂರು ರಸ್ತೆಯಿಂದ ಮಾರುಕಟ್ಟೆಗೆ ಸಂಪರ್ಕಿಸುವ ರಸ್ತೆಯ ವರೆಗೆ ಕಾಮಗಾರಿ ಮುಕ್ತಾಯವಾಗಿದ್ದು, ಮುಂದಿನ ಕೆಲಸ ಪ್ರಗತಿಯಲ್ಲಿದೆ.