ETV Bharat / city

ಬೆಂಗಳೂರು: ಆಟೋದಲ್ಲಿ ಸುತ್ತಾಡಿ ಸುಲಿಗೆ; ಇಬ್ಬರು ದರೋಡೆಕೋರರ ಬಂಧನ - bengaluru theft case, two accused arrested

ಆಟೋದಲ್ಲಿ ಬಂದು ಸಾವರ್ಜನಿಕರ ಮೊಬೈಲ್ , ಚಿನ್ನಾಭರಣಗಳನ್ನು ಎಗರಿಸುತ್ತಿದ್ದ ಇಬ್ಬರು ದರೋಡೆಕೋರರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

bengaluru-theft-case-two-accused-arrested
ಆಟೋದಲ್ಲಿ ಸುತ್ತಾಡಿ ಸುಲಿಗೆ: ಇಬ್ಬರು ದರೋಡೆಕೋರರ ಬಂಧನ
author img

By

Published : Mar 21, 2022, 8:15 PM IST

ಬೆಂಗಳೂರು: ಆಟೋದಲ್ಲಿ ಬಂದು ಸಾರ್ವಜನಿಕರ ಮೊಬೈಲ್ ಮತ್ತು ಚಿನ್ನಾಭರಣ ದೋಚುತ್ತಿದ್ದ ಇಬ್ಬರು ದರೋಡೆಕೋರರನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹಮ್ಮದ್ ಅರ್ಬಾಜ್ (24) ಮತ್ತು ಥಣಿಸಂದ್ರದ ಸೈಯದ್ ಅರ್ಬಾಜ್ (24) ಎಂದು ಗುರುತಿಸಲಾಗಿದೆ.

ಈ ಆರೋಪಿಗಳಿಂದ ಸುಮಾರು 2.15 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 5ರ ರಾತ್ರಿ 8.15ರ ಸುಮಾರಿಗೆ ಯಲಹಂಕ ಸಮೀಪದ ಅಮರಜ್ಯೋತಿ ಲೇಔಟ್‌ನ ಮುಖ್ಯರಸ್ತೆಯ ಬಳಿ ಆಟೋದಲ್ಲಿ ಬಂದ ದರೋಡೆಕೋರರು ಅಜಿತ್ ಎಂಬುವವರ ಕತ್ತಿನಲ್ಲಿದ್ದ ಬೆಳ್ಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಆರೋಪಿಗಳ ಬಂಧನದಿಂದ ಹಲವು ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ.

ಇದನ್ನೂ ಓದಿ: ಪಂಜಾಬ್​ ಸಿಎಂ ಸೇರಿ ಎಲ್ಲ ಸಚಿವರ ಮೇಲೂ ಕ್ರಿಮಿನಲ್ ಕೇಸ್​, 9 ಮಂತ್ರಿಗಳು ಕೋಟ್ಯಧಿಪತಿಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.