ETV Bharat / city

ಬೆಂಗಳೂರು ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ತು ಬ್ರಿಟಿಷರ ಕಾಲದ ಸೀಮೆಎಣ್ಣೆ ಚಾಲಿತ ಫ್ಯಾನ್!

ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ತತ್ವವನ್ನು ಆಧರಿಸಿ ಸ್ಟೀಮ್ ಫ್ಯಾನ್ ಕಾರ್ಯ ನಿರ್ವಹಿಸುತ್ತದೆ. ಬ್ರಿಟಿಷರ ಕಾಲದ ಈ ಫ್ಯಾನ್ ಬೆಂಗಳೂರಿನಲ್ಲಿ ಕಳ್ಳರಿಂದ ದೊರೆತಿರುವುದು ಕುತೂಹಲ ಮೂಡಿಸಿದೆ.

Bengaluru police recovered antique items miscreants
ಪತ್ತೆಯಾದ ಬ್ರಿಟಿಷರ ಕಾಲದ ಸ್ಟೀಮ್ ಫ್ಯಾನ್: ಪೊಲೀಸರಲ್ಲಿ ಹೆಚ್ಚಿದ ಕುತೂಹಲ
author img

By

Published : Aug 10, 2021, 2:13 PM IST

ಬೆಂಗಳೂರು: ಸಿಸಿಬಿ ಪೊಲೀಸರು ಬೆಂಗಳೂರಿನ ಬಾಗಲಗುಂಟೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ತಿಮಿಂಗಿಲದ ವಾಂತಿ (ಆ್ಯಂಬರ್​ಗ್ರಿಸ್) ಸೇರಿದಂತೆ ಹಲವಾರು ಅತ್ಯಪರೂಪದ ಪುರಾತನ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಹೀಗೆ ಜಪ್ತಿಯಾದ ವಸ್ತುಗಳ ಪೈಕಿ ಕುತೂಹಲಕ್ಕೆ ಕಾರಣವಾಗಿರುವ ವಸ್ತು ಅಂದ್ರೆ ಅದು ಅತ್ಯಂತ ಹಳೆಯ ಕಾಲದ ಸ್ಟೀಮ್ ಫ್ಯಾನ್.

ಪತ್ತೆಯಾದ ಬ್ರಿಟಿಷರ ಕಾಲದ ಸ್ಟೀಮ್ ಫ್ಯಾನ್

ಈ ಸ್ಟೀಮ್ ಫ್ಯಾನಿನ ಮೇಲೆ ಈಸ್ಟ್ ಇಂಡಿಯಾ ಕಂಪನಿ 1818 ಎಂದು ನಮೂದಿಸಲಾಗಿದೆ. ಇದು ಸೀಮೆಎಣ್ಣೆ ಚಾಲಿತ ಎಂದು ಪೊಲೀಸ್ ಕಮೀಷನರ್ ಕಮಲ್ ಪಂಥ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಇದರ ಮೌಲ್ಯ ಹಾಗು ಇನ್ನಿತರ ವಿಶೇಷತೆಗಳನ್ನು ಪೊಲೀಸರು ಪತ್ತೆಹಚ್ಚಬೇಕಿದೆ.

ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ (Heat energy to Mechanical Energy) ಪರಿವರ್ತಿಸುವ ತತ್ವವನ್ನು ಈ ಸ್ಟೀಮ್ ಫ್ಯಾನ್ ಹೊಂದಿದೆ. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಥರ್ಮೋಡೈನಾಮಿಕ್ಸ್ ( Thermodynamics) ಎಂದು ಕರೆಯಲಾಗುತ್ತದೆ. ಎಷ್ಟು ಉಷ್ಣ ಶಕ್ತಿ ಉತ್ಪಾದನೆಯಾಗುತ್ತದೆಯೋ ಅಷ್ಟು ವೇಗವಾಗಿ ಫ್ಯಾನ್ ತಿರುಗುವ ಸಾಮರ್ಥ್ಯ ಹೊಂದಿರುತ್ತದೆ.

ಇದಾದ ನಂತರ ಬಂದ ಸ್ಟರ್ಲಿಂಗ್ ಎಂಜಿನ್​ಗಳನ್ನು (Stirling engine) ಸ್ಟೀಮ್ ಎಂಜಿನ್​ಗಳಿಗೆ ಪರ್ಯಾಯವಾಗಿ ಬಳಸಲಾಯಿತು. ಈ ಕಾರಣದಿಂದ ಕಾಲಕ್ರಮೇಣ ಸ್ಟೀಮ್ ಎಂಜಿನ್​​ಗಳ ಅಡಿಯಲ್ಲಿ ಬರುವ ಸ್ಟೀಮ್ ಫ್ಯಾನ್​​ಗಳನ್ನು ಅಲ್ಲಲ್ಲಿ ಮಾತ್ರ ಬಳಸಲಾಯಿತು. ಸ್ಟೆರ್ಲಿಂಗ್ ಎಂಜಿನ್​ಗಳನ್ನು 1816ರಲ್ಲಿ ಸ್ಕಾಟಿಷ್ ವಿಜ್ಞಾನಿ ರಾಬರ್ಟ್​ ಸ್ಟರ್ಲಿಂಗ್ ಎಂಬಾತ ಅನ್ವೇಷಿಸಿದ್ದ. ಈಗ ಪತ್ತೆಯಾಗಿರುವ ಫ್ಯಾನ್ ಮೇಲೆ ಈಸ್ಟ್ ಇಂಡಿಯಾ ಕಂಪನಿ 1818 ಎಂದು ಉಲ್ಲೇಖಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಈ ಬ್ರಿಟಿಷ್ ಕಾಲದ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪಿಗಳು ಯಾರಿಗೆ ಮಾರಾಟ ಮಾಡಲು ಯತ್ನಿಸಿದ್ದರು?, ಅಥವಾ ಅದನ್ನು ಎಲ್ಲಿಂದ ತರಿಸಿಕೊಂಡಿದ್ದರು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 80 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ, ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಾಲದ ವಸ್ತುಗಳ ಕದ್ದು ಮಾರಾಟ: ಬೆಂಗಳೂರಿನಲ್ಲಿ ಐವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.