ಬೆಂಗಳೂರು: ಜನವಸತಿ ಪ್ರದೇಶದಲ್ಲಿ ಬಾರ್ ತೆರೆಯಲು ಮುಂದಾಗಿರುವುದನ್ನ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳೆ ಸೇರಿ ಇಬ್ಬರು ಪ್ರತಿಭಟನಾಕಾರರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೆಗ್ಗನಹಳ್ಳಿ ವಾರ್ಡ್ನ ಗಜಾನನ ನಗರದಲ್ಲಿ ಈ ಘಟನೆ ನಡೆದಿದೆ.
ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆಯುವುದರ ಜೊತೆಗೆ ಕೋರ್ಟ್ನಲ್ಲಿ ಅನುಮತಿ ಪಡೆದು ಕಳೆದ 20 ದಿನಗಳ ಹಿಂದೆ ಗಜಾನನ ನಗರದಲ್ಲಿ ಸಪ್ತಗಿರಿ ಸ್ಪಿರಿಟ್ ಹೆಸರಿನಲ್ಲಿ ಬಾರ್ ಓಪನ್ ಮಾಡಲಾಗಿದೆ. ಶಾಪ್ ಓಪನ್ ಆಗುತ್ತಿದ್ದಂತೆ ಸ್ಥಳೀಯರು ಪ್ರತಿಭಟಿಸಿದ್ದರು. ವಸತಿ ಪ್ರದೇಶದಲ್ಲಿ ಮಧ್ಯದಂಗಡಿ ತೆರೆಯುವುದು ತರವಲ್ಲ. ಸಮೀಪದಲ್ಲೇ ಶಾಲೆ ಹಾಗೂ ದೇವಸ್ಥಾನವಿದೆ. ಯಾವುದೇ ರೀತಿಯಿಂದಲೂ ಬಾರ್ ತೆರೆಯಬೇಡಿ ಎಂದು ಒತ್ತಾಯಿಸಿದ್ದರು.
ಕೆಲ ದಿನಗಳ ಕಾಲ ಬಾರ್ ಬಂದ್ ಆಗಿತು. ಆದರೆ ಕಳೆದ ಎರಡು ದಿನಗಳ ಹಿಂದೆ ಮತ್ತೆ ಬಾರ್ ಓಪನ್ ಮಾಡಲಾಗಿದೆ. ಇದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಶಾಪ್ ಮುಂದೆ ಕುಳಿತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಛಾಟಿ ಬೀಸಿದರು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ಸಹ ನಡೆಯಿತು. ಇದೇ ವೇಳೆನಾಗೇಶ್ ಹಾಗೂ ರೂಪಾ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಮಧ್ಯ ಪ್ರವೇಶಿಸಿದ ಪೊಲೀಸರು ಅನಾಹುತ ತಡೆದರು.