ETV Bharat / city

ಯೋಗ್ಯತೆ ಇದ್ರೆ ಪಕ್ಷದಲ್ಲಿರಿ, ಇಲ್ಲ ಪಕ್ಷದಿಂದ ತೊಲಗಿ: ಹಳ್ಳಿ ಹಕ್ಕಿ ವಿರುದ್ಧ ಗುಡುಗಿದ ಬಿಡಿಎ ಅಧ್ಯಕ್ಷ - bjp

ನಮ್ಮ ಪಕ್ಷದಲ್ಲಿದ್ದುಕೊಂಡು ಪಕ್ಷ ಮತ್ತು ಸರ್ಕಾರದ ವಿರುದ್ಧ ಹೇಳಿಕೆ ನೀಡುವುದನ್ನು ಬಿಡಿ. ಇಲ್ಲವಾದರೆ, ಪಕ್ಷದಿಂದ ಹೊರಹೋಗಿ ಎಂದು ಹೆಚ್.ವಿಶ್ವನಾಥ್​ಗೆ ಎಸ್.ಆರ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ.

vishwanath
vishwanath
author img

By

Published : May 6, 2021, 4:04 AM IST

Updated : May 6, 2021, 4:54 AM IST

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿರುವ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ಧ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಸ್.ಆರ್.ವಿಶ್ವನಾಥ್, ನಮ್ಮ ಪಕ್ಷದಲ್ಲಿದ್ದುಕೊಂಡು ಪಕ್ಷ ಮತ್ತು ಸರ್ಕಾರದ ವಿರುದ್ಧ ಹೇಳಿಕೆ ನೀಡುವುದನ್ನು ಬಿಡಿ. ಇಲ್ಲವಾದರೆ, ಪಕ್ಷದಿಂದ ಹೊರಹೋಗಿ ಎಂದಿದ್ದಾರೆ.

ಹಳ್ಳಿ ಹಕ್ಕಿ ವಿರುದ್ಧ ಗುಡುಗಿದ ಬಿಡಿಎ ಅಧ್ಯಕ್ಷ
ಬೇರೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಂದ ನಿಮಗೆ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಪಕ್ಷ ಹೇಳಿದ್ದರೂ ಹಠಕ್ಕೆ ಬಿದ್ದು ಸ್ಪರ್ಧಿಸಿ ಹೀನಾಯವಾಗಿ ಸೋತಿರಿ. ಸೋಲನುಭವಿಸಿದ ನಿಮಗೆ ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಅಗತ್ಯವಿರಲಿಲ್ಲ. ಕರೆತಂದು ಟಿಕೆಟ್ ಕೊಟ್ಟು ಗೌರವ ನೀಡಿ ಎಂ.ಎಲ್.ಸಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧವೇ ಮಾತನಾಡುವ ಮೂಲಕ ಪಕ್ಷದ್ರೋಹ ಮಾಡುತ್ತಿದ್ದೀರಿ. ನಿಮ್ಮ ಅಗತ್ಯ ನಮ್ಮ ಪಕ್ಷಕ್ಕಿಲ್ಲ. ಉಂಡ ಮನೆಗೇ ದ್ರೋಹ ಬಗೆಯುವ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯವಾಗಿದೆ. ನೀವು ಒಂದು ರೀತಿಯಲ್ಲಿ ಕೊರೊನಾ ವೈರಸ್​ಗಿಂತಲೂ ಅಪಾಯಕಾರಿ ಎಂದು ಎಸ್.ಆರ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.ನೀವು ಚುನಾವಣೆ ರಾಜಕೀಯದಲ್ಲಿ ಸವಕಲು ನಾಣ್ಯವಾಗಿದ್ದೀರಿ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರು ಇಲ್ಲದೇ ಇದ್ದಿದ್ದರೆ ನೀವು ರಾಜಕೀಯ ಸನ್ಯಾಸತ್ವ ಪಡೆಯುತ್ತಿದ್ದಿರಿ ಎಂಬುದನ್ನು ನೆನಪು ಮಾಡಿಕೊಳ್ಳಿ. ಚುನಾವಣೆಯಲ್ಲಿ ಸೋತ ನಿಮಗೆ ವಿಧಾನಪರಿಷತ್ ಸ್ಥಾನ ಸಿಕ್ಕಿರುವುದೇ ದೊಡ್ಡದು. ಆದರೆ, ಸಚಿವ ಸ್ಥಾನ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ನೀವು ಪಕ್ಷದ ವಿರುದ್ಧವೇ ಮನಸ್ಸಿಗೆ ಬಂದಂತೆ ಟೀಕೆ ಮಾಡುತ್ತಿರುವುದನ್ನು ಗಮನಿಸಿದರೆ ನಿಮ್ಮ ಮನಸ್ಥಿತಿ ಯಾವ ಹಂತದಲ್ಲಿದೆ ಎಂಬುದು ರಾಜ್ಯದ ಜನತೆಗೆ ತಿಳಿಯುತ್ತಿದೆ ಎಂದು ಎಸ್.ಆರ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ಕಾರಕ್ಕೆ ಮಾರ್ಗದರ್ಶನ, ಸಲಹೆ ನೀಡಲು ನಿಮ್ಮ ಹಿರಿತನವನ್ನು ಬಳಸಿ. ಅದನ್ನು ಬಿಟ್ಟು ನಾನೇ ಮೇಧಾವಿ ಎಂದು ಫೋಸ್ ಕೊಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಾ ಬರುತ್ತಿರುವ ನಿಮ್ಮ ಧೋರಣೆಯನ್ನು ಗಮನಿಸಿದರೆ ನೀವೊಬ್ಬ ಪ್ರಚಾರ ಪ್ರಿಯ ಮತ್ತು ಪೇಪರ್ ಟೈಗರ್ ಎಂಬುದು ಸಾಬೀತಾಗುತ್ತಿದೆ. ಇದೇ ರೀತಿ ಹೇಳಿಕೆ ನೀಡುತ್ತಾ ಹೋದರೆ ನಿಮ್ಮ ಅಸ್ತಿತ್ವ ಮತ್ತಷ್ಟು ಅವನತಿಗೆ ತಳ್ಳಲ್ಪಡುತ್ತದೆ ಎಂಬುದನ್ನು ಮೊದಲು ಅರಿಯಿರಿ ಎಂದು ಕಿಡಿ ಕಾರಿದ್ದಾರೆ.

Last Updated : May 6, 2021, 4:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.